The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಬೆಂಗಳೂರಲ್ಲಿ ಮೊದಲ ದಿನ 150 ಶೋ ಮೀಸಲು; ಟಿಕೆಟ್​ ಬುಕಿಂಗ್​ ನೀರಸ

|

Updated on: May 04, 2023 | 5:22 PM

The Kerala Story Advance Booking: ಟ್ರೇಲರ್​ ಮೂಲಕ ವಿವಾದ ಸೃಷ್ಟಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಟಿಕೆಟ್​ ಬುಕಿಂಗ್​ಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಹಾಗಾಗಿ ಮೊದಲ ದಿನ ಹೆಚ್ಚು ಕಲೆಕ್ಷನ್​ ಆಗುವುದು ಅನುಮಾನ.

The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಬೆಂಗಳೂರಲ್ಲಿ ಮೊದಲ ದಿನ 150 ಶೋ ಮೀಸಲು; ಟಿಕೆಟ್​ ಬುಕಿಂಗ್​ ನೀರಸ
‘ದಿ ಕೇರಳ ಸ್ಟೋರಿ’ ಸಿನಿಮಾ ಪೋಸ್ಟರ್​
Follow us on

ಭಾರಿ ಚರ್ಚೆ ಹುಟ್ಟುಹಾಕಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀ​ಸ್​ಗೆ ಕೆಲವೇ ಗಂಟೆಗಳು ಬಾಕಿ ಉಳಿದುಕೊಂಡಿವೆ. ಮೇ 5ರಂದು ದೇಶಾದ್ಯಂತ ಈ ಸಿನಿಮಾ ರಿಲೀಸ್​ ಆಗಲಿದೆ. ಎಲ್ಲ ಪ್ರಮುಖ ನಗರಗಳಲ್ಲಿ ಬುಕಿಂಗ್​ ಓಪನ್​ ಆಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಬರೋಬ್ಬರಿ 150 ಶೋಗಳು ಮೀಸಲಾಗಿವೆ. ಆದರೆ ಪ್ರೇಕ್ಷಕರು ಟಿಕೆಟ್​ ಬುಕ್​ ಮಾಡುವಲ್ಲಿ ಹೆಚ್ಚೇನೂ ಆಸಕ್ತಿ ತೋರಿಸುತ್ತಿಲ್ಲ. ಬಹುತೇಕ ಎಲ್ಲ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ. ಹಾಗಾಗಿ ಮೊದಲ ದಿನ ಈ ಚಿತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ (The Kerala Story Box Office Collection) ಆಗುವುದು ಅನುಮಾನ ಎನ್ನಲಾಗುತ್ತಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ನಟಿ ಅದಾ ಶರ್ಮಾ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸುದೀಪ್ತೋ ಸೇನ್​ (Sudipto Sen) ಅವರು ನಿರ್ದೇಶನ ಮಾಡಿದ್ದಾರೆ.

ಕೇರಳದಲ್ಲಿ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ, ನಂತರ ಅವರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಲಾಗುತ್ತಿದೆ ಎಂಬ ವಿಷಯದ ಮೇಲೆ ‘ದಿ ಕೇರಳ ಸ್ಟೋರಿ’ ಸಿನಿಮಾ ಸಿದ್ಧಗೊಂಡಿದೆ. ಟ್ರೇಲರ್​ನಲ್ಲೇ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಮಾಹಿತಿ ನಿಜವಲ್ಲ ಎಂದು ಅನೇಕರು ವಾದಿಸುತ್ತಿದ್ದಾರೆ. ಸಿನಿಮಾದಲ್ಲಿ ತೋರಿಸಿರುವುದು ನಿಜವೋ ಅಥವಾ ಸುಳ್ಳೋ ಎಂಬುದನ್ನು ತಿಳಿಯಲು ಪ್ರೇಕ್ಷಕರಲ್ಲಿ ಭಾರಿ ಕೌತುಕ ಸೃಷ್ಟಿ ಆಗಿದೆ.

