ಕಾವೇರಿ ಬಿಕ್ಕಟ್ಟಿನ ನಡುವೆ ಬಿಡುಗಡೆ ಆಗಲಿದೆ ‘ಲಿಯೋ’; ಏನಾಗಬಹುದು ಬಾಕ್ಸ್ ಆಫೀಸ್ ಭವಿಷ್ಯ?
ಈ ವರ್ಷ ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳು ರಾರಾಜಿಸಿವೆ. ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗಿರುವುದು ಗೊತ್ತೇ ಇದೆ. ಇದರ ಬೆನ್ನಲ್ಲೇ ದಳಪತಿ ವಿಜಯ್ ನಟನೆಯ ‘ಲಿಯೋ’ ಚಿತ್ರ ಅ.19ರಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಅದೇ ದಿನ ಕನ್ನಡದಲ್ಲಿ ‘ಘೋಸ್ಟ್’ ಸಿನಿಮಾ ಸಹ ತೆರೆ ಕಾಣಲಿದೆ.
ಪ್ರತಿ ಬಾರಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ಬಿಕ್ಕಟ್ಟು (Cauvery Dispute) ಉಂಟಾದಾಗ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತದೆ. ತಮಿಳಿನ ಸಿನಿಮಾಗಳ (Tamil Cinema) ಮೇಲೆ ಕರುನಾಡಿನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ತಮಿಳು ನಟ ಸಿದ್ದಾರ್ಥ್ ಅಭಿನಯದ ‘ಚಿಕ್ಕು’ ಸಿನಿಮಾದ ಸುದ್ದಿಗೋಷ್ಠಿಗೆ ಅಡ್ಡಿಪಡಿಸಲಾಯಿತು. ಆ ಘಟನೆಗೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಮಧ್ಯೆಯೂ ತಮಿಳಿನ ‘ಲಿಯೋ’ ಸಿನಿಮಾ (Leo Movie) ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 19ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಕನ್ನಡಕ್ಕೂ ಡಬ್ ಆಗಿ ಕರ್ನಾಟಕದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಕಾವೇರಿ ಕಾವು ಇರುವುದರಿಂದ ಕರ್ನಾಟಕದಲ್ಲಿ ‘ಲಿಯೋ’ ಬಾಕ್ಸ್ ಆಫೀಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ದಳಪತಿ ವಿಜಯ್ ಅವರು ‘ಲಿಯೋ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ತ್ರಿಶಾ, ಸಂಜಯ್ ದತ್ ಮುಂತಾದ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ನಿರ್ಮಾಣವಾದ ‘ಲಿಯೋ’ ಮೇಲೆ ದಳಪತಿ ವಿಜಯ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರ್ನಾಟಕದಲ್ಲಿನ ಪ್ರೇಕ್ಷಕರು ಈ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬ ಕೌತುಕ ಮೂಡಿದೆ.
ಇದನ್ನೂ ಓದಿ: ಕೇರಳದಲ್ಲಿ ‘ಲಿಯೋ’ ಚಿತ್ರಕ್ಕೆ ಬಹಿಷ್ಕಾರ; ಫ್ಯಾನ್ಸ್ ಮಾಡಿದ ತಪ್ಪಿನಿಂದ ನಿರ್ಮಾಪಕರಿಗೆ ತೊಂದರೆ
ಈ ವರ್ಷ ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳು ರಾರಾಜಿಸಿವೆ. ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗಿರುವುದು ಗೊತ್ತೇ ಇದೆ. ಇದರ ಬೆನ್ನಲ್ಲೇ ದಳಪತಿ ವಿಜಯ್ ನಟನೆಯ ‘ಲಿಯೋ’ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಕಾವೇರಿ ವಿವಾದ ಜೋರಾಗಿರುವ ಕಾರಣ ಕರ್ನಾಟಕದಲ್ಲಿ ‘ಲಿಯೋ’ ಬಿಡುಗಡೆಗೆ ಅಡೆತಡೆ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ನಿರ್ಮಾಪಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ‘ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ದಾರ್ಥ್ಗೆ ನಾನು ಕ್ಷಮೆ ಕೇಳುತ್ತೇನೆ’; ನೇರ ಮಾತಲ್ಲಿ ಹೇಳಿದ ಶಿವಣ್ಣ
ದಸರಾ ಹಬ್ಬದ ಸಂದರ್ಭದಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಶಿವರಾಜ್ಕುಮಾರ್ ನಟನೆಯ ‘ಘೋಸ್ಟ್’ ಚಿತ್ರ ಅಕ್ಟೋಬರ್ 19ರಂದು ರಿಲೀಸ್ ಆಗಲಿದೆ. ಆ ಚಿತ್ರ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ, ಬೇರೆ ಬೇರೆ ಭಾಷೆಯಲ್ಲಿ ತೆರೆಕಾಣಲಿದೆ. ತಮಿಳುನಾಡಿನಲ್ಲಿ ‘ಘೋಸ್ಟ್’ ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಸಿಗಲಿದೆ ಎಂಬುದುನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.