ಪ್ರಸಾರ ಆರಂಭಿಸಿದ ಟಿ.ಎನ್. ಸೀತಾರಾಮ್ ‘ಮುಂದಿನ ಅಧ್ಯಾಯ’; ಮೊಬೈಲ್​ನಲ್ಲೇ ಫ್ರೀಯಾಗಿ ನೋಡಬಹುದು

ಪ್ರಸಿದ್ಧ ನಿರ್ದೇಶಕ ಟಿ.ಎನ್. ಸೀತಾರಾಮ್ ತಮ್ಮ ಜನಪ್ರಿಯ ಧಾರಾವಾಹಿಗಳ ಮುಂದುವರಿದ ಭಾಗವಾಗಿ 'ಮುಂದಿನ ಅಧ್ಯಾಯ' ಎಂಬ ನೂತನ ಕಿರು ಸರಣಿ ಆರಂಭಿಸಿದ್ದಾರೆ. 'ಭೂಮಿಕಾ ಟಾಕೀಸ್' ಯೂಟ್ಯೂಬ್ ಚಾನೆಲ್‌ನಲ್ಲಿ ಉಚಿತವಾಗಿ ಪ್ರಸಾರವಾಗುವ ಈ ಸರಣಿಯ ಮೊದಲ ಭಾಗದಲ್ಲಿ ಅರ್ಧಕ್ಕೆ ನಿಂತಿದ್ದ 'ಮಗಳು ಜಾನಕಿ' ಕಥೆ ಮುಂದುವರಿಯಲಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

ಪ್ರಸಾರ ಆರಂಭಿಸಿದ ಟಿ.ಎನ್. ಸೀತಾರಾಮ್ ‘ಮುಂದಿನ ಅಧ್ಯಾಯ’; ಮೊಬೈಲ್​ನಲ್ಲೇ ಫ್ರೀಯಾಗಿ ನೋಡಬಹುದು
ಮುಂದಿನ ಅಧ್ಯಾಯ

Updated on: Sep 22, 2026 | 12:08 PM

ಮುಖ್ಯಾಂಶಗಳು

  • ಯೂಟ್ಯೂಬ್‌ನಲ್ಲಿ ಸೀತಾರಾಮ್ ಹೊಸ ಸಾಹಸ
  • ಉಚಿತವಾಗಿ ನೋಡಿ 'ಮುಂದಿನ ಅಧ್ಯಾಯ'
  • ಅರ್ಧಕ್ಕೆ ನಿಂತಿದ್ದ 'ಮಗಳು ಜಾನಕಿ' ಕಥೆಗೆ ಸಿಗಲಿದೆ ಮುಕ್ತಿ

ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಆ್ಯಕ್ಷನ್ ಕಟ್ ಹೇಳಿದ್ದ ಧಾರಾವಾಹಿಗಳಿಗೆ ವಿಶೇಷ ತೂಕ ಇದೆ. ಕೋರ್ಟ್ ವಿಷಯ ಆಧರಿಸಿಯೇ ಅವರ ಧಾರಾವಾಹಿ ಕಥೆಗಳು ಇರುತ್ತಿದ್ದವು. ಈಗ ಅವರು ತಮ್ಮ ಪ್ರಸಿದ್ಧ ಧಾರಾವಾಹಿಗಳ ಮುಂದುವರಿದ ಭಾಗವನ್ನು ವೀಕ್ಷಕರ ಮುಂದೆ ತರಲು ‘ಮುಂದಿನ ಅಧ್ಯಾಯ’ ಎಂಬ ನೂತನ ಕಿರು ಸರಣಿ ಧಾರಾವಾಹಿಯನ್ನು ಪ್ರಾರಂಭಿಸಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಳ್ಳುವ ಮೂಲಕ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

‘ಮುಂದಿನ ಅಧ್ಯಾಯ’ ಸರಣಿಯ ಪ್ರಮುಖ ಮುಖ್ಯಾಂಶಗಳು:

ಪ್ರಸಾರ ಸಮಯ ಹಾಗೂ ವೇದಿಕೆ: ಈ ಕಿರು ಸರಣಿಯ ಮೊದಲ ಭಾಗವು ಸೋಮವಾರದಿಂದ (ಸೆಪ್ಟೆಂಬರ್ 21) ಪ್ರಸಾರ ಆರಂಭಿಸಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8:30 ರಿಂದ 9:00 ಗಂಟೆಯವರೆಗೆ ‘ಭೂಮಿಕಾ ಟಾಕೀಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಕಾಣಲಿದೆ.

