AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಸ್ಪರ್ಧಿಯ ಐಶಾರಾಮಿ ಕಾರು ವಶ, ಮೂರು ಕೋಟಿ ರೂಪಾಯಿ ದಂಡ

Anurag Dobhal: ಜನಪ್ರಿಯ ಯೂಟ್ಯೂಬರ್, ಬಿಗ್​ಬಾಸ್ ಹಿಂದಿ ಸೀಸನ್ 17ರ ಸ್ಪರ್ಧಿ ಅನುರಾಗ್ ದೋಬಲ್​ರ 4 ಕೋಟಿ ಬೆಲೆಯ ಐಶಾರಾಮಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, 3 ಕೋಟಿ ದಂಡ ವಿಧಿಸಿದ್ದಾರೆ.

ಬಿಗ್​ಬಾಸ್ ಸ್ಪರ್ಧಿಯ ಐಶಾರಾಮಿ ಕಾರು ವಶ, ಮೂರು ಕೋಟಿ ರೂಪಾಯಿ ದಂಡ
ಮಂಜುನಾಥ ಸಿ.
|

Updated on: Mar 27, 2024 | 2:46 PM

Share

ಬಿಗ್​ಬಾಸ್ 17 (Bigg Boss) ಮಾಜಿ ಸ್ಪರ್ಧಿಗಳ ಟೈಂ ಸರಿ ಇದ್ದಂತಿಲ್ಲ. ಬಿಗ್​ಬಾಸ್ ಒಟಿಟಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಎಲ್ವಿಶ್ ಯಾದವ್, ಹಾವಿನ ವಿಷದ ರೇವ್ ಪಾರ್ಟಿ ಆಯೋಜಿಸಿದ ಆರೋಪದಲ್ಲಿ ಕೆಲ ದಿನಗಳ ಹಿಂದಷ್ಟೆ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಬಿಗ್​ಬಾಸ್ 17ರ ವಿಜೇತ ಮುನಾವತ್ ಫಾರುಖಿ ಹುಕ್ಕಾ ಬಾರ್ ಒಂದರಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಇದೀಗ ಬಿಗ್​ಬಾಸ್ 17ರ ಸ್ಪರ್ಧಿ ಆಗಿದ್ದ ಜನಪ್ರಿಯ ಯೂಟ್ಯೂಬರ್ ಅನುರಾಗ್ ದೋಬಲ್​ ಸಹ ಪೊಲೀಸರಿಂದ ಸಮಸ್ಯೆ ಎದುರಿಸಿದ್ದಾರೆ. ಅನುರಾಗ್​ರ ಅತ್ಯಂತ ದುಬಾರಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮೂರು ಕೋಟಿ ದಂಡ ವಿಧಿಸಿದ್ದಾರೆ.

ಯೂಟ್ಯೂಬರ್ ಅನುರಾಗ್ ದೋಬಲ್, ಯುಕೆ 07 ರೈಡರ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು ಐಶಾರಾಮಿ ಕಾರು, ಬೈಕ್​ಗಳನ್ನು ಖರೀದಿ ಮಾಡಿ ಚಲಾಯಿಸುತ್ತಾರೆ. ಸೆಲೆಬ್ರಿಟಿಗಳೊಟ್ಟಿಗೆ ಕಾರ್​ನಲ್ಲಿ ರೈಡ್ ಸಹ ಹೋಗುತ್ತಾರೆ. ಐಪಿಎಲ್​ ಸಮಯವಾದ್ದರಿಂದ ಐಪಿಎಲ್​ನ ಸೆಲೆಬ್ರಿಟಿಗಳೊಟ್ಟಿಗೆ ವಿಡಿಯೋ ಮಾಡಲು ಚೆನ್ನೈಗೆ ತಮ್ಮ ದುಬಾರಿ ಲ್ಯಾಂಬೊರ್ಗಿನಿ ಕಾರನ್ನು ಅನುರಾಗ್ ದೋಬಲ್ ತಂದಿದ್ದರು. ಇಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಜೊತೆ ವಿಡಿಯೋ ಮಾಡಿ ಇನ್ನೇನು ಹೊರಡಬೇಕಾದರೆ ಅವರ ಕಾರನ್ನು ಚೆನ್ನೈ ಪೊಲೀಸರು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ:Munawar Faruqui: ಬಿಗ್​ಬಾಸ್ ವಿಜೇತ ಮುನಾವರ್ ಫಾರೂಖಿ ಬಂಧನ

