Surrogacy: ಬಾಡಿಗೆ ತಾಯ್ತನದಿಂದ ನಯನತಾರಾ ಮಗು ಪಡೆದ ಪ್ರಕರಣ; ಆಸ್ಪತ್ರೆ ಬಂದ್​ ಮಾಡಿಸಲು ಶಿಫಾರಸ್ಸು

Nayanthara | Vignesh Shivan: ಪ್ರಕರಣದ ತನಿಖೆ ಮುಗಿದಿದ್ದು, ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಪರವಾಗಿ ವರದಿ ಸಲ್ಲಿಕೆ ಆಗಿದೆ. ಆದರೆ ದಂಪತಿಗೆ ಸಹಾಯ ಮಾಡಿದ ಆಸ್ಪತ್ರೆ​ಗೆ ಈಗ ಸಂಕಷ್ಟ ಎದುರಾಗಿದೆ.

Surrogacy: ಬಾಡಿಗೆ ತಾಯ್ತನದಿಂದ ನಯನತಾರಾ ಮಗು ಪಡೆದ ಪ್ರಕರಣ; ಆಸ್ಪತ್ರೆ ಬಂದ್​ ಮಾಡಿಸಲು ಶಿಫಾರಸ್ಸು
ನಯನತಾರಾ, ವಿಘ್ನೇಶ್ ಶಿವನ್
Follow us
TV9 Web
| Updated By: ಮದನ್​ ಕುಮಾರ್​

Updated on:Oct 26, 2022 | 9:40 PM

ಖ್ಯಾತ ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್​ ಶಿವನ್​ ಅವರಿಗೆ ಎದುರಾಗಿದ್ದ ಕಾನೂನಿನ ಸಂಕಷ್ಟ ಈಗ ಕೊನೆಯಾಗಿದೆ. ಕೆಲವೇ ದಿನಗಳ ಹಿಂದೆ ಬಾಡಿಗೆ ತಾಯಿ ಮೂಲಕ ಈ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದರು. ಆ ಸುದ್ದಿ ಕೇಳಿ ಅಭಿಮಾನಿಗಳಿಗೆ ಸಖತ್​ ಖುಷಿ ಆಗಿತ್ತು. ಅದರ ಬೆನ್ನಲ್ಲೇ ಒಂದಷ್ಟು ಆರೋಪಗಳು ಹುಟ್ಟಿಕೊಂಡಿದ್ದವು. ಬಾಡಿಗೆ ತಾಯ್ತನದ ನಿಯಮಗಳನ್ನು ನಯನತಾರಾ ಹಾಗೂ ವಿಘ್ನೇಶ್​ ಶಿವನ್​ (Vignesh Shivan) ಪಾಲಿಸಿಲ್ಲ ಎಂಬ ಗುಮಾನಿ ವ್ಯಕ್ತವಾಗಿತ್ತು. ಹಾಗಾಗಿ ಸೂಕ್ತ ತನಿಖೆ ನಡೆಸಲು ತಮಿಳುನಾಡು ಸರ್ಕಾರ ಆದೇಶ ಹೊರಡಿಸಿತ್ತು. ಆ ಪ್ರಕರಣದ ತನಿಖೆ ಮುಗಿದಿದ್ದು, ಸ್ಟಾರ್​ ದಂಪತಿಯ ಪರವಾಗಿ ವರದಿ ಸಲ್ಲಿಕೆ ಆಗಿದೆ. ಬಾಡಿಗೆ ತಾಯಿಯಿಂದ (Surrogate Mother) ಮಗು ಪಡೆಯುವಾಗ ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ಅವರು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ತಿಳಿದುಬಂದಿದೆ.

