ರಾಕಿ ಭಾಯ್ ಸಾವಿಗೂ ‘ಸಲಾರ್​’ ಚಿತ್ರಕ್ಕೂ ಇಲ್ಲ ಕನೆಕ್ಷನ್; ಸ್ಪಷ್ಟಪಡಿಸಿದ ಪ್ರಶಾಂತ್ ನೀಲ್

‘ಸಲಾರ್’ ಟೀಸರ್ ಬಿಡುಗಡೆ ಸಮಯಕ್ಕೂ, ‘ಕೆಜಿಎಫ್ 2’ ಚಿತ್ರದಲ್ಲಿ ರಾಕಿ ಭಾಯ್ ಸಾಯುವ ಸಮಯಕ್ಕೂ ಒಂದು ಸಂಬಂಧ ಇತ್ತು. ಇದು ಕಾಕತಾಳಿಯವೋ ಅಥವಾ ನಿಜವಾಗಲೂ ಲಿಂಕ್ ಇದೆಯೋ ಎನ್ನುವ ಅನುಮಾನ ಮೂಡಿತ್ತು. ಆದರೆ, ಈಗ ರಿಲೀಸ್ ಆಗಿರೋ ಎರಡೂ ಟ್ರೇಲರ್​ನಲ್ಲಿ ಯಾವುದೇ ಲಿಂಕ್ ಕಂಡು ಬಂದಿಲ್ಲ.

ರಾಕಿ ಭಾಯ್ ಸಾವಿಗೂ ‘ಸಲಾರ್​’ ಚಿತ್ರಕ್ಕೂ ಇಲ್ಲ ಕನೆಕ್ಷನ್; ಸ್ಪಷ್ಟಪಡಿಸಿದ ಪ್ರಶಾಂತ್ ನೀಲ್
ಪ್ರಶಾಂತ್ ನೀಲ್

Updated on: Dec 19, 2023 | 8:27 AM

ಪ್ರಶಾಂತ್ ನೀಲ್ (Prashanth Neel) ಅವರ ನಿರ್ದೇಶನದ ‘ಸಲಾರ್’ ಸಿನಿಮಾ ರಿಲೀಸ್​​ಗೆ ರೆಡಿ ಇದೆ. ಡಿಸೆಂಬರ್ 22ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ‘ಕೆಜಿಎಫ್’ (KGF) ಸರಣಿಯ ಯಶಸ್ಸಿನ ಬಳಿಕ ಪ್ರಶಾಂತ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು ಎನ್ನುವ ಕಾರಣಕ್ಕೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 2’ಗೂ ಅನೇಕರು ಕನೆಕ್ಷನ್ ಹುಡುಕಿದ್ದರು. ಆದರೆ, ಆ ರೀತಿಯ ಕನೆಕ್ಷನ್ ಇಲ್ಲ ಎಂದು ಪ್ರಶಾಂತ್ ನೀಲ್ ಅವರು ಸ್ಪಷ್ಟಪಡಿಸಿದ್ದಾರೆ.

ಮೇಕಿಂಗ್​ ನೋಡಿದ ಅನೇಕರು ‘ಸಲಾರ್’ ಹಾಗೂ ‘ಕೆಜಿಎಫ್ 2’ ಚಿತ್ರಕ್ಕೆ ಸಂಬಂಧ ಕಲ್ಪಿಸಿದ್ದರು. ‘ಸಲಾರ್’ ಟೀಸರ್ ಬಿಡುಗಡೆ ಸಮಯಕ್ಕೂ, ‘ಕೆಜಿಎಫ್ 2’ ಚಿತ್ರದಲ್ಲಿ ರಾಕಿ ಭಾಯ್ ಸಾಯುವ ಸಮಯಕ್ಕೂ ಒಂದು ಸಂಬಂಧ ಇತ್ತು. ಇದು ಕಾಕತಾಳಿಯವೋ ಅಥವಾ ನಿಜವಾಗಲೂ ಲಿಂಕ್ ಇದೆಯೋ ಎನ್ನುವ ಅನುಮಾನ ಮೂಡಿತ್ತು. ಆದರೆ, ಈಗ ರಿಲೀಸ್ ಆಗಿರೋ ಎರಡೂ ಟ್ರೇಲರ್​ನಲ್ಲಿ ಯಾವುದೇ ಲಿಂಕ್ ಕಂಡು ಬಂದಿಲ್ಲ. ಇದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಈಗ ಪ್ರಶಾಂತ್ ನೀಲ್ ಕಡೆಯಿಂದಲೇ ಇದಕ್ಕೆ ಸ್ಪಷ್ಟನೆ ಸಿಕ್ಕಿದೆ.

