Priyamani: ನಟಿ ಪ್ರಿಯಾಮಣಿ ಬದುಕನ್ನೇ ಬದಲಿಸಿತು ಆ ಒಂದು ನಿರ್ಧಾರ

| Updated By: ರಾಜೇಶ್ ದುಗ್ಗುಮನೆ

Updated on: Sep 03, 2021 | 9:14 PM

2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಮಣಿ, ತೆಲುಗು, ಕನ್ನಡ, ಮಲಯಾಳಂ, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ.

Priyamani: ನಟಿ ಪ್ರಿಯಾಮಣಿ ಬದುಕನ್ನೇ ಬದಲಿಸಿತು ಆ ಒಂದು ನಿರ್ಧಾರ
ಪ್ರಿಯಾಮಣಿ ಬದುಕನ್ನೇ ಬದಲಿಸಿತು ಆ ಒಂದು ನಿರ್ಧಾರ
Follow us on

ಹೀರೋಯಿನ್​ಗಳ ವಯಸ್ಸು 35 ವರ್ಷ ದಾಟಿದ ನಂತರದಲ್ಲಿ ನಿಧಾನವಾಗಿ ಬೇಡಿಕೆ ಕಳೆದುಕೊಳ್ಳಲು ಆರಂಭಿಸುತ್ತಾರೆ. ಆದರೆ, ನಟಿ ಪ್ರಿಯಾಮಣಿ ಇದಕ್ಕೆ ಭಿನ್ನ. ಅವರ ವಯಸ್ಸು ಈಗ 37. ಆದಾಗ್ಯೂ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಕನ್ನಡ, ತಮಿಳು ಸೇರಿ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿದ ಅವರಿಗೆ ಈಗ ಬೇಡಿಕೆ ಹೆಚ್ಚಿದೆ. ಟಾಲಿವುಡ್​ ನಟ ಪವನ್​ ಕಲ್ಯಾಣ್​ 28ನೇ ಚಿತ್ರಕ್ಕೂ ಪ್ರಿಯಾಮಣಿ ನಾಯಕಿ ಎನ್ನಲಾಗುತ್ತಿದೆ. ಇದಕ್ಕೆಲ್ಲ ಕಾರಣವಾಗಿದ್ದು ಅವರ ಆ ಒಂದು ನಿರ್ಧಾರ ಅನ್ನೋದು ಅಭಿಮಾನಿಗಳ ಅಭಿಪ್ರಾಯ.

2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪ್ರಿಯಾಮಣಿ, ತೆಲುಗು, ಕನ್ನಡ, ಮಲಯಾಳಂ, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ಅವರ ನಟನೆಯನ್ನು ಮೆಚ್ಚದೇ ಇಲ್ಲದವರಿಲ್ಲ. ‘ದಿ ಫ್ಯಾಮಿಲಿ ಮ್ಯಾನ್​’ ಹಾಗೂ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ ಪ್ರಿಯಾಮಣಿಯ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ನೀಡಿದೆ ಎಂಬುದಕ್ಕೆ ಅವರ ಕೈಯಲ್ಲಿರುವ ಸಿನಿಮಾಗಳೇ ಸಾಕ್ಷಿ.

ವರ್ಷಕ್ಕೆ ಪ್ರಿಯಾಮಣಿ ನಟನೆಯ 2-3 ಸಿನಿಮಾಗಳು ರಿಲೀಸ್​ ಆಗುತ್ತಿದ್ದವು. ‘ದಿ ಫ್ಯಾಮಿಲಿ ಮ್ಯಾನ್​’ ತೆರೆಕಂಡ ನಂತರದಲ್ಲಿ ಅವರಿಗೆ ಬೇಡಿಕೆ ಹೆಚ್ಚಿದೆ. ಸದ್ಯ, ಅವರ ಕೈಯಲ್ಲಿ ಏಳು ಚಿತ್ರಗಳಿವೆ. ಪವನ್​ ಕಲ್ಯಾಣ್​ ನಟಿಸುತ್ತಿರುವ 28ನೇ ಚಿತ್ರಕ್ಕಾಗಿ ಪ್ರಿಯಾಮಣಿ ಜತೆ ಮಾತುಕತೆ ನಡೆಯುತ್ತಿದೆ. ಇನ್ನೂ ಅನೇಕ ಸ್ಕ್ರಿಪ್ಟ್​ಗಳು ಅವರ ಮನೆಯ ಬಾಗಿಲಲ್ಲಿವೆ.

‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸೀರಿಸ್​ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿದೆ. ಪ್ರಿಯಾಮಣಿ ನಿರ್ವಹಿಸಿದ ಸುಚಿತ್ರಾ ಪಾತ್ರವನ್ನು ಎಲ್ಲರೂ ಹೊಗಳಿದ್ದಾರೆ. ಅವರು ಈ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದರು. ಪರಿಣಾಮ ಅನೇಕ ನಿರ್ದೇಶಕರು ಹಾಗೂ ನಿರ್ಮಾಪಕರು ಪ್ರಿಯಾಮಣಿ ಕಾಲ್​ಶೀಟ್​ಗಾಗಿ ಕಾದು ಕೂತಿದ್ದಾರೆ. ಹೀಗಾಗಿ, ‘ದಿ ಫ್ಯಾಮಿಲಿ ಮ್ಯಾನ್​’ನಲ್ಲಿ ಅವರು ನಟಿಸುವ ನಿರ್ಧಾರ ತೆಗೆದುಕೊಂಡಿದ್ದು ಅವರ ವೃತ್ತಿ ಜೀವನದ ದಿಕ್ಕನ್ನೇ ಬದಲಿಸಿದೆ.

ಪವನ್​ ಕಲ್ಯಾಣ್​ 28ನೇ ಸಿನಿಮಾ ಸಾಕಷ್ಟು ಹೈಪ್​ ಪಡೆದುಕೊಂಡಿದೆ. ಹರೀಶ್​ ಶಂಕರ್​ ನಿರ್ದೇಶನದ ಈ ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್​ ಬಂಡವಾಳ ಹೂಡುತ್ತಿದೆ. ಈ ಸಿನಿಮಾಗೆ ಪೂಜಾ ಹೆಗ್ಡೆ ಹಾಗೂ ಪ್ರಿಯಾಮಣಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Priyamani: ‘ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಮದುವೆ ಅಸಿಂಧು’; ಮುಸ್ತಫಾ ರಾಜ್ ಮೊದಲ ಪತ್ನಿ ಆರೋಪ

‘ನನ್ನ ಮತ್ತು ಮುಸ್ತಫಾ ರಾಜ್ ಸಂಬಂಧ ಭದ್ರವಾಗಿದೆ’: ನಟಿ ಪ್ರಿಯಾಮಣಿ ಸ್ಪಷ್ಟನೆ

Published On - 7:27 pm, Fri, 3 September 21