‘ನಿಮ್ಮಂಥ ಹೆಂಡತಿ ಯಾರಿಗೂ ಸಿಗಬಾರದು’; ಪ್ರಿಯಾಮಣಿಗೆ ನೇರವಾಗಿ ಶಾಪ ಹಾಕಿದ ಜನರು

| Updated By: ಮದನ್​ ಕುಮಾರ್​

Updated on: Jul 17, 2021 | 2:24 PM

‘ಸ್ನೇಹಿತನಿಗಾಗಿ ನೀವು ಶ್ರೀಕಾಂತ್​ಗೆ ಯಾಕೆ ಮೋಸ ಮಾಡಿದ್ರಿ? ಮಾಡಿದ ತಪ್ಪಿಗಾಗಿ ನೀವು ಜೀವನದಲ್ಲಿ ಖುಷಿಯಾಗಿ ಇರಲು ಸಾಧ್ಯವೇ ಇಲ್ಲ’ ಎಂದು ಜನರು ‘ದಿ ಫ್ಯಾಮಿಲಿ ಮ್ಯಾನ್​ 2’ ನಟಿ ಪ್ರಿಯಾಮಣಿಗೆ ಶಾಪ ಹಾಕುತ್ತಿದ್ದಾರೆ.

‘ನಿಮ್ಮಂಥ ಹೆಂಡತಿ ಯಾರಿಗೂ ಸಿಗಬಾರದು’; ಪ್ರಿಯಾಮಣಿಗೆ ನೇರವಾಗಿ ಶಾಪ ಹಾಕಿದ ಜನರು
ಪ್ರಿಯಾಮಣಿ
Follow us on

ಸಿನಿಮಾ ಕಲಾವಿದರಿಗೆ ಪ್ರೇಕ್ಷಕರಿಂದ ಹಲವು ಬಗೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಕೆಲವೊಮ್ಮೆ ಅದು ಸ್ವಲ್ಪ ವಿಚಿತ್ರವಾಗಿಯೂ ಇರುತ್ತದೆ. ಅದೇ ರೀತಿ ನಟಿ ಪ್ರಿಯಾಮಣಿ ಅವರಿಗೆ ಇತ್ತೀಚೆಗೆ ಅಭಿಮಾನಿಗಳಿಂದ ಬಗೆಬಗೆಯ ಕಮೆಂಟ್​​ಗಳು ಬರುತ್ತಿವೆ. ಜೂನ್​ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಪ್ರಿಯಾಮಣಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟಿದೆ. ಇದರಲ್ಲಿ ಅವರು ನಿಭಾಯಿಸಿದ ಸುಚಿ ಅಥವಾ ಸುಚಿತ್ರಾ ಐಯ್ಯರ್​​ ಎಂಬ ಪಾತ್ರ ಕೂಡ ಭಾರಿ ಚರ್ಚೆಗೆ ಒಳಗಾಗಿದೆ. ಈಗ ಪ್ರಿಯಾಮಣಿ ಏನೇ ಪೋಸ್ಟ್ ಮಾಡಿದರೂ ಅದಕ್ಕೆ ಕಮೆಂಟ್​ ಮಾಡುವ ಪ್ರೇಕ್ಷಕರು ‘ದಿ ಫ್ಯಾಮಿಲಿ ಮ್ಯಾನ್ 2’ ಪಾತ್ರವನ್ನು ಎಳೆದು ತರುತ್ತಿದ್ದಾರೆ.