ಇದನ್ನೂ ಓದಿ: Adah Sharma: ‘ಮೊದಲು ಸಿನಿಮಾ ನೋಡಿ, ಆಮೇಲೆ ಮಾತಾಡಿ’: ‘ದಿ ಕೇರಳ ಸ್ಟೋರಿ’ ವಿವಾದಕ್ಕೆ ಅದಾ ಶರ್ಮಾ ಪ್ರತಿಕ್ರಿಯೆ

ಇದನ್ನೂ ಓದಿ
‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ತಡೆ ನೀಡಿ ಎಂದು ಸಲ್ಲಿಕೆ ಆಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್​ ನಕಾರ
‘ದಿ ಕೇರಳ ಸ್ಟೋರಿ’ ಟ್ರೇಲರ್ ವಿರುದ್ಧ ಅಸಮಾಧಾನಗೊಂಡ ಕೇರಳ ಸಿಎಂ; ಚಿತ್ರಕ್ಕೆ ಬೀಳಲಿದೆ ತಡೆ?
‘ಹಿಜಾಬ್ ಹಾಕಿದವರ ಮೇಲೆ ಅತ್ಯಾಚಾರ ಆಗಲ್ಲ, ಅಲ್ಲಾಹ್ ಮಾತ್ರ ಕಾಪಾಡುವವನು’; ಚರ್ಚೆ ಹುಟ್ಟುಹಾಕಿದ ‘ದಿ ಕೇರಳ ಸ್ಟೋರಿ’ ಟ್ರೇಲರ್
The Kerala Story: ‘ದಿ ಕೇರಳ ಸ್ಟೋರಿ’ ವಿವಾದ: ‘ನಾವು ಸಾಕ್ಷಿ ಇಲ್ಲದೇ ಏನನ್ನೂ ಹೇಳಲ್ಲ’ ಎಂದ ನಿರ್ಮಾಪಕ ವಿಪುಲ್​ ಶಾ

ಶುಕ್ರವಾರ (ಮೇ 5) ದೆಹಲಿಯಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾಗೆ 450ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಮುಂಬೈನಲ್ಲಿ 320ಕ್ಕೂ ಅಧಿಕ ಶೋಗಳು ಮೀಸಲಾಗಿವೆ. ಕೇರಳದ ಕೊಚ್ಚಿಯಲ್ಲಿ ಸಿನಿಮಾ ಬಿಡುಗಡೆ ಬಗ್ಗೆ ಗೊಂದಲ ಏರ್ಪಟ್ಟಿದೆ. ದೇಶದ ಪ್ರಮುಖ ನಗರಗಳಲ್ಲಿ ಈ ಚಿತ್ರದ ಬಿಡುಗಡೆ ಬಳಿಕ ಗಲಭೆ ಉಂಟಾಗುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಆಯಾ ಸರ್ಕಾರಗಳು ಎಚ್ಚರಿಕೆ ವಹಿಸುತ್ತಿವೆ.

ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿನ ಮಾಹಿತಿ ನಿಜ ಅಂತ ಸಾಬೀತು ಮಾಡಿದ್ರೆ 1 ಕೋಟಿ ರೂ. ಬಹುಮಾನ

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ 2022ರಲ್ಲಿ ಬಿಡುಗಡೆ ಆದಾಗ ಮೊದಲ ದಿನ ನೀರಸ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ನಂತರದ ದಿನಗಳಲ್ಲಿ ಬಾಯಿ ಮಾತಿನ ಪ್ರಚಾರ ಸಿಕ್ಕಿದ್ದರಿಂದ ಆ ಸಿನಿಮಾ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿತ್ತು. ‘ದಿ ಕೇರಳ ಸ್ಟೋರಿ’ ಕೂಡ ಮುಂದಿನ ದಿನಗಳಲ್ಲಿ ಉತ್ತಮ ಕಮಾಯಿ ಮಾಡುವ ಸಾಧ್ಯತೆ ಇದೆ. ಮೊದಲ ದಿನ ಈ ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.