AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಿಯೋ’ ಸಿನಿಮಾ ಪೋಸ್ಟರ್ ಬಿಡುಗಡೆ: ರಾಕ್ಷಸನೊಂದಿಗೆ ಮುಖಾ-ಮುಖಿ

Vijay: ವಿಜಯ್ ನಟಿಸಿ, ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ 'ಲಿಯೋ' ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದೆ. ಪೋಸ್ಟರ್​ನಲ್ಲಿ ಸಂಜಯ್ ದತ್ ಸಹ ಇದ್ದಾರೆ.

'ಲಿಯೋ' ಸಿನಿಮಾ ಪೋಸ್ಟರ್ ಬಿಡುಗಡೆ: ರಾಕ್ಷಸನೊಂದಿಗೆ ಮುಖಾ-ಮುಖಿ
Vijay
ಮಂಜುನಾಥ ಸಿ.
|

Updated on: Sep 21, 2023 | 9:09 PM

Share

ಕಮಲ್ ಹಾಸನ್ (Kamal Haasan) ‘ವಿಕ್ರಂ’ ಸಿನಿಮಾ ಸೂಪರ್ ಹಿಟ್ ಆಗಿದೆ, ಅದರ ಬೆನ್ನಲ್ಲೆ ರಜನೀಕಾಂತ್​ರ (Rajinikanth) ‘ಜೈಲರ್’ (Jailer) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಇದೀಗ ತಮಿಳು ಸಿನಿಮಾ ಪ್ರಿಯರ ಕಣ್ಣು ವಿಜಯ್ ನಟನೆಯ ‘ಲಿಯೋ’ ಸಿನಿಮಾದ ಮೇಲಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾದ ಪೋಸ್ಟರ್ ಒಂದು ಇಂದು (ಸೆಪ್ಟೆಂಬರ್ 21) ಬಿಡುಗಡೆ ಆಗಿದ್ದು, ನಾಯಕ-ಖಳನ ಮುಖಾ-ಮುಖಿಯ ತೀವ್ರತೆಯನ್ನು ಪೋಸ್ಟರ್ ಎತ್ತಿ ತೋರಿಸುತ್ತಿದೆ.

ಈ ವರೆಗೆ ಬಿಡುಗಡೆ ಆಗಿದ್ದ ಪೋಸ್ಟರ್​ಗಳಲ್ಲಿ ವಿಜಯ್ ಒಬ್ಬರ ಚಿತ್ರವನ್ನು ಮಾತ್ರವೇ ತೋರಿಸಿದ್ದರು. ಇಂದು ಬಿಡುಗಡೆ ಆಗಿರುವ ಪೋಸ್ಟರ್​ನಲ್ಲಿ ವಿಜಯ್ ಜೊತೆಗೆ ವಿಲನ್ ಸಂಜಯ್ ದತ್ ಚಿತ್ರವನ್ನೂ ತೋರಿಸಲಾಗಿದೆ. ಪೋಸ್ಟರ್​ನಲ್ಲಿ ವಿಜಯ್ ಹಾಗೂ ಸಂಜಯ್ ದತ್ ನಡುವೆ ಭರ್ಜರಿ ಮಾರಾ-ಮಾರಿ ನಡೆಯುತ್ತಿದೆ. ಜೊತೆಗೆ ಶಾಂತವಾಗಿರುವ ರಾಕ್ಷಸನನ್ನು ಎದುರಿಸು ಎಂಬರ್ಥದ ‘ಕೀಪ್ ಕಾಮ್ ಆಂಡ್ ಫೇಸ್​ ದಿ ಡೆವಿಲ್’ ಎಂಬ ಸಾಲು ಬರೆಯಲಾಗಿದೆ.