ಈ ವೆಬ್​ ಸರಣಿಯಲ್ಲಿ ಮನೋಜ್​ ಭಾಜಪೇಯ್​ ಮತ್ತು ಪ್ರಿಯಾಮಣಿ ಅವರು ಶ್ರೀಕಾಂತ್​ ತಿವಾರಿ-ಸುಚಿತ್ರಾ ಐಯ್ಯರ್​​ ಎಂಬ ಗಂಡ-ಹೆಂಡತಿಯ ಪಾತ್ರವನ್ನು ಮಾಡಿದ್ದಾರೆ. ಸುಚಿ ತನ್ನ ಸ್ನೇಹಿತನ ಜೊತೆಗೆ ಹೊಂದಿರುವ ಆಪ್ತತೆಯ ಕಾರಣದಿಂದ ಶ್ರೀಕಾಂತ್​ ತಿವಾರಿಯ ಸಂಸಾರದಲ್ಲಿ ಬಿರುಕು ಉಂಟಾಗುತ್ತದೆ. ಅದು ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ. ಈ ವಿಚಾರವನ್ನು ತುಂಬ ಗಂಭೀರವಾಗಿ ಪರಿಗಣಿಸಿರುವ ಒಂದು ವರ್ಗದ ನೆಟ್ಟಿಗರು ಪ್ರಿಯಾಮಣಿಗೆ ಕಟುವಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಾಮಣಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ದೇವರು ಬೇಕಾದರೆ ಸ್ವಲ್ಪ ಬಡತನ ಕೊಡಲಿ, ಆದರೆ ನಿಮ್ಮಂಥ ಹೆಂಡತಿಯನ್ನು ಕೊಡುವುದು ಬೇಡ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಹಲವಾರು ಪ್ರಶ್ನೆಗಳನ್ನು ಪ್ರಿಯಾಮಣಿಗೆ ಜನರು ಕೇಳುತ್ತಿದ್ದಾರೆ. ‘ನೀವು ಶ್ರೀಕಾಂತ್​ಗೆ ಈ ರೀತಿ ಮಾಡಬಾರದಾಗಿತ್ತು. ಸ್ನೇಹಿತನಿಗಾಗಿ ನೀವು ಶ್ರೀಕಾಂತ್​ಗೆ ಯಾಕೆ ಮೋಸ ಮಾಡಿದ್ರಿ? ಮಾಡಿದ ತಪ್ಪಿಗಾಗಿ ನೀವು ಜೀವನದಲ್ಲಿ ಖುಷಿಯಾಗಿ ಇರಲು ಸಾಧ್ಯವೇ ಇಲ್ಲ’ ಎಂದೆಲ್ಲ ಜನರು ಕಟುವಾಗಿ ಕಮೆಂಟ್​ ಮಾಡಿದ್ದಾರೆ.

ಇದು ಪ್ರಿಯಾಮಣಿಗೆ ಸ್ವಲ್ಪ ಬೇಸರ ತರಿಸಿದೆ ಕೂಡ. ‘ಇದು ರೀಲ್​ ಅಷ್ಟೇ. ರಿಯಲ್​ ಅಲ್ಲ. ನಾನು ನಟಿ ಮಾತ್ರ. ನಿಜಜೀವನದಲ್ಲಿ ನಾನು ಆ ರೀತಿ ಮಹಿಳೆ ಅಲ್ಲ ಎಂದು ಎಲ್ಲರಿಗೂ ನಾನು ವಿವರಣೆ ನೀಡುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ. ನಿಮಗೆ ಆ ಪಾತ್ರ ಇಷ್ಟ ಆಗಿಲ್ಲ ಎಂದರೆ ಓಕೆ. ಅದು ನಿಮ್ಮ ಅಭಿಪ್ರಾಯ. ಆದರೆ ಅದನ್ನು ಕಲಾವಿದರ ಪರ್ಸನಲ್ ಜೀವನಕ್ಕೆ ಯಾಕೆ ಕನೆಕ್ಟ್​ ಮಾಡುತ್ತೀರಿ?’ ಎಂದು ಪ್ರಿಯಾಮಣಿ ಮರುಪ್ರಶ್ನೆ ಹಾಕಿದ್ದಾರೆ.

ಇದನ್ನೂ ಓದಿ:

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?

‘ದಿ ಫ್ಯಾಮಿಲಿ ಮ್ಯಾನ್​ 3’ ಕಥೆ ಬಹಿರಂಗ; ನಿರ್ದೇಶಕರು ಬಾಯ್ಬಿಟ್ಟ ಸೀಕ್ರೆಟ್​ ಇಲ್ಲಿದೆ