ಮತ್ತೆ ಸಂಗೀತಾ ಶೃಂಗೇರಿ-ತುಕಾಲಿ ಸಂತೋಷ್​ ಭೇಟಿ ಆಗೋದೇ ಇಲ್ವಾ?

| Updated By: ರಾಜೇಶ್ ದುಗ್ಗುಮನೆ

Updated on: Jan 30, 2024 | 6:29 AM

ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನವೂ ತುಕಾಲಿ ಸಂತೋಷ್​ ಅವರು ವರ್ತೂರು ಸಂತೋಷ್​ ಜೊತೆ ಆಪ್ತವಾಗಿದ್ದರು. ಆದರೆ ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್​ ಅವರ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದಿತ್ತು. ತುಕಾಲಿ ಸಂತೋಷ್​ ಅವರನ್ನು ಮತ್ತೆ ಭೇಟಿ ಮಾಡುವುದಿಲ್ಲ ಎಂದು ಸಂಗೀತಾ ಹೇಳಿದ್ದರು.

ಮತ್ತೆ ಸಂಗೀತಾ ಶೃಂಗೇರಿ-ತುಕಾಲಿ ಸಂತೋಷ್​ ಭೇಟಿ ಆಗೋದೇ ಇಲ್ವಾ?
ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್​
Follow us on

ಬಿಗ್​ ಬಾಸ್​ ಮನೆಯಲ್ಲಿ ಜಗಳಗಳು ಸಹಜ. ತುಕಾಲಿ ಸಂತೋಷ್​ ಮತ್ತು ಸಂಗೀತಾ ಶೃಂಗೇರಿ (Sangeetha Sringeri) ನಡುವೆಯೂ ಹಲವು ಬಾರಿ ಜಗಳ ಆಗಿದೆ. ಅಲ್ಲದೇ, ತುಕಾಲಿ ಸಂತೋಷ್​ ಅವರನ್ನು ಬಿಗ್​ ಬಾಸ್ ​(Bigg Boss Kannada) ಮನೆಯ ಹೊರಗೆ ಭೇಟಿ ಆಗುವುದೇ ಇಲ್ಲ ಎಂದು ಸಂಗೀತಾ ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವಿನ ಮನಸ್ತಾಪ ಅಂತ್ಯ ಆಯಿತು. ಈಗ ಬಿಗ್​ ಬಾಸ್​ ಮುಕ್ತಾಯ ಆಗಿದೆ. ಎಲ್ಲ ಕ್ಷಣಗಳನ್ನು ಸ್ಪರ್ಧಿಗಳ ಮೆಲುಕು ಹಾಕುತ್ತಿದ್ದಾರೆ. ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್​ (Tukali Santhosh) ಅವರು ಮತ್ತೊಮ್ಮೆ ಭೇಟಿ ಆಗುತ್ತಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆ ವೀಕ್ಷಕರ ಮನದಲ್ಲಿದೆ. ಅದಕ್ಕೆ ತುಕಾಲಿ ಸಂತೋಷ್​ ಉತ್ತರ ನೀಡಿದ್ದಾರೆ.

