‘ಚಾನ್ಸ್ ಕೊಡ್ತೀವಿ, ಕಮಿಟ್​ಮೆಂಟ್ ಕೊಡು ಅಂದ್ರು’; ನಯನತಾರಾಗೂ ಆಗಿತ್ತು ಕಹಿ ಅನುಭವ

ಅವಕಾಶ ನೀಡುವುದಾಗಿ ಹೇಳಿ ನಟಿಯರನ್ನು ಬಳಸಿಕೊಳ್ಳುವ ಅನೇಕ ನಿರ್ಮಾಪಕರು ಇದ್ದಾರೆ. ಚಿತ್ರರಂಗದಲ್ಲಿ ಅನೇಕರಿಗೆ ಈ ರೀತಿಯ ಅನುಭವ ಆಗಿದೆ.

‘ಚಾನ್ಸ್ ಕೊಡ್ತೀವಿ, ಕಮಿಟ್​ಮೆಂಟ್ ಕೊಡು ಅಂದ್ರು’; ನಯನತಾರಾಗೂ ಆಗಿತ್ತು ಕಹಿ ಅನುಭವ
ನಯನತಾರಾ
Follow us
ರಾಜೇಶ್ ದುಗ್ಗುಮನೆ
|

Updated on: Feb 02, 2023 | 3:17 PM

ನಟಿ ನಯನತಾರಾ (Nayanthara) ಅವರು ಬೇಡಿಕೆಯ ನಟಿ ಆಗಿದ್ದಾರೆ. 2022 ಅವರ ಪಾಲಿಗೆ ವಿಶೇಷ ಆಗಿತ್ತು. ಪ್ರಿಯಕರ ವಿಘ್ನೇಶ್ ಶಿವನ್ ಜತೆ ಅವರು ಮದುವೆ ಆದರು. ಬಾಡಿಗೆ ತಾಯ್ತನದ ಮೂಲಕ ಅವಳಿ ಮಗು ಪಡೆದರು. ಈಗ ನಯನತಾರಾ ಅವರು ತಮಗೆ ಉಂಟಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಅವರಿಗೂ ಕಾಸ್ಟಿಂಗ್ ಕೌಚ್ (Casting Couch) ಅನುಭವ ಆಗಿತ್ತು. ಇತ್ತೀಚೆಗೆ ಮಾಧ್ಯಮದವರ ಜತೆ ಮಾತನಾಡುತ್ತಾ ನಯನತಾರಾ ಈ ವಿಚಾರವನ್ನು ಹೇಳಿದ್ದಾರೆ.

ನಯನತಾರಾ ಮಲಯಾಳಂ ಚಿತ್ರರಂಗದಲ್ಲಿ ನಟಿಸುವ ಮೂಲಕ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರಿಗೆ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು. ಅವರು ಚಿತ್ರರಂಗಕ್ಕೆ ಬಂದು 30 ವರ್ಷಗಳು ಪೂರ್ಣಗೊಂಡಿವೆ. ಈಗ ಅವರು ತಮ್ಮ ವೃತ್ತಿ ಜೀವನದಲ್ಲಿ ನಡೆದ ಘಟನೆ ಬಗ್ಗೆ ಹೇಳಿದ್ದಾರೆ.

ಅವಕಾಶ ನೀಡುವುದಾಗಿ ಹೇಳಿ ನಟಿಯರನ್ನು ಬಳಸಿಕೊಳ್ಳುವ ಅನೇಕ ನಿರ್ಮಾಪಕರು ಇದ್ದಾರೆ. ಚಿತ್ರರಂಗದಲ್ಲಿ ಅನೇಕರಿಗೆ ಈ ರೀತಿಯ ಅನುಭವ ಆಗಿದೆ. ಮೀಟೂ ಅಭಿಯಾನ ಶುರುವಾದಾಗ ಸಾಕಷ್ಟು ನಟಿಯರು ಈ ಬಗ್ಗೆ ಮೌನ ಮುರಿದಿದ್ದರು. ಅನೇಕರು ತಮಗೆ ಕಿರುಕುಳ ನೀಡಿದವರು ಹೆಸರನ್ನು ಹೇಳಿದರೆ, ಇನ್ನೂ ಕೆಲವರು ಹೆಸರನ್ನು ರಿವೀಲ್ ಮಾಡದೆ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ
Image
Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?
Image
Nayanthara Vignesh Shivan Wedding: ನಯನತಾರಾ-ವಿಘ್ನೇಶ್​ ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​; ಇಲ್ಲಿವೆ ಫೋಟೋಗಳು
Image
Nayanthara Vignesh Wedding: ‘ಸೂಪರ್​’ ಚಿತ್ರದ ನಟಿ​ ನಯನತಾರಾಗೆ ಮದುವೆ ಸಂಭ್ರಮ; ವಿಘ್ನೇಶ್​ ಶಿವನ್​ ಕೈ ಹಿಡಿದ ಸುಂದರಿ
Image
Nayanthara Wedding: ನಯನತಾರಾ ಜತೆ ಮದುವೆ ಆಗೋಕಿಂತ ಕೆಲವೇ ಗಂಟೆ ಮುನ್ನ ಪ್ರಮುಖರಿಗೆ ಧನ್ಯವಾದ ತಿಳಿಸಿದ ವಿಘ್ನೇಶ್​ ಶಿವನ್​

ನಯನತಾರಾ ಕೂಡ ಈಗ ಈ ಬಗ್ಗೆ ಮಾತನಾಡಿದ್ದಾರೆ. ‘ಸಿನಿಮಾ ರಂಗಕ್ಕೆ ನಾನು ಕಾಲಿಟ್ಟ ಆರಂಭದಲ್ಲಿ ಕಾಸ್ಟಿಂಗ್​ಕೌಚ್ ಅನುಭವ ಎದುರಿಸಿದ್ದೆ. ಸಿನಿಮಾ ಆಫರ್​ ಕೊಡ್ತೀವಿ ಪ್ರತಿಯಾಗಿ ಕಮಿಟ್​​ಮೆಂಟ್ ಕೊಡುವಂತೆ ಅವರು ಕೇಳಿದ್ದರು. ಆದರೆ, ನಾನು ಅದನ್ನು ತಿರಸ್ಕರಿಸಿ ಬಂದೆ. ನನ್ನ ನಟನೆಯ ಮೇಲೆ ನನಗೆ ನಂಬಿಕೆ ಇತ್ತು’ ಎಂದಿದ್ದಾರೆ ನಯನತಾರಾ.

ಇದನ್ನೂ ಓದಿ: Surrogacy: ಬಾಡಿಗೆ ತಾಯ್ತನದಿಂದ ನಯನತಾರಾ ಮಗು ಪಡೆದ ಪ್ರಕರಣ; ಆಸ್ಪತ್ರೆ ಬಂದ್​ ಮಾಡಿಸಲು ಶಿಫಾರಸ್ಸು

ನಯನತಾರಾ ಅವರು ಸದ್ಯ ‘ಜವಾನ್​’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶಾರುಖ್ ಖಾನ್ ನಟನೆಯ ಈ ಚಿತ್ರಕ್ಕೆ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರು ‘ಪಠಾಣ್​’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ತಿಂಗಳಾಂತ್ಯಕ್ಕೆ ಸಿನಿಮಾ ಕೆಲಸಗಳು ಮತ್ತೆ ಆರಂಭ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