ಕೇರಳದಲ್ಲಿ ‘ಲಿಯೋ’ ಚಿತ್ರಕ್ಕೆ ಬಹಿಷ್ಕಾರ; ಫ್ಯಾನ್ಸ್ ಮಾಡಿದ ತಪ್ಪಿನಿಂದ ನಿರ್ಮಾಪಕರಿಗೆ ತೊಂದರೆ
ಈ ಕಿರಿಕ್ ಶುರುವಾಗಲು ಕಾರಣ ಆಗಿರುವುದೇ ಅಭಿಮಾನಿಗಳು. ದಳಪತಿ ವಿಜಯ್ ಫ್ಯಾನ್ಸ್ ಮತ್ತು ಮೋಹನ್ಲಾಲ್ ಫ್ಯಾನ್ಸ್ ಚಿಕ್ಕ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜಗಳ ಮಾಡಿಕೊಂಡಿದ್ದಾರೆ. ಕೇರಳದಲ್ಲಿ ‘ಲಿಯೋ’ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂಬ ಮಟ್ಟಕ್ಕೆ ಆ ಜಗಳ ತಲುಪಿದೆ. ಆ ಬಗ್ಗೆ ಇಲ್ಲಿದೆ ವಿವರ..
ನಟ ದಳಪತಿ ವಿಜಯ್ (Thalapathy Vijay) ಅವರು ‘ವಾರಿಸು’ ಸಿನಿಮಾದ ಬಳಿಕ ‘ಲಿಯೋ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆದರು. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅದಕ್ಕೆ ಕಾರಣಗಳು ಹಲವು. ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸಂಜಯ್ ದತ್, ತ್ರಿಶಾ ಮುಂತಾದ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇಷ್ಟೆಲ್ಲ ಹೈಪ್ ಸೃಷ್ಟಿ ಮಾಡಿರುವ ‘ಲಿಯೋ’ (Leo Movie) ಸಿನಿಮಾಗೆ ಕೇರಳದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಬಗ್ಗೆ ಕೇರಳದ ಮಂದಿ ಕಿಡಿಕಾರುತ್ತಿದ್ದಾರೆ. ಅದರಲ್ಲೂ ಮೋಹನ್ಲಾಲ್ ಅಭಿಮಾನಿಗಳು ಹೆಚ್ಚು ಗರಂ ಆಗಿದ್ದಾರೆ. ‘ಲಿಯೋ’ ಸಿನಿಮಾವನ್ನು ಬಹಿಷ್ಕರಿಸುವಂತೆ ಮೋಹನ್ಲಾಲ್ (Mohanlal) ಫ್ಯಾನ್ಸ್ ಕರೆನೀಡಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ #KeralaBoycottLEO ಹ್ಯಾಶ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಒಟ್ಟಾರೆ ಈ ಕಿರಿಕ್ ಶುರುವಾಗಲು ಕಾರಣ ಆಗಿರುವುದು ಅಭಿಮಾನಿಗಳು. ದಳಪತಿ ವಿಜಯ್ ಫ್ಯಾನ್ಸ್ ಮತ್ತು ಮೋಹನ್ಲಾಲ್ ಫ್ಯಾನ್ಸ್ ಚಿಕ್ಕ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜಗಳ ಮಾಡಿಕೊಂಡಿದ್ದಾರೆ. 2014ರಲ್ಲಿ ತೆರೆಕಂಡ ‘ಜಿಲ್ಲಾ’ ಸಿನಿಮಾದಲ್ಲಿ ದಳಪತಿ ವಿಜಯ್ ಮತ್ತು ಮೋಹನ್ಲಾಲ್ ನಟಿಸಿದ್ದರು. ಮೋಹನ್ಲಾಲ್ ಅವರ ನಟನೆ ಬಗ್ಗೆ ವಿಜಯ್ ಅವರ ಅಭಿಮಾನಿಯೊಬ್ಬ ಕೆಟ್ಟದಾಗಿ ಕಮೆಂಟ್ ಮಾಡಿದ ಬಳಿಕ ಈ ವಾರ್ ಶುರುವಾಗಿದೆ. ಹಾಗಾಗಿ ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾವನ್ನು ಕೇರಳದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಮೋಹನ್ಲಾಲ್ ಫ್ಯಾನ್ಸ್ ಪಟ್ಟುಹಿಡಿದಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ ಹೆಸರಲ್ಲಿ ಪ್ರಿಯಾಮಣಿಗೆ ಮೋಸ ಮಾಡಿದ ‘ಜವಾನ್’ ನಿರ್ದೇಶಕ ಅಟ್ಲಿ
ದಳಪತಿ ವಿಜಯ್ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಲಿಯೋ’ ಸಿನಿಮಾ ಬಿಡುಗಡೆ ಆಗಲಿದೆ. ತಮಿಳಿನ ಈ ಸಿನಿಮಾ ಕನ್ನಡ, ಮಲಯಾಳಂ, ಹಿಂದಿ ಮತ್ತು ತೆಲುಗಿಗೆ ಡಬ್ ಆಗಿ ತೆರೆ ಕಾಣಲಿದೆ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಒಂದು ವೇಳೆ ಬಹಿಷ್ಕಾರದ ಬಿಸಿ ತಟ್ಟಿದರೆ ನಿರ್ಮಾಪಕರಿಗೆ ತೊಂದರೆ ಆಗಲಿದೆ. ಅಭಿಮಾನಿಗಳು ಶುರುಮಾಡಿದ ಕಿರಿಕ್ ಬಗ್ಗೆ ಮೋಹನ್ಲಾಲ್ ಮತ್ತು ದಳಪತಿ ವಿಜಯ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ: ದಳಪತಿ ವಿಜಯ್ ಮಗ ಜೇಸನ್ ಸಂಜಯ್ ಈಗ ಡೈರೆಕ್ಟರ್; ‘ಲೈಕಾ ಪ್ರೊಡಕ್ಷನ್ಸ್’ ಜೊತೆ ಕೈ ಜೋಡಿಸಿದ ಸ್ಟಾರ್ ಕಿಡ್
ಅಕ್ಟೋಬರ್ 19ರಂದು ‘ಲಿಯೋ’ ರಿಲೀಸ್ ಆಗಲಿದೆ. ಲೋಕೇಶ್ ಕನಗರಾಜ್ ಅವರು ಈ ಮೊದಲು ನಿರ್ದೇಶನ ಮಾಡಿದ್ದ ‘ಕೈದಿ’, ‘ವಿಕ್ರಮ್’ ಸಿನಿಮಾಗಳ ಕಥೆಗೂ ‘ಲಿಯೋ’ ಸಿನಿಮಾದ ಕಥೆಗೂ ಲಿಂಕ್ ಇದೆ ಎಂದು ಬಹುತೇಕರು ಊಹಿಸುತ್ತಿದ್ದಾರೆ. ಆ ಕಾರಣದಿಂದಲೂ ಈ ಸಿನಿಮಾ ಮೇಲೆ ಕುತೂಹಲ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಈ ಸಿನಿಮಾತಂಡದಿಂದ ಸಂಜಯ್ ದತ್ ಅವರ ಪೋಸ್ಟರ್ ಬಿಡುಗಡೆ ಆಗಿದ್ದು, ಅದು ವೈರಲ್ ಆಗಿದೆ. ‘ಜವಾನ್’, ‘ಜೈಲರ್’ ಸಿನಿಮಾಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅನಿರುದ್ಧ್ ರವಿಚಂದರ್ ಅವರು ‘ಲಿಯೋ’ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.