Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಳಪತಿ ವಿಜಯ್ ಹೊಸ ಚಿತ್ರದ ಬಗ್ಗೆ ಸಿಕ್ಕಿದೆ ದೊಡ್ಡ ಅಪ್ಡೇಟ್; ಫ್ಯಾನ್ಸ್ ಫುಲ್ ಖುಷ್

ಇತ್ತೀಚೆಗಷ್ಟೆ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಈಗಾಗಲೇ ವಿಜಯ್​ರ ಹೊಸ ಸಿನಿಮಾದ ಬಿಡುಗಡೆಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ದಳಪತಿ ವಿಜಯ್ ಹೊಸ ಚಿತ್ರದ ಬಗ್ಗೆ ಸಿಕ್ಕಿದೆ ದೊಡ್ಡ ಅಪ್ಡೇಟ್; ಫ್ಯಾನ್ಸ್ ಫುಲ್ ಖುಷ್
ದಳಪತಿ ವಿಜಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on:Dec 15, 2023 | 10:50 PM

ತಮಿಳು ನಟ ದಳಪತಿ ವಿಜಯ್ (Thalapathy Vijay) ಅವರು ಇತರ ಹೀರೋಗಳಿಗಿಂತ ಸಖತ್ ಭಿನ್ನ. ಅವರು ಒಪ್ಪಿಕೊಂಡ ಸಿನಿಮಾದ ಕೆಲಸಗಳನ್ನು ಶರವೇಗದಲ್ಲಿ ಮಾಡಿ ಮುಗಿಸುತ್ತಾರೆ. ಶೂಟಿಂಗ್ ವೇಳೆ ಅವರು ಅನಗತ್ಯ ಬ್ರೇಕ್ ತೆಗೆದುಕೊಳ್ಳುವುದಿಲ್ಲ. ಈಗ ಅವರ 68ನೇ ಸಿನಿಮಾ ಸೆಟ್ಟೇರುವುದರಲ್ಲಿ ಇದೆ. ಈ ಚಿತ್ರಕ್ಕೆ ಮುಂದಿನ ವರ್ಷ ಜನವರಿಯಲ್ಲಿ ಚಾಲನೆ ಸಿಗಲಿದ್ದು, ಜುಲೈ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಜಯ್ ವೇಗ ಕಂಡು ಫ್ಯಾನ್ಸ್ ನಿಬ್ಬೆರಗಾಗಿದ್ದಾರೆ.

ದಳಪತಿ ವಿಜಯ್ ಅವರ ನಟನೆಯ ‘ವಾರಿಸು’ ಸಿನಿಮಾ ಈ ವರ್ಷ ಜನವರಿ ತಿಂಗಳಲ್ಲಿ ರಿಲೀಸ್ ಆಯಿತು. ಎಂಟು ತಿಂಗಳಲ್ಲಿ ‘ಲಿಯೋ’ ಕೆಲಸ ಪೂರ್ಣಗೊಂಡಿತು. ಹೀಗಾಗಿ ಅಕ್ಟೋಬರ್ನಲ್ಲಿ ಈ ಚಿತ್ರ ಬಿಡುಗಡೆ ಆಯಿತು. ಸದ್ಯ ವಿಜಯ್ ಬ್ರೇಕ್ನಲ್ಲಿದ್ದಾರೆ. ಜನವರಿ ವೇಳೆಗೆ ಅವರ ಹೊಸ ಸಿನಿಮಾ ಸೆಟ್ಟೇರಲಿದೆ. ಜನವರಿ 1ರಂದು ಹೊಸ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಅನವಾರಣ ಆಗುವ ಸಾಧ್ಯತೆ ಇದೆ.

‘ದಳಪತಿ 68’ ಚಿತ್ರಕ್ಕೆ ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಶಾಂತ್, ಪ್ರಭುದೇವ, ಜಯರಾಮ್, ಯೋಗಿ ಬಾಬು, ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಆದಾಗ್ಯೂ ಕೆಲವು ಸುದ್ದಿ ಹರಿದಾಡಿದೆ. ಮೇ ತಿಂಗಳಲ್ಲೇ ‘ದಳಪತಿ 68’ ಚಿತ್ರವನ್ನು ವಿಜಯ್ ಘೋಷಣೆ ಮಾಡಿದರು. ಸದ್ಯ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ಜೂನ್ ಅಥವಾ ಜುಲೈನಲ್ಲಿ ಚಿತ್ರ ರಿಲೀಸ್ ಆಗಲಿದೆ. ಈ ಮಧ್ಯೆ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿಯೂ ಜೋರಾಗಿದೆ.

