ಯಶ್ ಬರ್ತ್​ಡೇ ಪ್ರಯುಕ್ತ ಬಿಗ್ ಬಾಸ್ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಏನದು?

|

Updated on: Jan 10, 2025 | 7:14 AM

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಫ್ಯಾಮಿಲಿ ವೀಕ್ ನಂತರ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ಆರಂಭವಾಗಿದೆ. ಫೈನಲ್‌ಗೆ ಹೋಗಲು ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಕೇವಲ ಎರಡು ವಾರಗಳು ಮಾತ್ರ ಉಳಿದಿರುವುದರಿಂದ ಗೆಲುವು ಯಾರದ್ದಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಹೀಗಿರುವಾಗಲೇ ಯಶ್ ಬರ್ತ್​ಡೇ ದಿನ ಸ್ಪರ್ಧಿಗಳಿಗೆ ಸರ್​ಪ್ರೈಸ್ ಸಿಕ್ಕಿದೆ.

ಯಶ್ ಬರ್ತ್​ಡೇ ಪ್ರಯುಕ್ತ ಬಿಗ್ ಬಾಸ್ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಏನದು?
Yash Birthday
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಸ್ಪರ್ಧಿಗಳಿಗೆ ಆಗಾಗ ಸರ್​ಪ್ರೈಸ್ ಸಿಗುತ್ತಲೇ ಇರುತ್ತದೆ. ಕಳೆದ ವಾರ ಫ್ಯಾಮಿಲಿ ವೀಕ್ ಕಾರಣದಿಂದ ಎಲ್ಲರೂ ಹಾಯಾಗಿ ಸಮಯ ಕಳೆದರು. ಸ್ಪರ್ಧಿಗಳಿಗೆ ಕಿಚ್ಚನ ಊಟ ಕೂಡ ಸಿಕ್ಕಿತು. ಈ ವಾರ ಸ್ಪರ್ಧಿಗಳಲ್ಲಿ ಮತ್ತೆ ಗಂಭೀರತೆ ಬಂದಿದೆ. ಅದಕ್ಕೆ ಕಾರಣ ಆಗಿರೋದು ‘ಟಿಕೆಟ್ ಟು ಫಿನಾಲೆ’ ಟಾಸ್ಕ್​. ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆಯಲು ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಹೀಗಿರುವಾಗಲೇ ಸ್ಪರ್ಧಿಗಳಿಗೆ ಬಿಗ್ ಬಾಸ್ ಕಡೆಯಿಂದ ಸ್ಪೆಷಲ್ ಉಡುಗೊರೆ ಒಂದು ಸಿಕ್ಕಿದೆ. ಏನದು? ಆ ಬಗ್ಗೆ ಇಲ್ಲಿದೆ ವಿವರ.

ಜನವರಿ 8ರಂದು ಯಶ್ ಅವರ ಜನ್ಮದಿನ. ಅವರಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಆರಾಧಿಸುವವರು ಅನೇಕರು ಇದ್ದಾರೆ. ಈಗ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಜನವರಿ 8ರಂದು ನಡೆದ ಘಟನೆಗಳು ಜನವರಿ 9ರಂದು ಪ್ರಸಾರ ಕಂಡಿವೆ. ಜನವರಿ 8ರಂದು ಮುಂಜಾನೆ ಬಿಗ್ ಬಾಸ್​ನಲ್ಲಿ ಯಶ್ ಸಿನಿಮಾದ ಸಾಂಗ್ ಪ್ಲೇ ಆಗಿದೆ.

ಬೆಳಿಗ್ಗೆ ಸ್ಪರ್ಧಿಗಳನ್ನು ಎಬ್ಬಿಸಲು ಯಾವ ಸಾಂಗ್​ನ ಪ್ಲೇ ಮಾಡಲಾಗುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಇರುತ್ತದೆ. ಒಳಗೆ ಇರುವ ಸ್ಪರ್ಧಿಗಳಿಗೂ ಈ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಜನವರಿ 8ರಂದು ಯಾವ ಹಾಡು ಹಾಕುತ್ತಾರೆ ಎಂಬ ಪ್ರಶ್ನೆ ಇತ್ತು. ವಿಶೇಷ ಎಂದರೆ ಯಶ್ ನಟನೆಯ ‘ಗೂಗ್ಲಿ’ ಚಿತ್ರದ ‘ಗೂಗ್ಲಿ..’ ಹಾಡನ್ನೇ ಹಾಕಲಾಗಿದೆ. ಇದಕ್ಕೆ ಸ್ಪರ್ಧಿಗಳು ಕುಣಿದು ಕುಪ್ಪಳಿಸಿದ್ದಾರೆ.

‘ಗೂಗ್ಲಿ’ 2013ರಲ್ಲಿ ರಿಲೀಸ್ ಆದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಈ ಚಿತ್ರದ ಹಾಡುಗಳು ಕೂಡ ಯಶಸ್ಸು ಕಂಡಿವೆ. ಈ ಚಿತ್ರಕ್ಕೆ ಪವನ್ ಒಡೆಯರ್ ಅವರು ನಿರ್ದೇಶನ ಮಾಡಿದ್ದರು. ಜಯಣ್ಣ ಹಾಗೂ ಭೋಗೇಂದ್ರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ಜನ್ಮದಿನದಂದು ರಾಧಿಕಾ ಜೊತೆ ಯಶ್ ಡೇಟ್​ ನೈಟ್; ಇಲ್ಲಿವೆ ಸುಂದರ ಫೋಟೋಗಳು

ಈ ವಾರ ಪೂರ್ಣಗೊಂಡರೆ ಬಿಗ್ ಬಾಸ್ ಮನೆಯಲ್ಲಿ ಉಳಿಯೋದು ಇನ್ನು ಕೇವಲ ಎರಡು ವಾರ ಮಾತ್ರ. ಸದ್ಯ 9 ಸ್ಪರ್ಧಿಗಳು ಇದ್ದು ಇವರ ಮಧ್ಯೆ ಕಪ್ ಗೆಲ್ಲೋದು ಯಾರು ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.