ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಗೈರು; ಈ ವಾರದ ಎಲಿಮಿನೇಷನ್ ಗತಿ ಏನು?

ತಾಯಿಯ ನಿಧನದಿಂದಾಗಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡಕ್ಕೆ ಈ ವಾರ ಅವರು ಹಾಜರಾಗುತ್ತಿಲ್ಲ. ಆದರೂ, ಎಲಿಮಿನೇಷನ್ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆ ಇದೆ. ಈ ವಾರದ ಎಪಿಸೋಡ್‌ನಲ್ಲಿ ವಿಭಿನ್ನ ಚಟುವಟಿಕೆಗಳ ಮೂಲಕ ಎಲಿಮಿನೇಷನ್ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಬಿಗ್ ಬಾಸ್ ನಿರೂಪಣೆಗೆ ಸುದೀಪ್ ಗೈರು; ಈ ವಾರದ ಎಲಿಮಿನೇಷನ್ ಗತಿ ಏನು?
ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Oct 26, 2024 | 4:51 PM

ಕಿಚ್ಚ ಸುದೀಪ್ ಅವರಿಗೆ ಇತ್ತೀಚೆಗೆ ಮಾತೃವಿಯೋಗ ಆಗಿದೆ. ಅವರ ತಾಯಿ ಸರೋಜಾ ಅವರು ವಯೋ ಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. ಈ ನೋವಿನಿಂದ ಕಿಚ್ಚ ಸುದೀಪ್ ಅವರು ಇನ್ನೂ ಹೊರ ಬಂದಿಲ್ಲ. ಕಳೆದ ಭಾನುವಾರದ ಎಪಿಸೋಡ್​ ಶೂಟ್ ಆಗಿರಲಿಲ್ಲ. ಈ ಕಾರಣಕ್ಕೆ ಶನಿವಾರ ಶೂಟ್ ಆದ ಎಪಿಸೋಡ್​ನ ಭಾನುವಾರವೂ ಪ್ರಸಾರ ಮಾಡಲಾಗಿತ್ತು. ಈ ವಾರ ಸುದೀಪ್ ಬರುತ್ತಿಲ್ಲ. ಹಾಗಾದರೆ ಎಲಿಮಿನೇಷನ್ ನಡೆಯುವುದಿಲ್ಲವೇ? ಅದಕ್ಕೆ ಈ ಸ್ಟೋರಿಯಲ್ಲಿದೆ ಉತ್ತರ.

ಸುದೀಪ್ ಅವರು ಬಿಗ್ ಬಾಸ್ ಎಪಿಸೋಡ್​ನ ತಪ್ಪಿಸಿದ್ದು ತುಂಬಾನೇ ಕಡಿಮೆ. ಕೊವಿಡ್ ಸಂದರ್ಭದಲ್ಲಿ ಅವರಿಗೆ ಅನಾರೋಗ್ಯ ಆದಾಗ ಅವರು ಬಿಗ್ ಬಾಸ್ ನಿರೂಪಣೆ ಮಿಸ್ ಮಾಡಿಕೊಂಡಿದ್ದರು. ಕಳೆದ ವರ್ಷವೂ ಅನಿವಾರ್ಯವಾಗಿ ಅವರು ಎಪಿಸೋಡ್​ನ ಮಿಸ್ ಮಾಡಿಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಬೇರೆ ಕಲಾವಿದರನ್ನು ಬಿಗ್ ಬಾಸ್​ಗೆ ಕಳುಹಿಸಿ ಎಪಿಸೋಡ್ ನಡೆಸಿಕೊಡಲಾಗಿತ್ತು.

ಈ ಬಾರಿ ಯೋಗರಾಜ್ ಭಟ್ ಬಂದಿದ್ದಾರೆ. ಅದೇ ರೀತಿ ಸೃಜನ್ ಲೋಕೇಶ್ ಕೂಡ ಅತಿಥಿಯಾಗಿ ದೊಡ್ಮನೆಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಈ ಎಪಿಸೋಡ್ ಭಾನುವಾರ ಪ್ರಸಾರ ಕಾಣುವ ಸಾಧ್ಯತೆ ಇದೆ. ಸದ್ಯ ಯೋಗರಾಜ್ ಭಟ್ ಅವರು ದೊಡ್ಮನೆಯಲ್ಲಿ ಸಖತ್ ಮನರಂಜನೆ ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರೋಮೋಗಳನ್ನು ರಿಲೀಸ್ ಮಾಡಲಾಗುತ್ತಿದೆ.

‘ಬಿಗ್ ಬಾಸ್​’ನಲ್ಲಿ ಪ್ರತಿ ವಾರವೂ ಎಲಿಮಿನೇಷನ್ ನಡೆದೇ ನಡೆಯುತ್ತದೆ. ಕೆಲವೇ ಕೆಲವು ಸಂದರ್ಭಗಳನ್ನು ಹೊರತಪಡಿಸಿ ಪ್ರತಿ ವಾರವೂ ಎಲಿಮಿನೇಷನ್ ಇರುತ್ತದೆ. ಈ ವಾರ ಸುದೀಪ್ ಬರದೇ ಇದ್ದರೂ ಎಲಿಮಿನೇಷನ್ ನಡೆಯುತ್ತದೆ ಎನ್ನಲಾಗಿದೆ. ಇದಕ್ಕೆ ಕಾರಣವೂ ಇದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನಿಷ್ಪ್ರಯೋಜಕ ವ್ಯಕ್ತಿ ಯಾರು? ಕೇಳಿಬಂತು ಐಶ್ವರ್ಯಾ, ಮಾನಸಾ ಹೆಸರು

ಬಿಗ್ ಬಾಸ್ ಆರಂಭ ಆಗಿ ತಿಂಗಳು ಕಳೆದರೂ ಸರಿಯಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಒಂದು ಬಾರಿ ಮಾತ್ರ. ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆದರು. ಆ ಬಳಿಕ ಜಗದೀಶ್ ಹಾಗೂ ರಂಜಿತ್ ಕಿರಿಕ್ ಮಾಡಿಕೊಂಡು ಎಲಿಮಿನೇಟ್ ಆದರು. ಈ ವಾರ ನಾನಾ ರೀತಿಯ ಚಟುವಟಿಕೆ ನೀಡಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಬಹುದು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.