2022ರ ಜೂನ್ 9ರಂದು ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ಮದುವೆ ನೆರವೇರಿತು. ಆದರೆ ಅವರು 6 ವರ್ಷಗಳ ಹಿಂದೆಯೇ ರಿಜಿಸ್ಟರ್​ ಮ್ಯಾರೇಜ್​ ಆಗಿದ್ದರು ಎಂಬುದು ಇತ್ತೀಚೆಗೆ ತಿಳಿದುಬಂತು. ಬಾಡಿಗೆ ತಾಯಿಯಿಂದ ಮಗು ಪಡೆದಿದ್ದರಲ್ಲಿ ಅವರಿಬ್ಬರದ್ದು ಏನೂ ತಪ್ಪಿಲ್ಲದಿದ್ದರೂ ಕೂಡ ಅವರಿಗೆ ಸಹಾಯ ಮಾಡಿದ ಆಸ್ಪತ್ರೆ ಈಗ ಸಂಕಷ್ಟಕ್ಕೆ ಸಿಲುಕಿದೆ. ಬಾಡಿಗೆ ತಾಯಿಗೆ ಟ್ರೀಟ್​ಮೆಂಟ್​ ನೀಡಿದ ಬಗ್ಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ತನಿಖಾ ತಂಡ ಸೂಚಿಸಿದೆ. ಅಲ್ಲದೇ, ತಾತ್ಕಾಲಿಕವಾಗಿ ಈ ಆಸ್ಪತ್ರೆಯನ್ನು ಮುಚ್ಚಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ಬಾಡಿಗೆ ತಾಯಿ ಮೂಲಕ ಮಗು ಪಡೆಯಬೇಕು ಎಂದರೆ ಒಂದಷ್ಟು ನಿಯಮಗಳಿವೆ. ಗರ್ಭ ಧರಿಸುವ ಮಹಿಳೆಯು ಹತ್ತಿರದ ಸಂಬಂಧಿ ಆಗಿರಬೇಕು. ಆಕೆಗೆ ಮದುವೆಯಾಗಿರಬೇಕು ಮತ್ತು ವಯಸ್ಸು 25ರಿಂದ 35 ವರ್ಷದ ಒಳಗಿರಬೇಕು. ಆಕೆ ಈಗಾಗಲೇ ಒಂದು ಮಗುವನ್ನು ಪಡೆದಿರಬೇಕು. ಒಮ್ಮೆ ಮಾತ್ರ ಆಕೆ ಬಾಡಿಗೆ ತಾಯಿ ಆಗಬಹುದು. ಈ ಕೆಲಸಕ್ಕೆ ಹಣ ಪಡೆಯುವಂತಿಲ್ಲ ಎಂಬಿತ್ಯಾದಿ ನಿಮಯಗಳಿವೆ. ಇದೆಲ್ಲವನ್ನೂ ನಯನತಾರಾ-ವಿಘ್ನೇಶ್​ ಶಿವನ್​ ಪಾಲಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ
Image
Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?
Image
Nayanthara Vignesh Shivan Wedding: ನಯನತಾರಾ-ವಿಘ್ನೇಶ್​ ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​; ಇಲ್ಲಿವೆ ಫೋಟೋಗಳು
Image
Nayanthara Vignesh Wedding: ‘ಸೂಪರ್​’ ಚಿತ್ರದ ನಟಿ​ ನಯನತಾರಾಗೆ ಮದುವೆ ಸಂಭ್ರಮ; ವಿಘ್ನೇಶ್​ ಶಿವನ್​ ಕೈ ಹಿಡಿದ ಸುಂದರಿ
Image
Nayanthara Wedding: ನಯನತಾರಾ ಜತೆ ಮದುವೆ ಆಗೋಕಿಂತ ಕೆಲವೇ ಗಂಟೆ ಮುನ್ನ ಪ್ರಮುಖರಿಗೆ ಧನ್ಯವಾದ ತಿಳಿಸಿದ ವಿಘ್ನೇಶ್​ ಶಿವನ್​

ಅ.9ರಂದು ಮಕ್ಕಳ ಆಗಮನದ ವಿಷಯವನ್ನು ವಿಘ್ನೇಶ್​ ಶಿವನ್​ ತಿಳಿಸಿದ್ದರು. ಮಕ್ಕಳಿಗೆ ಉಯಿರ್​ ಮತ್ತು ಉಳಗಂ ಎಂದು ಹೆಸರು ಇಡಲಾಗಿದೆ. ಒಂದಷ್ಟು ಫೋಟೋಗಳನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ತನಿಖೆಯಲ್ಲಿ ರಿಲೀಫ್​ ಸಿಕ್ಕಿದ್ದರಿಂದ ಅವರಿಬ್ಬರು ನಿಟ್ಟುಸಿರು ಬಿಡುವಂತಾಗಿದೆ. ಅನೇಕ ಸಿನಿಮಾ ಕೆಲಸಗಳಲ್ಲಿ ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ಬ್ಯುಸಿ ಆಗಿದ್ದಾರೆ. ಮಕ್ಕಳ ಆರೈಕೆಯಲ್ಲೂ ಅವರು ತೊಡಗಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:31 pm, Wed, 26 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