ಬಿಗ್ ಬಾಸ್ ಮನೆ ಸೇರಲಿದ್ದಾರೆ ಸ್ಟಾರ್ ಕಾಮಿಡಿಯನ್?

| Updated By: ಮದನ್​ ಕುಮಾರ್​

Updated on: Jul 06, 2021 | 3:31 PM

ಅಲಿ ತೆಲುಗು ಚಿತ್ರರಂಗದಲ್ಲಿ ಮಾತ್ರ ಹೆಸರು ಮಾಡಿಲ್ಲ. 2010ರಲ್ಲಿ ತೆರೆಗೆ ಬಂದ ಕನ್ನಡದ ಸೂಪರ್​ ಚಿತ್ರದಲ್ಲಿ ಅವರು ನಟಿಸಿದ್ದರು. 2014ರ ನಮೋ ಭೂತಾತ್ಮ, ಕೆಂಪೇಗೌಡ 2 ಸಿನಿಮಾಗಳಲ್ಲಿ ಅಲಿ ಆ್ಯಕ್ಟ್​ ಮಾಡಿದ್ದಾರೆ.

ಬಿಗ್ ಬಾಸ್ ಮನೆ ಸೇರಲಿದ್ದಾರೆ ಸ್ಟಾರ್ ಕಾಮಿಡಿಯನ್?
ಅಲಿ
Follow us on

ತೆಲುಗು ಬಿಗ್​ ಬಾಸ್​ ನಾಲ್ಕು ಸೀಸನ್ ಪೂರ್ಣಗೊಳಿಸಿದೆ. ​ಈಗ ಐದನೇ ಸೀಸನ್​ಗೆ ಸಿದ್ಧತೆಗಳು ನಡೆಯುತ್ತಿವೆ. ಆರಂಭದಲ್ಲಿ ಜೂನ್​ ತಿಂಗಳಲ್ಲೇ ಬಿಗ್​ ಬಾಸ್​ ಶುರು ಮಾಡುವ ಆಲೋಚನೆ ವಾಹಿನಿಯದ್ದಾಗಿತ್ತು. ಆದರೆ, ಕೊವಿಡ್​ ಕಾರಣದಿಂದ ಬಿಗ್​ ಬಾಸ್​ ಆರಂಭ ದಿನಾಂಕ ಮುಂದೂಡಲ್ಪಟ್ಟಿದೆ. ಆಗಸ್ಟ್​ ವೇಳೆಗೆ ತೆಲುಗು ಬಿಗ್​ ಬಾಸ್​ ಸೀಸನ್-5ಅನ್ನು ಆರಂಭಿಸುವ ಆಲೋಚನೆಯನ್ನು ವಾಹಿನಿ ಹೊಂದಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಬಿಗ್​ ಬಾಸ್​ ಮನೆ ಸೇರುವವರ ಸಂಭಾವ್ಯ ಪಟ್ಟಿ ಹರಿದಾಡುತ್ತಿದೆ.

ಟಾಲಿವುಡ್​ನ ಸ್ಟಾರ್​ ಕಾಮಿಡಿಯನ್​ ಅಲಿ ಅವರನ್ನು ಬಿಗ್​ ಬಾಸ್​ ಮನೆ ಒಳಗೆ ಕಳುಹಿಸುವ ಆಲೋಚನೆಯಲ್ಲಿ ವಾಹಿನಿ ಇದೆ. ಈಗಾಲೇ ಅವರನ್ನು ಅಪ್ರೋಚ್​ ಮಾಡಲಾಗಿದ್ದು, ಇದಕ್ಕೆ ಅವರು ಒಕೆ ಎಂದಿದ್ದಾರೆ ಎನ್ನಲಾಗಿದೆ.

ಅಲಿ ತೆಲುಗು ವಲಯದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ತಮ್ಮ ಹಾಸ್ಯದ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾರಣಕ್ಕೆ ಅವರು ಈ ಶೋಗೆ ಬಂದರೆ ಟಿಆರ್​ಪಿ ಹೆಚ್ಚಲಿದೆ ಎಂಬುದು ವಾಹಿನಿಯ ಲೆಕ್ಕಾಚಾರ.

ಅಲಿ ತೆಲುಗು ಚಿತ್ರರಂಗದಲ್ಲಿ ಮಾತ್ರ ಹೆಸರು ಮಾಡಿಲ್ಲ. 2010ರಲ್ಲಿ ತೆರೆಗೆ ಬಂದ ಕನ್ನಡದ ಸೂಪರ್​ ಚಿತ್ರದಲ್ಲಿ ಅವರು ನಟಿಸಿದ್ದರು. 2014ರ ನಮೋ ಭೂತಾತ್ಮ, ಕೆಂಪೇಗೌಡ 2 ಸಿನಿಮಾಗಳಲ್ಲಿ ಅಲಿ ಆ್ಯಕ್ಟ್​ ಮಾಡಿದ್ದಾರೆ. ಸದ್ಯ, ವಿಜಯ್​ ದೇವರಕೊಂಡ ನಟನೆಯ ‘ಲೈಗರ್​’ ಸಿನಿಮಾದಲ್ಲಿಯೂ ಅಲಿ ಅಭಿನಯಿಸುತ್ತಿದ್ದಾರೆ.

ಅಲಿ ಜತೆಗೆ ಸಾಕಷ್ಟು ಜನರ ಹೆಸರು ಸಂಭಾವ್ಯ ಪಟ್ಟಿಯಲ್ಲಿದೆ. ತೆಲುಗಿನಲ್ಲಿ ‘ರಾಬರ್ಟ್’ ಸಿನಿಮಾದ ಹಾಡನ್ನು ಹಾಡಿದ ಗಾಯಕಿ ಮಂಗ್ಲಿ, ಆ್ಯಂಕರ್​ ರವಿ, ಶರಣ್​ ನಟನೆಯ ‘ಅಧ್ಯಕ್ಷ’ ಸಿನಿಮಾದ ನಾಯಕಿ ಹೆಬ್ಬಾ ಪಟೇಲ್​ ಸೇರಿ ಅನೇಕರು ಬಿಗ್​ ಬಾಸ್​ ಮನೆ ಸೇರುತ್ತಿದ್ದಾರೆ ಎನ್ನಲಾಗುತ್ತಿದೆ. ಶೋ ಆರಂಭವಾದ ನಂತರವೇ ಈ ಕುತೂಹಲಕ್ಕೆ ತೆರೆ ಬೀಳಲಿದೆ.

ತೆಲುಗು ಬಿಗ್​ ಬಾಸ್​-4ರಲ್ಲಿ ಅಭಿಜೀತ್​ ವಿನ್ನರ್​ ಆಗಿದ್ದರು. ಅಖಿಲ್​ ಸಾರ್ಥಕ್​ ಹಾಗೂ ಸೋಹೆಲ್​ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್​ ಅಪ್​ ಆಗಿದ್ದರು.

ಇದನ್ನೂ ಓದಿ:

Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

 ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್​ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