Leo Collection: ‘ಲಿಯೋ’ ಬಿಡುಗಡೆಯಾಗಿ ಕಳೆಯಿತು ಒಂದು ವಾರ; 7 ದಿನಕ್ಕೆ ಈ ಸಿನಿಮಾದ ಕಲೆಕ್ಷನ್ ಎಷ್ಟು?
ತಮಿಳಿನ ‘ಲಿಯೋ’ ಚಿತ್ರ ಕನ್ನಡ, ಹಿಂದಿ, ತೆಲುಗು ಭಾಷೆಗೂ ಡಬ್ ಆಗಿ ತೆರೆಕಂಡಿದೆ. ‘ಭಗವಂತ್ ಕೇಸರಿ’, ‘ಘೋಸ್ಟ್’, ‘ಟೈಗರ್ ನಾಗೇಶ್ವರ ರಾವ್’, ‘ಗಣಪತ್’ ಮುಂತಾದ ಸಿನಿಮಾಗಳಿಗೆ ಇದು ಪೈಪೋಟಿ ನೀಡಿದೆ. ದಳಪತಿ ವಿಜಯ್ ಅವರು ಈ ಚಿತ್ರದಲ್ಲಿ ಎರಡು ಶೇಡ್ನ ಪಾತ್ರ ಮಾಡಿದ್ದಾರೆ. ಸಿನಿಮಾದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ..

ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ‘ಲಿಯೋ’ ಸಿನಿಮಾ (Thalapathy Vijay) ಬಿಡುಗಡೆ ಆಯಿತು. ಇದೇ ಸಮಯಕ್ಕೆ ಅನೇಕ ಚಿತ್ರಗಳ ತೆರೆಕಂಡಿದ್ದರಿಂದ ಪೈಪೋಟಿ ಜೋರಾಗಿತ್ತು. ಅದರ ನಡುವೆಯೂ ‘ಲಿಯೋ’ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಈ ಚಿತ್ರ ರಿಲೀಸ್ ಆಗಿ ಒಂದು ವಾರ ಕಳೆದಿದೆ. 7 ದಿನಕ್ಕೆ ಈ ಸಿನಿಮಾ ಎಷ್ಟು ಗಳಿಸಿದೆ ಎಂಬ ಲೆಕ್ಕ ಕೂಡ ಸಿಕ್ಕಿದೆ. ದಳಪತಿ ವಿಜಯ್ (Thalapathy Vijay) ಅವರು ಈ ಚಿತ್ರದಲ್ಲಿ ಎರಡು ಶೇಡ್ನ ಪಾತ್ರ ಮಾಡಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಅವರ ನಿರ್ದೇಶಕನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರ ನಡುವೆಯೂ ವಿಶ್ವ ಬಾಕ್ಸ್ ಆಫೀಸ್ನಲ್ಲಿ ‘ಲಿಯೋ’ ಚಿತ್ರ ಗಮನಾರ್ಹ ಮಟ್ಟದಲ್ಲಿ ಕಲೆಕ್ಷನ್ (Leo Box Office Collection) ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ವರದಿಗಳ ಪ್ರಕಾರ, ‘ಲಿಯೋ’ ಸಿನಿಮಾ ಭಾರತದಲ್ಲಿ ಮೊದಲ ದಿನ ಗಳಿಸಿದ್ದು 64.80 ಕೋಟಿ ರೂಪಾಯಿ. 2ನೇ ದಿನ 35.25 ಕೋಟಿ ರೂಪಾಯಿ ಬಾಚಿಕೊಂಡಿತು. 3ನೇ ದಿನ 39.80 ಕೋಟಿ ರೂಪಾಯಿ, ನಾಲ್ಕನೇ ದಿನ 41.55 ಕೋಟಿ ರೂಪಾಯಿ, ಐದನೇ ದಿನ 35.70 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. 6ನೇ ದಿನ 32.7 ಕೋಟಿ ರೂಪಾಯಿ ಆದಾಯ ಹರಿದುಬಂತು. 7ನೇ ದಿನವಾದ ಸೆಪ್ಟೆಂಬರ್ 25ರಂದು 12 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ‘ಬೀಸ್ಟ್ಗಿಂತ ನಾಲ್ಕುಪಟ್ಟು ಕೆಟ್ಟದಾಗಿದೆ’; ‘ಲಿಯೋ’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್
ಭಾರತದಲ್ಲಿ ‘ಲಿಯೋ’ ಸಿನಿಮಾ ಈವರೆಗೆ ಅಂದಾಜು 250 ಕೋಟಿ ರೂಪಾಯಿ ಗಳಿಸಿದ್ದು, 300 ಕೋಟಿ ರೂಪಾಯಿ ಗಳಿಸುವತ್ತ ಮುನ್ನುಗ್ಗುತ್ತಿದೆ. ವಿದೇಶಗಳಿಂದ ಆದ ಕಲೆಕ್ಷನ್ ಕೂಡ ಸೇರಿಸಿದರೆ 7 ದಿನಕ್ಕೆ ಈ ಸಿನಿಮಾ 500 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿದೆ. ಇಂದಿಗೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. 2ನೇ ವೀಕೆಂಡ್ನಲ್ಲಿ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ. ಈ ವರ್ಷ ತೆರೆಕಂಡ ‘ಜೈಲರ್’ ಸಿನಿಮಾ ವಿಶ್ವಾದ್ಯಂತ 604 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ‘ಲಿಯೋ’ ಹಿಂದಿಕ್ಕಲಿದೆಯೇ ಎಂಬದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ರೇಟಿಂಗ್ ವಿಚಾರದಲ್ಲಿ ‘ಲಿಯೋ’, ‘ಭಗವಂತ್ ಕೇಸರಿ’ ಚಿತ್ರಗಳನ್ನು ಹಿಂದಿಕ್ಕಿದ ‘ಘೋಸ್ಟ್’
‘ಲಿಯೋ’ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ತ್ರಿಶಾ ಕೃಷ್ಣನ್, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ಮೆನನ್, ಪ್ರಿಯಾ ಆನಂದ್ ಮುಂತಾದವರು ನಟಿಸಿದ್ದಾರೆ. ಸಿನಿಮಾದಲ್ಲಿನ ಆ್ಯಕ್ಷನ್ ದೃಶ್ಯಗಳು ಗಮನ ಸೆಳೆದಿವೆ. ಐಎಂಡಿಬಿಯಲ್ಲಿ ಈ ಸಿನಿಮಾ 10ಕ್ಕೆ 8 ರೇಟಿಂಗ್ ಪಡೆದಿದೆ. ಕನ್ನಡ, ಹಿಂದಿ, ತೆಲುಗು ಭಾಷೆಗೂ ಡಬ್ ಆಗಿ ಈ ಚಿತ್ರ ತೆರೆಕಂಡಿದೆ. ‘ಭಗವಂತ್ ಕೇಸರಿ’, ‘ಘೋಸ್ಟ್’, ‘ಟೈಗರ್ ನಾಗೇಶ್ವರ ರಾವ್’, ‘ಗಣಪತ್’ ಮುಂತಾದ ಸಿನಿಮಾಗಳಿಗೆ ‘ಲಿಯೋ’ ಪೈಪೋಟಿ ನೀಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




