Choreographer Chaitanya Death: ‘ಹಣದ ವಿಷಯದಲ್ಲಿ ನನ್ನ ಒಳ್ಳೆಯತನ ಕಳೆದುಕೊಂಡೆ’; ಸಾಲದ ಹೊರೆಯಿಂದ ಕೊರಿಯೋಗ್ರಾಫರ್ ಆತ್ಮಹತ್ಯೆ

ಚೈತನ್ಯ ಅವರು ಸಾಯುವುದಕ್ಕೂ ಮುನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋದಲ್ಲಿ ಅವರು ತಮ್ಮ ಸಾವಿಗೆ ಕಾರಣ ತಿಳಿಸಿದ್ದಾರೆ.

Choreographer Chaitanya Death: ‘ಹಣದ ವಿಷಯದಲ್ಲಿ ನನ್ನ ಒಳ್ಳೆಯತನ ಕಳೆದುಕೊಂಡೆ’; ಸಾಲದ ಹೊರೆಯಿಂದ ಕೊರಿಯೋಗ್ರಾಫರ್ ಆತ್ಮಹತ್ಯೆ
ಚೈತನ್ಯ
Edited By:

Updated on: May 01, 2023 | 10:24 AM

ತೆಲುಗು ಕೊರಿಯೋಗ್ರಾಫರ್ ಚೈತನ್ಯ (Chaitanya) ಅವರು ಏಪ್ರಿಲ್ 30ರಂದು ನಿಧನ ಹೊಂದಿದ್ದಾರೆ. ಸಾಕಷ್ಟು ಸಾಲ ಮಾಡಿಕೊಂಡಿದ್ದ ಅವರಿಗೆ ಹಣವನ್ನು ಮರಳಿ ನೀಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಾಯುವುದಕ್ಕೂ ಮುನ್ನ ಅವರು ಕುಟುಂಬದವರ ಬಳಿ ಹಾಗೂ ಫ್ಯಾನ್ಸ್ ಬಳಿ ಕ್ಷಮೆ ಕೇಳಿದ್ದಾರೆ. ಅಭಿಮಾನಿಗಳು, ಚಿತ್ರರಂಗದವರು ಚೈತನ್ಯ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ರೀತಿಯ ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಅನೇಕರು ಹೇಳಿದ್ದಾರೆ.

ಚೈತನ್ಯ ಅವರು ಸಾಯುವುದಕ್ಕೂ ಮುನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋದಲ್ಲಿ ಅವರು ತಮ್ಮ ಸಾವಿಗೆ ಕಾರಣ ತಿಳಿಸಿದ್ದಾರೆ. ‘ನನ್ನ ಬಳಿ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಅದು ನನಗೆ ಹೊರೆ ಎನಿಸುತ್ತಿದೆ’ ಎಂದು ಚೈತನ್ಯ ಹೇಳಿದ್ದರು. ಅವರ ಸಾವು ಅನೇಕರಿಗೆ ಆಘಾತ ತಂದಿದೆ.

‘ಯಾವುದೇ ಸಮಸ್ಯೆಗಳನ್ನು ಎದುರಿಸಲು ಬಿಡದೆ ಅಪ್ಪ, ಅಮ್ಮ ಮತ್ತು ಸಹೋದರಿ ನನ್ನನ್ನು ಚೆನ್ನಾಗಿ ನೋಡಿಕೊಂಡರು. ನನ್ನ ಎಲ್ಲಾ ಸ್ನೇಹಿತರಿಗೆ ಪ್ರಾಮಾಣಿಕ ಕ್ಷಮೆಯಾಚಿಸುತ್ತೇನೆ. ನಾನು ಅನೇಕ ಜನರಿಗೆ ತೊಂದರೆ ನೀಡಿದ್ದೇನೆ. ಅವರೆಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಹಣದ ವಿಷಯದಲ್ಲಿ ನಾನು ನನ್ನ ಒಳ್ಳೆಯತನವನ್ನು ಕಳೆದುಕೊಂಡೆ. ಕೇವಲ ಸಾಲ ತೆಗೆದುಕೊಳ್ಳುವುದು ಮಾತ್ರವಲ್ಲ, ಅದನ್ನು ಮರುಪಾವತಿಸುವ ಸಾಮರ್ಥ್ಯವನ್ನೂ ಹೊಂದಿರಬೇಕು. ಆದರೆ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಾನು ನೆಲ್ಲೂರಿನಲ್ಲಿ ಇದ್ದೇನೆ. ಇದು ನನ್ನ ಕೊನೆಯ ದಿನ’ ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.

ಇದನ್ನೂ ಓದಿ: Anushka Sharma: ಬಾಲ್ಯದಲ್ಲಿ ಅನುಷ್ಕಾ ಶರ್ಮಾ ಹೇಗಿದ್ರು ನೋಡಿ; ಇಲ್ಲಿವೆ ಫೋಟೋಸ್

ಚೈತನ್ಯ ಅವರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲುಗಿನ ‘ಡೀ’ ಡ್ಯಾನ್ಸ್​ ಶೋ ಮೂಲಕ ಅವರು ಫೇಮಸ್ ಆಗಿದ್ದರು. ಅವರನ್ನು ಕಳೆದುಕೊಂಡಿರುವುದು ಅನೇಕರಿಗೆ ದುಃಖ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