ಸುಮಾರು 4 ಕೋಟಿಗೂ ಹೆಚ್ಚು ಬೆಲೆಯ ಲ್ಯಾಂಬೊರ್ಗಿನಿ ಹುರಿಕೇನ್ ಕಾರನ್ನು ಅನುರಾಗ್ ದೋಬಲ್ ಇತ್ತೀಚೆಗಷ್ಟೆ ಖರೀದಿ ಮಾಡಿದ್ದರು. ವಿಶೇಷವಾಗಿ ಐಪಿಎಲ್ ಸೀಸನ್​ನಲ್ಲಿ ಕಂಟೆಂಟ್ ಕ್ರಿಯೇಷನ್ ಮಾಡಲೆಂದು ಈ ಕಾರು ಖರೀದಿ ಮಾಡಲಾಗಿತ್ತು. ಅದರಂತೆ ಚೆನ್ನೈಗೆ ಕಾರನ್ನು ಪ್ಲಾಟ್​ಬೆಡ್ ಮೇಲೆ ಟ್ರಾನ್ಸ್​ಪೋರ್ಟ್ ಮಾಡಿಕೊಂಡು ಇಲ್ಲಿ ಸುರೇಶ್ ರೈನಾ ಜೊತೆ ಶೂಟ್ ಮಾಡಿದ್ದ ಅನುರಾಗ್ ದೋಬಲ್, ಮುಂದಿನ ಶೂಟ್​ಗಾಗಿ ಕಾರನ್ನು ಫ್ಲ್ಯಾಟ್ ಬೆಡ್ ಮೇಲೆ ಇರಿಸಿ ದೊಡ್ಡ ಲಾರಿಯೊಂದಕ್ಕೆ ಕಾರನ್ನು ಹಾಕಿ ದೆಹಲಿಗೆ ಕಳಿಸಿ ತಾವು ದೆಹಲಿಗೆ ವಿಮಾನದಲ್ಲಿ ಹೋಗಲು ತಯಾರಾಗಿದ್ದರು. ಆದರೆ ಆ ಲಾರಿಗೆ ಸೂಕ್ತವಾದ ದಾಖಲೆಗಳು ಇಲ್ಲದ ಕಾರಣ ಚೆನ್ನೈ ಪೊಲೀಸರು ಲಾರಿ ಜೊತೆಗೆ ಲ್ಯಾಂಬೊರ್ಗಿನಿ ಕಾರನ್ನು ಸಹ ಸೀಜ್ ಮಾಡಿದ್ದಾರೆ.

ವ್ಲಾಗರ್ ಆಗಿರುವ ಅನುರಾಗ್ ದೋಬಲ್​ ತಮ್ಮ ಕಾರನ್ನು ಟ್ರಾನ್ಸ್​ಪೋರ್ಟ್ ಮಾಡುತ್ತಿರುವ ದೃಶ್ಯಗಳನ್ನು, ಸೀಜ್ ಆಗಿರುವ ವಿವರಗಳನ್ನು ವಿಡಿಯೋ ಮಾಡಿ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ತಮಗೆ 3 ರಿಂದ 3.50 ಕೋಟಿ ರೂಪಾಯಿ ದಂಡ ಪಾವತಿ ಮಾಡಬೇಕಾಗಿ ಬರಬಹುದು ಎಂದು ಸಹ ಅನುರಾಗ್ ದೋಬಲ್ ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು