AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿಷಾ ಕಾರಲ್ಲಿ ಕ್ರಾಸ್ ಚಿಹ್ನೆ; ಇದರ ಅಸಲಿಯತ್ತೇನು?

ದಳಪತಿ ವಿಜಯ್ ಮತ್ತು ತ್ರಿಷಾ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಹರಡಿವೆ. ಇತ್ತೀಚೆಗೆ ತ್ರಿಷಾ ಕಾರಿನಲ್ಲಿ ಕಂಡ ಕ್ರಾಸ್ ಚಿಹ್ನೆ, ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಅಥವಾ ವಿಜಯ್‌ರನ್ನು ಮದುವೆಯಾಗಲಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ. ವಿಜಯ್ ಕ್ರಿಶ್ಚಿಯನ್ ಆಗಿದ್ದು, ಅವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬೆಳವಣಿಗೆಗಳು ಕಾಲಿವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿವೆ.

ತ್ರಿಷಾ ಕಾರಲ್ಲಿ ಕ್ರಾಸ್ ಚಿಹ್ನೆ; ಇದರ ಅಸಲಿಯತ್ತೇನು?
ತ್ರಿಷಾ
ರಾಜೇಶ್ ದುಗ್ಗುಮನೆ
|

Updated on: May 01, 2026 | 12:10 PM

Share

ತಮಿಳು ನಟ ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರ ಸ್ನೇಹದ ವಿಷಯ ಆಗಾಗ ಚರ್ಚೆ ಆಗುಇತ್ತಲೇ ಇರುತ್ತದೆ. ಕಳೆದ ಹಲವು ತಿಂಗಳುಗಳಿಂದ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದೇ ಸಂದರ್ಭದಲ್ಲಿ ವಿಜಯ್ ಪತ್ನಿ ಸಂಗೀತಾ, ಪತಿಗೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದು ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿತು. ಈಗ ನಟಿ ತ್ರಿಷಾ ಅವರ ಕಾರಿನಲ್ಲಿ ಕಾಣಿಸಿಕೊಂಡ ಒಂದು ಕ್ರಾಸ್ ಚಿಹ್ನೆ ಚರ್ಚೆಗೆ ಕಾರಣ ಆಗಿದೆ. ಇದು ಚರ್ಚೆ ಮಾಡುವ ವಿಷಯವೇ ಅಲ್ಲ ಎಂದು ಅನೇಕರು ಹೇಳಿದ್ದಾರೆ.

ಇತ್ತೀಚೆಗೆ ತಮಿಳುನಾಡು ಚುನಾವಣೆ ನಡೆದಿದೆ. ಮತದಾನ ಮಾಡಿದ ತ್ರಿಷಾ ಅವರು, ಜನರ ಬಳಿಯೂ ಮತ ಹಾಕುವಂತೆ ಕೋರಿದರು. ಇದಕ್ಕಾಗಿ ಅವರು ತಮ್ಮ ಕಾರಿನಲ್ಲಿ ಕುಳಿತು, ಇಂಕ್ ಹಾಕಿರುವ ಬೆರಳನ್ನು ತೋರಿಸುತ್ತಿದ್ದರು. ಈ ಫೋಟೋದಲ್ಲಿ ತ್ರಿಷಾ ಅವರ ಕಾರಿನ ಮುಂಭಾಗದಲ್ಲಿ ಕ್ರೈಸ್ತ ಧರ್ಮದ ಸಂಕೇತವಾದ ‘ಕ್ರಾಸ್’ (Cross) ಇರುವುದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ತ್ರಿಷಾ ಮೂಲತಃ ಹಿಂದೂ ಧರ್ಮದವರು. ಹೀಗಿರುವಾಗ, ಅವರ ಕಾರಲ್ಲಿ ಕ್ರಾಸ್ ಚಿಹ್ನೆ ಬರಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ.

ದಳಪತಿ ವಿಜಯ್ ಅವರು ಕ್ರಿಶ್ಚಿಯನ್ ಧರ್ಮದವರಾಗಿದ್ದು, ತ್ರಿಷಾ ಅವರ ಕಾರಿನಲ್ಲಿ ಕ್ರಾಸ್ ಕಂಡಿದ್ದಕ್ಕೂ ವಿಜಯ್ ಅವರೊಂದಿಗಿನ ಇತ್ತೀಚಿನ ಒಡನಾಟಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ಇತ್ತೀಚೆಗೆ ಇಬ್ಬರೂ ಒಟ್ಟಾಗಿ ಮದುವೆ ಸಮಾರಂಭವೊಂದಕ್ಕೆ ತೆರಳಿದ್ದ ಫೋಟೋಗಳು ವೈರಲ್ ಆಗಿದ್ದವು. ವಿಜಯ್‌ಗಾಗಿ ತ್ರಿಷಾ ಧರ್ಮ ಬದಲಿಸಿದ್ದಾರೆಯೇ ಅಥವಾ ಇಬ್ಬರೂ ಗುಟ್ಟಾಗಿ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಈಗ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಇದನ್ನೂ ಓದಿ: ತಮಿಳುನಾಡು ಚುನಾವಣೆ: ಮತದಾನ ಮಾಡಿದ ತ್ರಿಷಾ, ವಿಡಿಯೋ ನೋಡಿ

ಆದರೆ, ತ್ರಿಷಾ ಅವರ ಕೆಲವು ಆಪ್ತ ಅಭಿಮಾನಿಗಳು ಇದನ್ನು ತಳ್ಳಿಹಾಕಿದ್ದಾರೆ. ಒಬ್ಬ ನಟಿಯಾಗಿ ಅವರು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಅಥವಾ ಅದು ಅವರ ವೈಯಕ್ತಿಕ ನಂಬಿಕೆಯಾಗಿರಬಹುದು ಎಂದು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ, ಈ ಜೋಡಿಯ ಸುತ್ತ ಎದ್ದಿರುವ ಗಾಳಿ ಸುದ್ದಿಗಳು ಮಾತ್ರ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ವಿಜಯ್ ಹಾಗೂ ಸಂಗೀತಾ ವಿಚ್ಛೇದನ ವಿಷಯ ಕೋರ್ಟ್​​ನಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದವನಿಗೆ ಗುಂಡೇಟು
ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದವನಿಗೆ ಗುಂಡೇಟು
ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ?
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಥಳಿಸಿದ ಪೊಲೀಸರು
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಥಳಿಸಿದ ಪೊಲೀಸರು
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