ಅನು ಸಿರಿಮನೆಯನ್ನು (Anu Sirimane) ಕಂಡರೆ ಝೇಂಡೆಗೆ ದ್ವೇಷ ಉಕ್ಕುತ್ತಿದೆ. ಆರ್ಯವರ್ಧನ್ನ ಸಾಯಿಸಲು ಆಕೆಯೇ ಸಂಚು ರೂಪಿಸಿದ್ದಳು ಅನ್ನೋದು ಝೇಂಡೆ ನಂಬಿಕೆ. ಈ ಕಾರಣದಿಂದ ಆತ ಅನುನ ಕೊಲ್ಲೋಕೆ ನಿರ್ಧರಿಸಿದ್ದಾನೆ. ಜತೆಗೆ ಅನುನ ಹತ್ಯೆ ಮಾಡಲು ಆತ ಸುಪಾರಿ ಕೂಡ ನೀಡಿದ್ದಾನೆ. ಆರ್ಯವರ್ಧನ್ ಅಸ್ಥಿ ಬಿಡೋಕೆ ನದಿಯ ಪಕ್ಕಕ್ಕೆ ತೆರಳಿರುವ ಅನುನ ಸಾಯಿಸಬೇಕು ಎಂಬುದು ಝೇಂಡೆ (Jende) ಆಲೋಚನೆ ಆಗಿತ್ತು. ಆದರೆ, ಅದು ವಿಫಲವಾಗಿದೆ. ನದಿಗೆ ಹಾರಿ ಅನುನ ಬದುಕಿಸಿದ್ದಾನೆ ಸಂಜು (ಹೊಸ ಆರ್ಯವರ್ಧನ್). ಇದು ಝೇಂಡೆಯ ಕೋಪವನ್ನು ಮತ್ತಷ್ಟು ಹೆಚ್ಚಿಸಿದೆ.
ಆರ್ಯವರ್ಧನ್ ಬದುಕಿದ್ದಾನೆ. ಆದರೆ, ಅನು ಕುಟುಂಬದ ದೃಷ್ಟಿಯಲ್ಲಿ ಆತ ಸತ್ತಿದ್ದಾನೆ. ಅವನ ಅಸ್ಥಿ ಬಿಡೋಕೆ ಎಲ್ಲರೂ ನದಿ ತೀರಕ್ಕೆ ಬಂದಿದ್ದರು. ಇವರ ಜತೆ ಸಂಜು ಕೂಡ ಬಂದಿದ್ದ. ಅನು ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಂತಿದ್ದರಿಂದ ಆಕೆಗೆ ತಲೆಸುತ್ತು ಬಂದಿದೆ. ಅನು ಇನ್ನೇನು ನೆಲಕ್ಕೆ ಬೀಳುವವಳಿದ್ದಳು. ಆಗ ಆಕೆಯನ್ನು ಸಂಜು ಹಿಡಿದಿದ್ದಾನೆ. ಇದರಿಂದ ಅನು ನೆಲಕ್ಕೆ ಬೀಳೋದು ತಪ್ಪಿದೆ.
ಇದೇ ಸಂದರ್ಭದಲ್ಲಿ ಝೇಂಡೆಯಿಂದ ಸುಪಾರಿ ತೆಗೆದುಕೊಂಡವರು ಆ್ಯಕ್ಟೀವ್ ಆದರು. ಆರ್ಯವರ್ಧನ್ ಹಾಗೂ ಝೇಂಡೆ ಸಾಕಷ್ಟು ಆಪ್ತರಾಗಿದ್ದರು. ಆರ್ಯವರ್ಧನ್ನ ಎಲ್ಲ ಸೀಕ್ರೆಟ್ಗಳು ಝೇಂಡೆಗೆ ತಿಳಿದಿತ್ತು ಆದರೆ, ಈಗ ಆರ್ಯವರ್ಧನ್ ಇಲ್ಲ. ಈ ಕಾರಣಕ್ಕೆ ರಾಜ ನಂದಿನಿ ವಿಲಾಸಕ್ಕೆ ಬರೋಕೆ ಝೇಂಡೆಗೆ ಅವಕಾಶವೇ ಸಿಗುತ್ತಿಲ್ಲ. ಜತೆಯಲ್ಲೇ ಇದ್ದು ಆರ್ಯವರ್ಧನ್ ರಕ್ಷಣೆ ಮಾಡಿಲ್ಲ ಎಂಬುದು ಅನು ಕುಟುಂಬದ ಆರೋಪ. ಇತ್ತ, ಆರ್ಯವರ್ಧನ್ನ ಕೊಲ್ಲಿಸಿದ್ದು ಅನು ಎಂದು ಝೇಂಡೆ ಭಾವಿಸಿದ್ದಾನೆ. ‘ನನ್ನ ಆಪ್ತ ಮಿತ್ರನನ್ನು ನನ್ನಿಂದ ದೂರ ಕಳುಹಿಸಿ ಈಗ ನಿಮ್ಮಿಂದ ನನ್ನನ್ನು ದೂರ ಇಟ್ಟಿದ್ದೀರಿ. ಈ ಕುಟುಂಬವನ್ನು ನಾನು ಎಂದಿಗೂ ಖುಷಿಯಿಂದ ಇರೋಕೆ ಬಿಡಲ್ಲ’ ಎಂದು ಝೇಂಡೆ ಶಪಥ ಮಾಡಿದ್ದಾನೆ.