‘ಖಂಡಿತಾ ನಾವು ಮೀಟ್​ ಮಾಡುತ್ತೇವೆ. ಅದು ಆಟ ಮಾತ್ರ. ಆದರೆ ಇದು ಜೀವನ ಪಾಠ. ಆಟದಲ್ಲಿ ಇಲ್ಲದೇ ಇರುವುದು ಜೀವನ ಪಾಠದಲ್ಲಿ ಇರುತ್ತದೆ. ಸಂಗೀತಾ ಅವರು ತುಂಬ ಸ್ಟ್ರಾಂಗ್​ ಲೇಡಿ. ಅವರು ಗೆದ್ದಿದ್ದರೂ ನನಗೆ ಖುಷಿ ಆಗುತ್ತಿತ್ತು. ಟ್ರೋಫಿಗೆ ಅವರು ಅರ್ಹರು. ಅವರಿಗೆ ಒಳ್ಳೆಯದಾಗಲಿ. ಬದುಕಿನಲ್ಲಿ ತುಂಬ ಕಷ್ಟಪಟ್ಟಿದ್ದಾರೆ. ಅತ್ತಿದ್ದಾರೆ, ನಕ್ಕಿದ್ದಾರೆ. ನಿನ್ನ ಕಾಮಿಡಿಗೆ ನಗು ಬರಲ್ಲ ಅನ್ನುತ್ತಿದ್ದರು. ಆದರೆ ನಂತರ ನಕ್ಕಿದ್ದಾರೆ. ಅವರು ಖುಷಿಯಾಗಿರಲಿ’ ಎಂದು ತುಕಾಲಿ ಸಂತೋಷ್​ ಹೇಳಿದ್ದಾರೆ.

ಇದನ್ನೂ ಓದಿ: ‘ಯಾರು ಗೆಲ್ಲಬೇಕು ಅನ್ನೋದು ಫಿಕ್ಸ್​ ಆಗಿತ್ತು’: ಬಿಗ್ ಬಾಸ್​ ಮೇಲೆ ದೊಡ್ಡ ಆರೋಪ

ಬಿಗ್​ ಬಾಸ್​ ಮನೆಯಲ್ಲಿ ಇದ್ದಷ್ಟು ದಿನವೂ ತುಕಾಲಿ ಸಂತೋಷ್​ ಅವರು ವರ್ತೂರು ಸಂತೋಷ್​ ಜೊತೆ ಆಪ್ತವಾಗಿದ್ದರು. ಸಂಗೀತಾ ಶೃಂಗೇರಿ, ಕಾರ್ತಿಕ್​ ಮಹೇಶ್​, ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ಡ್ರೋನ್​ ಪ್ರತಾಪ್​, ವಿನಯ್​ ಗೌಡ ಅವರ ಫಿನಾಲೆಗೆ ಬಂದಿದ್ದರು. ಅಂತಿಮವಾಗಿ ಅತಿ ಹೆಚ್ಚು ವೋಟ್​ ಪಡೆದ ಕಾರ್ತಿಕ್​ ಮಹೇಶ್​ ಅವರು ವಿನ್ನರ್​ ಪಟ್ಟ ಪಡೆದರು. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಜನವರಿ 28ರಂದು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಮುಕ್ತಾಯ ಆಯಿತು. ಡ್ರೋನ್​ ಪ್ರತಾಪ್​ ಮೊದಲ ರನ್ನರ್​ ಅಪ್​ ಆದರು. ಎರಡನೇ ರನ್ನರ್​ಅಪ್​ ಸ್ಥಾನಕ್ಕೆ ಸಂಗೀತಾ ಶೃಂಗೇರಿ ತೃಪ್ತಿಪಟ್ಟುಕೊಂಡರು. ಮೂರನೇ ರನ್ನರ್​ಅಪ್​ ಸ್ಥಾನ ವಿನಯ್​ ಗೌಡ ಅವರಿಗೆ ಸಿಕ್ಕಿತು. ವರ್ತೂರು ಸಂತೋಷ್​ ನಾಲ್ಕನೇ ರನ್ನರ್​ಅಪ್​, ತುಕಾಲಿ ಸಂತೋಷ್​ 5ನೇ ರನ್ನರ್​ಅಪ್​ ಆಗಿ ಹೊರಹೊಮ್ಮಿದರು. ಈ ಕಾರ್ಯಕ್ರಮದಿಂದ ಎಲ್ಲರಿಗೂ ಜನಪ್ರಿಯತೆ ಸಿಕ್ಕಿದೆ. ಎಲ್ಲರ ಫ್ಯಾನ್​ ಫಾಲೋಯಿಂಗ್​ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:50 pm, Mon, 29 January 24