‘ಅಭಿಮಾನಿಗಳು ಹೇಳಿದ ಎಲ್ಲಾ ಸಿದ್ಧಾಂತಗಳನ್ನು ನೋಡಿದ ಬಳಿಕ ಕೆಜಿಎಫ್ ಸಿನಿಮಾ ಎಷ್ಟು ದೊಡ್ಡದು ಎಂಬುದನ್ನು ನಾನು ಅರಿತುಕೊಂಡೆ. ಜನರು ಸಲಾರ್‌ನ ಟೋನ್‌ನ ಕೆಜಿಎಫ್‌ಗೆ ಹೋಲಿಸಲು ಪ್ರಾರಂಭಿಸಿದರು. ನಾನು ಈ ರೀತಿಯ ವಿಚಾರಗಳನ್ನು ಮೊದಲೇ ಗುರುತಿಸಬೇಕಾಗಿತ್ತು. ಕೆಜಿಎಫ್ ಯೂನಿವರ್ಸ್​ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನಾನು ಮೊದಲೇ ಸ್ಪಷ್ಟಪಡಿಸಬೇಕಿತ್ತು’ ಎಂದಿದ್ದಾರೆ ಪ್ರಶಾಂತ್ ನೀಲ್.

‘ಕೆಜಿಎಫ್ ಎರಡನೇ ಪಾರ್ಟ್​​ ರಿಲೀಸ್​ಗೆ ಒಂದು ವರ್ಷ ಇರುವಾಗಲೇ ಸಲಾರ್ ಚಿತ್ರದ ಸ್ಕ್ರಿಪ್ಟ್​ಗಳು ರೆಡಿ ಆಗಿದ್ದವು. ಕೆಜಿಎಫ್ ಯಶಸ್ಸು ತುಂಬಾನೇ ದೊಡ್ಡದು. ಆದರೆ, ಅದು ಸಲಾರ್ ಚಿತ್ರದ ಸ್ಕ್ರಿಪ್ಟ್ ಮೇಲೆ ಯಾವುದೇ ಪ್ರಭಾವ ಬೀರಿಲ್ಲ’ ಎಂದಿದ್ದಾರೆ ಪ್ರಶಾಂತ್ ನೀಲ್.

ಇದನ್ನೂ ಓದಿ: ‘ಸಲಾರ್’ ಚಿತ್ರದಲ್ಲಿ ಅಷ್ಟೊಂದು ವೈಲೆನ್ಸ್ ಏಕೆ? ಉತ್ತರಿಸಿದ ಪ್ರಶಾಂತ್ ನೀಲ್

‘ಉಗ್ರಂ’ ಸಿನಿಮಾದಲ್ಲಿ ಫ್ರೆಂಡ್​ಶಿಪ್ ಕಥೆ ಇತ್ತು. ಇದೇ ಎಳೆಯನ್ನು ‘ಸಲಾರ್’ ಚಿತ್ರಕ್ಕೂ ಬಳಸಿದಂತಿದೆ. ಪೂರ್ತಿ ಸಿನಿಮಾ ನೋಡಿದ ಬಳಿಕವೇ ಈ ಬಗ್ಗೆ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 7:07 am, Tue, 19 December 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us