ಸುಪಾರಿ ಪಡೆದವರು ಅನುನ ಕೊಲ್ಲಲು ಮೀನುಗಾರರ ವೇಷದಲ್ಲಿ ನದಿ ಸಮೀಪ ಎಂಟ್ರಿ ಕೊಟ್ಟಿದ್ದಾರೆ. ಸರಿಯಾದ ಸಮಯ ನೋಡಿ ಆಕೆಯನ್ನು ನೀರಿಗೆ ತಳ್ಳಬೇಕು ಎಂಬುದು ಅವರ ಆಲೋಚನೆ. ಇದಕ್ಕಾಗಿ ಅವರು ಮೀನಿನ ಬಲೆ ಸಿದ್ಧಪಡಿಸಿಕೊಂಡಿದ್ದರು. ಅನು ನೀರಿಗೆ ಇಳಿಯುತ್ತಿದ್ದಂತೆ ಆಕೆಯ ಕಾಲು ಬಲೆಗೆ ಸಿಗುವಂತೆ ಮಾಡಿದ್ದಾರೆ ಸುಪಾರಿ ಕಿಲ್ಲರ್ಸ್. ಇದರಿಂದ ಅನು ನೀರಿಗೆ ಬಿದ್ದಿದ್ದಾಳೆ.
ಅನು ಕುಟುಂಬದವರು ನದಿಯ ದಂಡೆಯಿಂದ ದೂರ ತೆರಳಿದ್ದರು. ಅನು ಬಿದ್ದಿದ್ದನ್ನು ನೋಡಿದ ಎಲ್ಲರೂ ನದಿಯ ಬಳಿ ಓಡಿ ಬಂದಿದ್ದಾರೆ. ಸಂಜು ಮಾತ್ರ ಒಂದು ಕ್ಷಣವೂ ಯೋಚಿಸದೆ ನದಿಗೆ ಜಿಗಿದಿದ್ದಾನೆ. ಆಕೆಯನ್ನು ರಕ್ಷಣೆ ಮಾಡಿ ದಂಡೆಗೆ ಕರೆ ತಂದಿದ್ದಾನೆ. ಆದರೆ, ಅನು ಪ್ರಜ್ಞೆ ತಪ್ಪಿದ್ದಾಳೆ. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಅನು ಬದುಕಿದ್ದು ನೋಡಿ ಝೇಂಡೆಗೆ ಕೋಪ ಹೆಚ್ಚಾಗಿದೆ.
ಮಾನ್ಸಿಗೆ ಹೆಚ್ಚಾಯಿತು ಅನುಮಾನ
ಸಂಜು ಮೇಲೆ ಮಾನ್ಸಿಗೆ ತೀವ್ರ ಅನುಮಾನ ಮೂಡಿದೆ. ಇದಕ್ಕೆ ಕಾರಣ ಆಗಿದ್ದು ಆತನ ನಡೆ. ಸಂಜು ಈ ಮನೆಗೆ ಬಂದಿದ್ದು ಏಕೆ ಎಂಬ ಪ್ರಶ್ನೆ ಆಕೆಯನ್ನು ಬಹುವಾಗಿ ಕಾಡಿದೆ. ಅಸ್ಥಿ ಬಿಡಲು ನದಿಯ ಬಳಿ ಹೋದಾಗ ಅನುನ ಸಂಜು ದಿಟ್ಟಿಸಿ ನೋಡುತ್ತಿದ್ದ. ಈ ಬಗ್ಗೆ ಪತಿ ಹರ್ಷನಿಗೆ ಮಾನ್ಸಿ ಪ್ರಶ್ನೆ ಮಾಡಿದ್ದಾಳೆ. ಮಾನ್ಸಿಗೆ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದೂ ಗೊತ್ತಾಗುವುದಿಲ್ಲ ಎಂದು ಸಿಡುಕಿದ್ದಾನೆ ಹರ್ಷ. ಅನುನ ಸಂಜು ಕಾಪಾಡಿದಾಗಲೂ ಇದೇ ರೀತಿಯ ಮಾತು ಮಾನ್ಸಿ ಬಾಯಿಂದ ಬಂದಿದೆ.
ಶ್ರೀಲಕ್ಷ್ಮಿ ಎಚ್.