‘ಜನ ನಾಯಗನ್’​ ರಿಲೀಸ್​​​ಗೂ ಮೊದಲು ಒಟಿಟಿಯಲ್ಲಿ ಟ್ರೆಂಡ್ ಆಯ್ತು ‘ಭಗವಂತ ಕೇಸರಿ’

ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರವು ಜನವರಿ 9 ರಂದು ಬಿಡುಗಡೆಗೆ ಸಿದ್ಧವಾಗಿದೆ. ಇದು ಬಾಲಯ್ಯನ 'ಭಗವಂತ ಕೇಸರಿ'ಯ ರಿಮೇಕ್ . ಮೂಲ ತೆಲುಗು ಚಿತ್ರವು IMDB ಯಲ್ಲಿ 5.8 ರೇಟಿಂಗ್ ಪಡೆದರೂ, ರಾಷ್ಟ್ರೀಯ ಪ್ರಶಸ್ತಿ ಗೆದ್ದಿದೆ. ವಿಜಯ್ ರಾಜಕೀಯ ಪ್ರವೇಶಿಸುವ ಮುನ್ನ ನಟಿಸಿದ ಕೊನೆಯ ಚಿತ್ರ ಇದಾಗಿದೆ ಎನ್ನಲಾಗಿದೆ. ಕಥೆಯಲ್ಲಿ ಕೆಲ ಬದಲಾವಣೆಗಳೊಂದಿಗೆ 'ಜನ ನಾಯಗನ್' ಸಿದ್ಧವಾಗಿದೆ.

‘ಜನ ನಾಯಗನ್’​ ರಿಲೀಸ್​​​ಗೂ ಮೊದಲು ಒಟಿಟಿಯಲ್ಲಿ ಟ್ರೆಂಡ್ ಆಯ್ತು ‘ಭಗವಂತ ಕೇಸರಿ’
ದಳಪತಿ-ಬಾಲಯ್ಯ
Edited By:

Updated on: Jan 07, 2026 | 10:07 AM

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ರಿಲೀಸ್​​ಗೆ ರೆಡಿ ಇರೋದು ಗೊತ್ತೇ ಇದೆ. ಈ ಸಿನಿಮಾ ಬಾಲಯ್ಯ ನಟನೆಯ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಆಗಿದೆ. ಮೂಲತಃ ತೆಲುಗಿನಲ್ಲಿ ನಿರ್ಮಿಸಲಾದ ‘ಭಗವಂತ ಕೇಸರಿ’ ಈ ಚಿತ್ರವು ಐಎಂಡಿಬಿಯಲ್ಲಿ ಕೇವಲ 5.8 ರೇಟಿಂಗ್ ಪಡೆದಿದೆ. ಈ ಚಿತ್ರವನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಜಿಯೋ ಹಾಟ್​​ಸ್ಟಾರ್​ ಅಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್, ‘ಪುಷ್ಪ 2’ ಖ್ಯಾತಿಯ ಶ್ರೀಲೀಲಾ ಮತ್ತು ಅರ್ಜುನ್ ರಾಂಪಾಲ್ ಖಳನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ತೆಲುಗು ನಟ ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿದ್ದಾರೆ. 2023ರಲ್ಲಿ ಬಿಡುಗಡೆ ಆದ ಚಿತ್ರದ ಬಜೆಟ್ ಸುಮಾರು 65 ಕೋಟಿ ರೂಪಾಯಿ. ಭಾರತದಲ್ಲಿ 84.78 ಕೋಟಿ ರೂಪಾಯಿ ಹಾಗೂ ವಿಶ್ವಾದ್ಯಂತ 114.50 ಕೋಟಿ ರೂ. ಗಳಿಸಿದೆ.

ಅನಿಲ್ ರವಿಪುಡಿ ‘ಭಗವಂತ ಕೇಸರಿ’ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರ ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಆದಾಗ್ಯೂ, ಚಿತ್ರದ ವಿಷಯ ಮತ್ತು ಸಂದೇಶವನ್ನು ಪ್ರಶಂಸಿಸಲಾಯಿತು. ಗಮನಾರ್ಹವಾಗಿ, ಈ ಚಿತ್ರವು 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ತೆಲುಗು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

‘ಭಗವಂತ ಕೇಸರಿ’ ಸಿನಿಮಾ ಮತ್ತೆ ಜನಪ್ರಿಯತೆ ಗಳಿಸಲು ಪ್ರಮುಖ ಕಾರಣ ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಅವರ ಮುಂಬರುವ ಚಿತ್ರ ‘ಜನ ನಾಯಗನ್’. ಇದು ವಿಜಯ್ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ನಟಿಸಿದ ಕೊನೆಯ ಚಿತ್ರ ಎಂದು ನಂಬಲಾಗಿದೆ. ಈ ಚಿತ್ರವು ಜನವರಿ 9ರಂದು ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ರಿಲೀಸ್​​ ವೇಳೆ ಕೋರ್ಟ್ ಮೆಟ್ಟಿಲು ಹತ್ತಿದ ‘ಜನ ನಾಯಗನ್’ ಟೀಂ; ಆಗಿದೆ ದೊಡ್ಡ ಸಮಸ್ಯೆ

‘ಜನ ನಾಯಗನ್’ ಚಿತ್ರದ ಕಥೆ ‘ಭಗವಂತ ಕೇಸರಿ’ಯಿಂದ ಪ್ರೇರಿತವಾಗಿದೆ ಎಂಬ ವದಂತಿ ಬಹಳ ಹಿಂದಿನಿಂದಲೂ ಇತ್ತು. ಕೆಲವು ದಿನಗಳ ಹಿಂದೆ ‘ಜನ ನಾಯಗನ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಇದು ಸ್ಪಷ್ಟವಾಯಿತು. ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.