ಹಳೆಯ ಪಾತ್ರಗಳ ಮುಂದುವರಿದ ಕಥೆ: ಸೀತಾರಾಮ್ ಅವರ ಸೂಪರ್ ಹಿಟ್ ಧಾರಾವಾಹಿಗಳ ಪ್ರಮುಖ ಪಾತ್ರಗಳನ್ನು ಅಂದು ಎಲ್ಲೆಲ್ಲಿ ನಿಲ್ಲಿಸಲಾಗಿತ್ತೋ, ಅಲ್ಲಿಂದ ಮುಂದಕ್ಕೆ ಅವರ ಬದುಕಿನಲ್ಲಿ ಏನಾಯಿತು ಎಂಬುದನ್ನು ಈ ಸರಣಿಯಲ್ಲಿ ತೋರಿಸಲಾಗುತ್ತದೆ. ಇದು ಕನ್ನಡದ ಪಾಲಿಗೆ ಹೊಸ ಪ್ರಯೋಗ.

ಮೊದಲ ಭಾಗದಲ್ಲಿ ‘ಜಾನಕಿ’ ಕಥೆ: ಟಿಎನ್​ಸಿ ಅವರು ನಿರ್ದೇಶನ ಮಾಡಿದ ‘ಮಗಳು ಜಾನಕಿ’ ಧಾರಾವಾಹಿ ಗಮನ ಸೆಳೆದಿತ್ತು. ಈ ಧಾರಾವಾಹಿ ಅರ್ಧಕ್ಕೆ ನಿಂತು ಹೋಗಿತ್ತು. ಈ ಧಾರಾವಾಹಿಯ ಜಾನಕಿ ಪಾತ್ರದ ಕಥೆಯನ್ನು ಅವರು ಮುಂದುವರಿಸಲಿದ್ದಾರೆ. ಈ ಸರಣಿಯ ಮೊದಲ ಸೀಸನ್ ಅಲ್ಲಿ ಸುಮಾರು 10 ರಿಂದ 15 ಸಂಚಿಕೆಗಳಲ್ಲಿ ಜಾನಕಿಯ ಕಥೆಯನ್ನು ತೋರಿಸಲು ಟಿಎನ್​ಸಿ ಅವರು ರೆಡಿ ಆಗಿದ್ದಾರೆ.

ಮುಂದಿನ ಭಾಗಗಳು: ಜಾನಕಿಯ ಕಥೆ ಮುಗಿದ ನಂತರ, ಮುಂದಿನ ಭಾಗಗಳಲ್ಲಿ ‘ಮಾಧವಿ ಪಟೇಲ್’ ಸೇರಿದಂತೆ ಸೀತಾರಾಮ್ ಅವರ ಇತರ ಜನಪ್ರಿಯ ಧಾರಾವಾಹಿಗಳ ಮುಖ್ಯ ಪಾತ್ರಗಳ ಕಥೆಗಳನ್ನು ಹಂತ ಹಂತವಾಗಿ ಪ್ರಸಾರ ಮಾಡಲು ಯೋಜಿಸಲಾಗಿದೆ.

ಇದನ್ನೂ ಓದಿ:  100 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಕಲರ್ಸ್ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ

ಜನಪ್ರಿಯೆ ನಿರ್ದೇಶಕರ ಸೀರಿಯಲ್​ಗಳು ಟಿವಿಯಲ್ಲಿ ಪ್ರಸಾರ ಕಾಣೋದು ಸಾಮಾನ್ಯ. ಆದರೆ, ಸೀತಾರಾಮ್ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ತಮ್ಮ ಹಿಂದಿನ ಧಾರಾವಾಹಿಗಳಿಗೆ ನೀಡಿದಂತೆಯೇ ಈ ಹೊಸ ಪ್ರಯೋಗಕ್ಕೂ ಪ್ರೇಕ್ಷಕರು ಪ್ರೀತಿ ಹಾಗೂ ಪ್ರೋತ್ಸಾಹ ನೀಡಬೇಕಾಗಿ ಟಿ. ಎನ್. ಸೀತಾರಾಮ್ ವಿನಂತಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us