ಇದನ್ನೂ ಓದಿ:ಟ್ರೇಲರ್​ ರೀತಿಯೇ ಸಿನಿಮಾದಲ್ಲೂ ಪ್ರಭಾಸ್ ಎಂಟ್ರಿ ಲೇಟ್? ವಿವರಿಸಿದ ವಿಜಯ್ ಕಿರಗಂದೂರು

‘ದಳಪತಿ 68’ ಚಿತ್ರಕ್ಕೆ ಅಟ್ಲಿ ಅವರು ನಿರ್ದೇಶನ ಮಾಡಬೇಕಿತ್ತು. ಆದರೆ, ಅವರು ವರುಣ್ ಧವನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಆ ಕಮಿಟ್ಮೆಂಟ್ನ ಪೂರ್ಣಗೊಳಿಸುವ ಜವಾಬ್ದಾರಿ ಅಟ್ಲಿ ಮೇಲಿದೆ. ಹೀಗಾಗಿ, ವಿಜಯ್ ಮುಂದಿನ ಚಿತ್ರಕ್ಕೆ ನಿರ್ದೇಶನ ಮಾಡುವ ಅವಕಾಶ ವೆಂಕಟ್ ಪ್ರಭುಗೆ ಸಿಕ್ಕಿತು. ‘ಎಜಿಎಸ್ ಎಂಟರ್ಟೇನ್ಮೆಂಟ್ ಅಡಿಯಲ್ಲಿ ‘ದಳಪತಿ 68’ ಚಿತ್ರವನ್ನು ಕಲಾಪಥಿ ಎಸ್. ಅಘೋರಂ ಅವರು ನಿರ್ದೇಶನ ಮಾಡುತ್ತಿದ್ದಾರೆ. ಯುವನ್ ಶಂಕರ್ ರಾಜ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ಅವರು 200 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆಯಿತು. ಆದಾಗ್ಯೂ ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲೊ 600 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಹೀಗಾಗಿ ನಿರ್ಮಾಪಕರು ವಿಜಯ್ಗೆ ದೊಡ್ಡ ಮೊತ್ತದ ಸಂಭಾವನೆ ಕೊಡಲು ರೆಡಿ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:48 pm, Fri, 15 December 23

ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್​ಕುಮಾರ್
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು
ಆರೋಪಿಗಳನ್ನು ವಿಜಯಪುರದ ದರ್ಗಾ ಜೈಲಿಗೆ ಕರೆದೊಯ್ದ ಪೊಲೀಸರು
ಉಪವಾಸ ಸತ್ಯಾಗ್ರಹ ನಿರತ ರೈತ ಮುಖಂಡರ ಜೊತೆ ಸಭೆ ನಡೆಸಿದ ಪ್ರಲ್ಹಾದ್ ಜೋಶಿ
ಉಪವಾಸ ಸತ್ಯಾಗ್ರಹ ನಿರತ ರೈತ ಮುಖಂಡರ ಜೊತೆ ಸಭೆ ನಡೆಸಿದ ಪ್ರಲ್ಹಾದ್ ಜೋಶಿ
ಸಿದ್ದರಾಮಯ್ಯ ಮುಂದುವರಿಯಲಿ ಅಂತ ಡಿಕೆಶಿ ಹೇಳಿದ್ದರೆ ಮಾತೇ ಮುಗೀತು: ಸಚಿವ
ಸಿದ್ದರಾಮಯ್ಯ ಮುಂದುವರಿಯಲಿ ಅಂತ ಡಿಕೆಶಿ ಹೇಳಿದ್ದರೆ ಮಾತೇ ಮುಗೀತು: ಸಚಿವ
ಕೇವಲ ವೋಟು ಗಿಟ್ಟಿಸಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದರೇ? ಮಹಿಳೆಯರು
ಕೇವಲ ವೋಟು ಗಿಟ್ಟಿಸಲು ಕಾಂಗ್ರೆಸ್ ನಾಯಕರು ಸುಳ್ಳು ಹೇಳಿದರೇ? ಮಹಿಳೆಯರು