AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಲಿತ್ ಮೋದಿ ಹಿಂದಿ ಬಿಗ್ ಬಾಸ್​ಗೆ ಎಂಟ್ರಿ? ವೈರಲ್ ಆಯ್ತು ಸುದ್ದಿ

ರಿಯಾಲಿಟಿ ಶೋ ಬಿಗ್ ಬಾಸ್ 20 ಶೀಘ್ರದಲ್ಲೇ ಆರಂಭವಾಗಲಿದೆ. ಈ ಬಾರಿ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಸಲ್ಮಾನ್ ಖಾನ್ ನಿರೂಪಣೆಯ ಈ ಶೋನಲ್ಲಿ ಸುಶ್ಮಿತಾ ಸೇನ್ ಮಾಜಿ ಗೆಳೆಯ ಲಲಿತ್ ಮೋದಿ ಭಾಗವಹಿಸುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಲಲಿತ್ ಮೋದಿ ಹಿಂದಿ ಬಿಗ್ ಬಾಸ್​ಗೆ ಎಂಟ್ರಿ? ವೈರಲ್ ಆಯ್ತು ಸುದ್ದಿ
ಲಲಿತ್​-ಸುಷ್ಮಿತಾ
ರಾಜೇಶ್ ದುಗ್ಗುಮನೆ
|

Updated on:Aug 15, 2026 | 12:05 PM

Share

ಮುಖ್ಯಾಂಶಗಳು

  • ಬಿಗ್ ಬಾಸ್ 20 ಮನೆಗೆ ಮಾಜಿ IPL ಬಾಸ್ ಎಂಟ್ರಿ?
  • ಸುಶ್ಮಿತಾ ಸೇನ್ ಜೊತೆಗಿನ ಲವ್ ಸ್ಟೋರಿ ಮರುಕಳಿಸಿತೇ?
  • ಸೆಪ್ಟೆಂಬರ್ 6ರಿಂದ ರಿಯಾಲಿಟಿ ಶೋ ಧಮಾಕಾ!

ಸಲ್ಮಾನ್ ಖಾನ್ ನಡೆಸಿಕೊಡುವ ‘ಹಿಂದಿ ಬಿಗ್ ಬಾಸ್ ಸೀಸನ್ 20’ರ (Bigg Boss) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಿಂದ ಈ ಶೋ ಪ್ರಸಾರವಾಗಲಿದೆ. ಸ್ಪರ್ಧಿಗಳ ಪಟ್ಟಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈಗ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಹೆಸರು ಮುನ್ನೆಲೆಗೆ ಬಂದಿದೆ. ಅವರು ಶೋಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಆದರೆ, ಇದನ್ನು ಅವರೇ ಅಲ್ಲಗಳೆದಿದ್ದಾರೆ.

ಬಾಲಿವುಡ್ ಬಬಲ್ ವರದಿಯ ಪ್ರಕಾರ ಬಿಗ್ ಬಾಸ್ ತಂಡ ಲಲಿತ್ ಮೋದಿ ಅವರನ್ನು ಸಂಪರ್ಕಿಸಿದೆ. ಆದರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಲಲಿತ್ ಮೋದಿ ಹಾಗೂ ವಾಹಿನಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ಅವರು ಮನೆಗೆ ಬಂದರೆ ದೊಡ್ಡ ಹಂಗಾಮ ಸೃಷ್ಟಿಯಾಗಲಿದೆ. ಐಪಿಎಲ್​ನಲ್ಲಿ ನಡೆದ ಅನೇಕ ಕರ್ಮಕಾಂಡಗಳ ಬಗ್ಗೆ ಸಂದರ್ಶನಗಳಲ್ಲಿ ಓಪನ್ ಆಗಿ ಮಾತನಾಡಿದ್ದು ಇದೆ. ಅವರು ಬಿಗ್ ಬಾಸ್​ಗೆ ಬಂದರೆ ಮತ್ತಷ್ಟು ವಿಷಯಗಳು ರಿವೀಲ್ ಆಗುವ ನಿರೀಕ್ಷೆ ಇತ್ತು

ಲಲಿತ್ ಮೋದಿ ಅವರು ಕ್ರಿಕೆಟ್ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ನಟಿ ಸುಶ್ಮಿತಾ ಸೇನ್ ಜೊತೆಗಿನ ಲವ್ ಸ್ಟೋರಿ ಸಾಕಷ್ಟು ಸದ್ದು ಮಾಡಿತ್ತು. 2022 ರ ಜುಲೈನಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದರು. ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆ ಸಂದರ್ಶನದಲ್ಲೂ ಅವರು ಈ ಬಗ್ಗೆ ಮಾತನಾಡಿದ್ದರು. ಸುಶ್ಮಿತಾ ನನ್ನ ಜೀವನದಲ್ಲಿ ತುಂಬಾ ವಿಶೇಷ ವ್ಯಕ್ತಿ ಎಂದು ಹೇಳಿದ್ದರು. ನಮ್ಮಿಬ್ಬರ ದೇಶಗಳು ಬೇರೆ ಬೇರೆಯಾಗಿದ್ದವು. ನಾನು ಲಂಡನ್‌ನಲ್ಲಿದ್ದೆ, ಸುಶ್ಮಿತಾ ಭಾರತದಲ್ಲಿದ್ದರು. ಈ ಸುದೀರ್ಘ ದೂರದಿಂದಾಗಿ ನಾವಿಬ್ಬರು ದೂರವಾಗಬೇಕಾಯಿತು ಎಂದಿದ್ದರು.

ಇದನ್ನೂ ಓದಿ: ‘ಜಡ್ಜ್​ ಆಗಿ ತಪ್ಪುಮಾಡಿದೆ’; ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಟ್ರೋಲ್ಸ್​ನಿಂದ ಸಂಗೀತಾ ಶೃಂಗೇರಿ ಕಂಗಾಲು

ಸುಶ್ಮಿತಾ ಅವರನ್ನು ‘ಗೋಲ್ಡ್ ಡಿಗ್ಗರ್’ ಎಂದು ಕರೆದಾಗ ಲಲಿತ್ ಮೋದಿ ಕೌಂಟರ್ ಕೊಟ್ಟಿದ್ದರು. ಸುಶ್ಮಿತಾ ಸ್ವತಂತ್ರ ಮಹಿಳೆ ಎಂದು ಬೆಂಬಲವಾಗಿ ನಿಂತಿದ್ದರು. ಅನೇಕ ಬಾರಿ ಅವರೇ ಬಿಲ್ ಪಾವತಿಸುತ್ತಿದ್ದರು ಎಂದಿದ್ದರು. ಆದರೆ, ಇದು ಫೇಕ್ ನ್ಯೂಸ್ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:56 am, Sat, 15 August 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More