ಎರಡು ಪಾರ್ಟ್​ಗಳಲ್ಲಿ ಬರಲು ಸಿದ್ಧವಾದ ‘ಲಿಯೋ’ ಸಿನಿಮಾ; ವಿಜಯ್ ರಾಜಕೀಯದ ಕಥೆ ಏನು?

ಇತ್ತೀಚೆಗೆ ಸಿನಿಮಾದ ಕಥೆಯನ್ನು ಎರಡು ಪಾರ್ಟ್​ಗಳಲ್ಲಿ ಹೇಳುವ ಟ್ರೆಂಡ್ ಜೋರಾಗಿದೆ. ‘ಬಾಹುಬಲಿ’, ‘ಕೆಜಿಎಫ್’ ಮೊದಲಾದ ಚಿತ್ರಗಳು ಎರಡು ಭಾಗಗಳಲ್ಲಿ ಬಂದಿವೆ. ‘ಪುಷ್ಪ’, ‘ಸಪ್ತ ಸಾಗರದಾಚೆ ಎಲ್ಲೋ’, ‘ಕಬ್ಜ’, ‘ಸಲಾರ್’ ಮೊದಲಾದ ಚಿತ್ರಗಳು ಎರಡು ಭಾಗದಲ್ಲಿ ಬರಲು ರೆಡಿ ಆಗಿವೆ. ಅದೇ ರೀತಿ ‘ಲಿಯೋ’ ಸಿನಿಮಾ ಕೂಡ ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಎಂದು ತಿಳಿದು ಬಂದಿದೆ.

 ಎರಡು ಪಾರ್ಟ್​ಗಳಲ್ಲಿ ಬರಲು ಸಿದ್ಧವಾದ ‘ಲಿಯೋ’ ಸಿನಿಮಾ; ವಿಜಯ್ ರಾಜಕೀಯದ ಕಥೆ ಏನು?
ದಳಪತಿ ವಿಜಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 10, 2023 | 12:31 PM

ನಟ ದಳಪತಿ ವಿಜಯ್ ಅವರು ಸದ್ಯ ‘ಲಿಯೋ’ ಸಿನಿಮಾ (Leo Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದೆಷ್ಟೇ ದೊಡ್ಡ ಬಜೆಟ್ ಚಿತ್ರವಾದರೂ ಅವರು ಬಹುಬೇಗ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ‘ಲಿಯೋ’ ಸಿನಿಮಾ. ಜನವರಿ ತಿಂಗಳಲ್ಲಿ ಈ ಚಿತ್ರದ ಕೆಲಸಗಳು ಆರಂಭ ಆಗಿದ್ದವು. ಈಗ ಬಹುತೇಕ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ ಎನ್ನಲಾಗಿದೆ. ದಸರಾಗೆ ಈ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಸೀಕ್ವೆಲ್ ಕೂಡ ಬರಲಿದೆ ಎನ್ನುವ ಸುದ್ದಿ ಹರಿದಾಡಿದೆ.

ಲೋಕೇಶ್ ಕನಗರಾಜ್ ಅವರು ‘ಲಿಯೋ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನ ಬೇರೆಯದೇ ರೀತಿಯಲ್ಲಿ ಇರುತ್ತದೆ. ಅವರು ತಮ್ಮದೇ ಆದ ಯೂನಿವರ್ಸ್​ ಸಿದ್ಧಪಡಿಸಿದ್ದಾರೆ. ‘ಕೈದಿ’ ಸಿನಿಮಾವನ್ನು ಅವರು ನಿರ್ದೇಶನ ಮಾಡಿದರು. ಇದಾದ ಬಳಿಕ ‘ವಿಕ್ರಮ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದರು. ಎರಡೂ ಚಿತ್ರಕ್ಕೆ ಕನೆಕ್ಷನ್ ನೀಡಲಾಯಿತು. ಈಗ ‘ಕೈದಿ 2’ ಬರಲಿದೆ. ‘ವಿಕ್ರಮ್’ ಚಿತ್ರದ ಕಥೆ ಕೂಡ ಮುಂದುವರಿಯಲಿದೆ. ಇದರ ಜೊತೆಗೆ ‘ಲಿಯೋ 2’ ಸಿನಿಮಾ ಕೂಡ ಬರಲಿದೆಯಂತೆ.

