ತುಕಾಲಿ ಸಂತೋಷ್ ಪತ್ನಿ ಮಾನಸಾ ಹೆಚ್ಚು ಚರ್ಚೆ ಆಗುತ್ತಿದ್ದಾರೆ. ಈ ಬಾರಿ ಅವರು ನಾಮಿನೇಟ್ ಆಗಿದ್ದು, ಎಲಿಮಿನೇಷನ್ ಭಯ ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅವರು ಬೇಗ ಎಲಿಮಿನೇಟ್ ಆಗಲಿ ಎಂದು ಅನೇಕರು ಆಶಿಸುತ್ತಿದ್ದಾರೆ. ಹೀಗಿರುವಾಗಲೇ ಹೊರಗೆ ಅವರ ಬಗ್ಗೆ ಯಾವ ರೀತಿಯ ಅಭಿಪ್ರಾಯ ಇದೆ ಎಂಬುದನ್ನು ಯೋಗರಾಜ್ ಭಟ್ ಅವರು ಮಾನಸಾಗೆ ಹೇಳಿದ್ದಾರೆ.
ಬಿಗ್ ಬಾಸ್ನಲ್ಲಿ ಗಂಡುಬೀರಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮಾನಸಾ. ಚಿಕ್ಕ ವಿಚಾರ ಸಿಕ್ಕರೂ ಅವರು ಏರು ಧ್ವನಿಯಲ್ಲಿ ಕಿತ್ತಾಡುತ್ತಾರೆ. ಅವರನ್ನು ಅನೇಕರು ಟೀಕೆ ಮಾಡಿದ್ದಾರೆ. ಮಾನಸಾ ಅವರನ್ನು ಈ ರೀತಿ ಟ್ರೋಲ್ ಮಾಡುತ್ತಿರುವುದು ತುಕಾಲಿ ಸಂತೋಷ್ ಮೇಲೆಯೂ ಪ್ರಭಾವ ಬೀರಿದೆ. ಅವರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಸೆಕ್ಷನ್ನ ಆಫ್ ಮಾಡಿ ಇಟ್ಟಿದ್ದಾರೆ. ಆ ಮಟ್ಟಿಗೆ ಅವರಿಗೆ ಕಂಗಾಲಾಗಿದ್ದಾರೆ. ಮಾನಸಾ ಬಗ್ಗೆ ಹೊರಗೆ ಇರುವ ಅಭಿಪ್ರಾಯ ಏನು ಎಂಬುದನ್ನು ಪರೋಕ್ಷವಾಗಿ ಯೋಗರಾಜ್ ಭಟ್ ಹೇಳಿದ್ದಾರೆ.
ಹನುಮಂತ ಅವರು ಕುರಿಗಾಹಿ. ಹೀಗಾಗಿ, ಯಾರು ಯಾವ ರೀತಿಯ ಕುರಿ ಎಂದು ಹೇಳುವ ಆಯ್ಕೆಯನ್ನು ಹನುಮಂತಗೆ ಯೋಗರಾಜ್ ಭಟ್ ನೀಡಿದ್ದಾರೆ. ಈ ವೇಳೆ ಮಾನಸಾ ಅವರ ಹೆಸರನ್ನು ತೆಗೆದುಕೊಳ್ಳುವಾಗ, ‘ಗಂಡಸಾದ ಮಾನಸಾ ಅವರ ಬಗ್ಗೆ ಹೇಳಿ’ ಎಂದರು ಯೋಗರಾಜ್ ಭಟ್. ನಂತರ, ‘ಗಂಡಸಲ್ಲ.. ಮಾನಸಾ ಬಗ್ಗೆ ಹೇಳಿ’ ಎಂದರು. ‘ಎಲ್ಲರೂ ಇಲ್ಲಿ ಹಾಗೆಯೇ (ಗಂಡಸ ರೀತಿ) ಹೇಳ್ತಾರೆ’ ಎಂದರು ಮಾನಸಾ. ಇದಕ್ಕೆ ಉತ್ತರಿಸಿದ ಯೋಗರಾಜ್ ಭಟ್, ‘ಹೊರಗೂ ಹಾಗೇ ಅಂದ್ಕೊಂಡಿದಾರೆ’ ಎಂದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನಿಷ್ಪ್ರಯೋಜಕ ವ್ಯಕ್ತಿ ಯಾರು? ಕೇಳಿಬಂತು ಐಶ್ವರ್ಯಾ, ಮಾನಸಾ ಹೆಸರು
ನಂತರ ಮಾನಸಾ ಬಗ್ಗೆ ಹೊರಗೆ ಇರುವ ದೂರುಗಳ ಪಟ್ಟಿಯನ್ನು ಯೋಗರಾಜ್ ಭಟ್ ತೆಗೆದಿಟ್ಟರು. ‘ನಮ್ಮ ನಾಲಿಗೆ ಮೇಲೆ ಹಿಡಿತವಿಲ್ಲ, ಬೇರೆಯವರ ವಿಚಾರಕ್ಕೆ ಮೂಗು ತೂರಿಸುತ್ತೀರಿ. ಇತರರ ಚರ್ಚೆ ಒಳಗೆ ಭಾಗವಹಿಸಿ, ಆ ಚರ್ಚೆಯನ್ನೇ ಬದಲಿಸುವುದು’ ಎಂದರು. ಈ ವಿಚಾರದಲ್ಲಿ ಮಾನಸಾ ಅವರು ತಿದ್ದುಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಮನಾಸಾ ಅವರು ಈ ವಾರ ಎಲಿಮಿನೇಟ್ ಆಗಲೂಬಹುದು ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:29 pm, Sat, 26 October 24