‘ಲಿಯೋ’ ಸಿನಿಮಾದ ಈವರೆಗೆ ಬಿಡುಗಡೆ ಆಗಿರುವ ಪೋಸ್ಟರ್​ಗಳಲ್ಲಿ ‘ಕೀಪ್ ಕಾಮ್’ ಪದವನ್ನು ಬಳಸಲಾಗಿದೆ. ಮೊದಲಿಗೆ ಶಾಂತವಾಗಿರು ಯುದ್ಧವನ್ನು ತಡೆಯಲು ಪ್ರಯತ್ನಿಸು, ಬಳಿಕ ಬಿಡುಗಡೆ ಮಾಡಿದ ಪೋಸ್ಟರ್​ನಲ್ಲಿ ಶಾಂತವಾಗಿರುವ ಇದರಿಂದ ನೀನು ಬಚಾವಾಗಲು ಯತ್ನಿಸು ಎಂದಿತ್ತು. ಬಳಿಕ ಬಿಡುಗಡೆ ಆದ ಪೋಸ್ಟರ್​ನಲ್ಲಿ ಶಾಂತವಾಗಿರುವ ಯುದ್ಧಕ್ಕೆ ತಯಾರಿ ಮಾಡಿಕೊ ಎಂದು ಬರೆಯಲಾಗಿತ್ತು. ಈಗ ಬಿಡುಗಡೆ ಮಾಡಿರುವ ಪೋಸ್ಟರ್​ನಲ್ಲಿ ಶಾಂತವಾಗಿರುವ ರಾಕ್ಷಸನನ್ನು ಎದುರಿಸು ಎಂದು ಬರೆಯಲಾಗಿದೆ. ಪೋಸ್ಟರ್​ನಲ್ಲಿಯೇ ಕತೆಯ ಮಾಡೆಲ್ ಹೇಗಿರಲಿದೆ ಎಂಬುದನ್ನು ನಿರ್ದೇಶಕ ಲೋಕೇಶ್ ಕನಗರಾಜ್ ಹೇಳಿಬಿಟ್ಟಿದ್ದಾರೆ.

ಇದನ್ನೂ ಓದಿ:‘ಇದು ಕೊರೊನಾಗಿಂತ ದೊಡ್ಡ ಕಾಯಿಲೆ, ಅದಕ್ಕೆ ಮದ್ದು ಇಲ್ಲ’: ದುನಿಯಾ ವಿಜಯ್​ ಹೇಳಿದ್ದು ಯಾವುದರ ಬಗ್ಗೆ?

‘ಲಿಯೋ’ ಸಿನಿಮಾದ ಬಗ್ಗೆ ಭಾರಿ ದೊಡ್ಡ ನಿರೀಕ್ಷೆ ವಿಜಯ್ ಅಭಿಮಾನಿಗಳು ಹಾಗೂ ಒಟ್ಟಾರೆ ಮಾಸ್ ಸಿನಿಮಾ ಪ್ರಿಯರಿಗೆ ಇದೆ. ‘ವಿಕ್ರಂ’, ‘ಖೈದಿ’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಲೋಕೇಶ್ ಕನಗರಾಜ್ ‘ಲಿಯೋ’ ಮೂಲಕ ಇನ್ನೂ ಅದ್ಭುತವಾದ ಮಾಸ್ ಎಂಟರ್ಟೈನರ್ ನೀಡುವ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

‘ಲಿಯೋ’ ಸಿನಿಮಾ ಸಖತ್ ಸ್ಟೈಲಿಷ್ ಆಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾವನ್ನು ಕಾಶ್ಮೀರ ಸೇರಿದಂತೆ ಹಲವು ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಂಜಯ್ ದತ್ ಸೇರಿದಂತೆ ಹಲವು ಉತ್ತಮ ನಟರು ಸಿನಿಮಾದಲ್ಲಿದ್ದಾರೆ. ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿದ್ದಾರೆ. ನಟ ಅರ್ಜುನ್ ಸರ್ಜಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ದಶಕದ ಬಳಿಕ ಈ ಇಬ್ಬರು ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ಸಿನಿಮಾವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ.

‘ಮಾಸ್ಟರ್’ ಸಿನಿಮಾ ಬಳಿಕ ವಿಜಯ್​ ಗಾಗಿ ಲೋಕೇಶ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ‘ಲಿಯೋ’ ಈ ಸಿನಿಮಾದ ಬಳಿಕ ಲೋಕೇಶ್ ‘ವಿಕ್ರಂ2’, ಆ ಬಳಿಕ ಕಮಲ್ ಹಾಸನ್ ಜೊತೆಗೆ ಒಂದು ಸಿನಿಮಾ. ಅದರ ಬಳಿಕ ‘ಖೈದಿ 2’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