ಇತ್ತೀಚೆಗೆ ಸಿನಿಮಾದ ಕಥೆಯನ್ನು ಎರಡು ಪಾರ್ಟ್​ಗಳಲ್ಲಿ ಹೇಳುವ ಟ್ರೆಂಡ್ ಜೋರಾಗಿದೆ. ‘ಬಾಹುಬಲಿ’, ‘ಕೆಜಿಎಫ್’ ಮೊದಲಾದ ಚಿತ್ರಗಳು ಎರಡು ಭಾಗಗಳಲ್ಲಿ ಬಂದಿವೆ. ‘ಪುಷ್ಪ’, ‘ಸಪ್ತ ಸಾಗರದಾಚೆ ಎಲ್ಲೋ’, ‘ಕಬ್ಜ’, ‘ಸಲಾರ್’ ಮೊದಲಾದ ಚಿತ್ರಗಳು ಎರಡು ಭಾಗದಲ್ಲಿ ಬರಲು ರೆಡಿ ಆಗಿವೆ. ಅದೇ ರೀತಿ ‘ಲಿಯೋ’ ಸಿನಿಮಾ ಕೂಡ ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಎಂದು ತಿಳಿದು ಬಂದಿದೆ. ‘ಕೈದಿ’ ಚಿತ್ರಕ್ಕೆ ‘ವಿಕ್ರಮ್’ ಚಿತ್ರಕ್ಕೆ ಕನೆಕ್ಷನ್ ನೀಡಲಾಗಿತ್ತು. ಅದೇ ರೀತಿ ‘ವಿಕ್ರಮ್’ ಚಿತ್ರಕ್ಕೆ ‘ಲಿಯೋ’ ಚಿತ್ರಕ್ಕೆ ಲಿಂಕ್ ಇರಲಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

‘ಲಿಯೋ’ ವಿಜಯ್ ನಟನೆಯ 67ನೇ ಸಿನಿಮಾ. ಅವರ 68ನೇ ಚಿತ್ರಕ್ಕೆ ವೆಂಕಟ್ ಪ್ರಭು ನಿರ್ದೇಶನ ಮಾಡಲಿದ್ದಾರೆ. ‘ದಳಪತಿ 69’ ಸಿನಿಮಾಗಾಗಿ ಲೋಕೇಶ್ ಕನಗರಾಜ್ ಹಾಗೂ ವಿಜಯ್ ಜೊತೆ ಆಗಲಿದ್ದು, ಅದು ‘ಲಿಯೋ 2’ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನಿವೃತ್ತಿ ಪಡೆಯುವ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ‘ಕೈದಿ’, ‘ವಿಕ್ರಮ್​’, ‘ಲಿಯೋ’ ಚಿತ್ರಗಳ ನಿರ್ದೇಶಕ ಲೋಕೇಶ್​ ಕನಗರಾಜ್​

ಲೋಕೇಶ್ ಕನಗರಾಜ್ ಅವರು ಖಾಲಿ ಕುಳಿತಿಲ್ಲ. ಅವರು ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ‘ಕೈದಿ 2’ ಹಾಗೂ ರಜನಿ ಅವರ 171ನೇ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಜೊತೆ ತೆಲುಗು ಸಿನಿಮಾ ಮಾಡುತ್ತಿದ್ದು, ಮೈತ್ರಿ ಮೂವೀ ಮೇಕರ್ಸ್ ಇದಕ್ಕೆ ಬಂಡವಾಳ ಹೂಡುತ್ತಿದೆ. ಈ ಎಲ್ಲಾ ಚಿತ್ರಗಳ ಮಧ್ಯೆ ಯಾವ ರೀತಿಯಲ್ಲಿ ಕನೆಕ್ಷನ್ ನೀಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯ್ ಅವರು ರಾಜಕೀಯದಲ್ಲಿ ಆ್ಯಕ್ಟೀವ್ ಆಗಲಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಈ ಸುದ್ದಿಗೆ ಇತ್ತೀಚೆಗೆ ಹೆಚ್ಚು ಪುಷ್ಟಿ ಸಿಕ್ಕಿದೆ. ಅವರು ರಾಜಕೀಯ ಎಂಟ್ರಿಗೆ ಪೂರಕವಾಗಿ ಏನೆಲ್ಲ ಬೇಕೋ ಅದನ್ನು ಮಾಡುತ್ತಿದ್ದಾರೆ. ಈ ಕಾರಣಕ್ಕೆ ವೆಂಕಟ್ ಪ್ರಭು ಜೊತೆಗಿನ ಸಿನಿಮಾ ಅವರ ಕೊನೆ ಚಿತ್ರ ಆಗಲಿದೆ ಎಂದು ಹೇಳಲಾಗಿತ್ತು. ಅಚ್ಚರಿ ಎಂಬಂತೆ ಅವರು ಮತ್ತೊಂದು ಸಿನಿಮಾಗೆ ಸಿದ್ಧತೆ ಮಾಡಿಕೊಂಡಿರುವುದು ಸಹಜವಾಗಿಯೇ ಕುತೂಹಲ ಸೃಷ್ಟಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:27 pm, Thu, 10 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