BA Raju: ಹೃದಯಾಘಾತದಿಂದ ನಿರ್ಮಾಪಕ, ಪ್ರಚಾರಕ ಬಿಎ ರಾಜು ನಿಧನ; ಮಹೇಶ್​ ಬಾಬು ಸಂತಾಪ

BA Raju Death: ಬಿಎ ರಾಜು ನಿಧನಕ್ಕೆ ಮಹೇಶ್​ ಬಾಬು ಕಂಬನಿ ಮಿಡಿದಿದ್ದಾರೆ. ‘ರಾಜು ನಿಧನರಾಗಿರುವುದನ್ನು ಸಹಿಸಲಾಗುತ್ತಿಲ್ಲ. ನನ್ನ ಬಾಲ್ಯದಿಂದಲೂ ನಾನು ಅವರನ್ನು ಬಲ್ಲೆ. ಅವರ ಜೊತೆ ತುಂಬಾ ಹತ್ತಿರದಿಂದ ಕೆಲಸ ಮಾಡಿದ್ದೇನೆ’ ಎಂದು ಪ್ರಿನ್ಸ್​ ಟ್ವೀಟ್​ ಮಾಡಿದ್ದಾರೆ.

BA Raju: ಹೃದಯಾಘಾತದಿಂದ ನಿರ್ಮಾಪಕ, ಪ್ರಚಾರಕ ಬಿಎ ರಾಜು ನಿಧನ; ಮಹೇಶ್​ ಬಾಬು ಸಂತಾಪ
ಬಿಎ ರಾಜು - ಮಹೇಶ್ ಬಾಬು
Follow us
ಮದನ್​ ಕುಮಾರ್​
|

Updated on: May 22, 2021 | 12:37 PM

ಒಂದೆಡೆ ಕೊರೊನಾ, ಮತ್ತೊಂದೆಡೆ ಹೃದಯಾಘಾತದಿಂದಾಗಿ ಅನೇಕ ಸೆಲೆಬ್ರಿಟಿಗಳು ನಿಧನರಾಗುತ್ತಿದ್ದಾರೆ. ಟಾಲಿವುಡ್​ ನಿರ್ಮಾಪಕ ಹಾಗೂ ಸಿನಿಮಾ ಪ್ರಚಾರಕ ಬಿಎ ರಾಜು ಅವರು ಶುಕ್ರವಾರ (ಮೇ 21) ರಾತ್ರಿ ಹೈದರಾಬಾದ್​ನಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ. ಈ ಸುದ್ದಿ ಕೇಳಿ ಇಡೀ ಟಾಲಿವುಡ್​ಗೆ ಆಘಾತ ಆಗಿದೆ. ಬಿಎ ರಾಜು ಅವರಿಗೆ 57 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ಟಾಲಿವುಡ್​ ಸಿನಿಮಾಗಳಿಗೆ ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದರು. ರಾಜು ನಿಧನಕ್ಕೆ ಮಹೇಶ್​ ಬಾಬು ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.

ಇಬ್ಬರು ಪುತ್ರರನ್ನು ಬಿಎ ರಾಜು ಅಗಲಿದ್ದಾರೆ. 2018ರಲ್ಲಿ ಅವರ ಪತ್ನಿ, ನಿರ್ದೇಶಕಿ ಬಿ ಜಯಾ ನಿಧನರಾಗಿದ್ದರು. ಈಗ ರಾಜು ಸಾವಿನ ಸುದ್ದಿಯನ್ನು ಅವರ ಪುತ್ರ ಶಿವಕುಮಾರ್​ ಖಚಿತ ಪಡಿಸಿದ್ದಾರೆ. ‘ನಮ್ಮ ತಂದೆ ರಾಜು ಅವರು ಅಕಾಲಿಕ ಮರಣ ಹೊಂದಿದರು ಎಂಬುದನ್ನು ತೀವ್ರ ನೋವಿನೊಂದಿಗೆ ತಿಳಿಸುತ್ತಿದ್ದೇವೆ. ಹಠಾತ್​ ಡಯಾಬಿಟೀಸ್​ ಏರಿಳಿತ ಮತ್ತು ಹೃದಯಾಘಾತದಿಂದಾಗಿ ಅವರು ನಿಧನರಾದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಶಿವಕುಮಾರ್​ ಟ್ವೀಟ್​ ಮಾಡಿದ್ದಾರೆ.

ಸಿನಿಮಾ ಪತ್ರಕರ್ತನಾಗಿ, ಪ್ರಚಾರಕನಾಗಿ, ನಿರ್ಮಾಪಕನಾಗಿ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದ ಅವರು ‘ಸೂಪರ್​ ಹಿಟ್​’ ಎಂಬ ಮ್ಯಾಗಜಿನ್​ ಕೂಡ ಪ್ರಕಟಿಸುತ್ತಿದ್ದರು. ಮಹೇಶ್​ ಬಾಬು ಮತ್ತು ಅವರ ಕುಟುಂಬಕ್ಕೆ ಪರ್ಸನಲ್​​ ಪ್ರಚಾರಕನಾಗಿಯೂ ತೊಡಗಿಕೊಂಡಿದ್ದರು. ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ನೂರಾರು ಸಿನಿಮಾಗಳಿಗೆ ಅವರು ಪಿಆರ್​ಓ ಆಗಿದ್ದರು. ಪ್ರಭಾಸ್​, ನಾಗಾರ್ಜುನ, ಜ್ಯೂ. ಎನ್​ಟಿಆರ್​ ಮುಂತಾದ ಸ್ಟಾರ್​ ನಟರ ಜೊತೆಗೆ ಕೆಲಸ ಮಾಡಿದ್ದರು.

ರಾಜು ನಿಧನಕ್ಕೆ ಮಹೇಶ್​ ಬಾಬು ಕಂಬನಿ ಮಿಡಿದಿದ್ದಾರೆ. ‘ರಾಜು ಅವರು ನಿಧನರಾಗಿರುವುದನ್ನು ಸಹಿಸಲಾಗುತ್ತಿಲ್ಲ. ನನ್ನ ಬಾಲ್ಯದಿಂದಲೂ ನಾನು ಅವರನ್ನು ಬಲ್ಲೆ. ಅವರ ಜೊತೆ ತುಂಬಾ ಹತ್ತಿರದಿಂದ ಕೆಲಸ ಮಾಡಿದ್ದೇನೆ. ಹಲವು ವರ್ಷಗಳಿಂದ ಇಬ್ಬರೂ ಜೊತೆಯಾಗಿ ಪ್ರಯಾಣ ಮಾಡಿದ್ದೇವೆ’ ಎಂದು ರಾಜು ಜೊತೆಗಿನ ತಮ್ಮ ಒಡನಾಟವನ್ನು ಮಹೇಶ್​ ಬಾಬು ಸ್ಮರಿಸಿಕೊಂಡಿದ್ದಾರೆ.

‘ಸಿನಿಮಾ ಬಗ್ಗೆ ತೀವ್ರ ಒಲವು ಇದ್ದಂತಹ ಜಂಟಲ್​ಮನ್​ ಅವರು. ನಮ್ಮ ಕುಟುಂಬ ಎಂದರೆ ಅವರಿಗೆ ಪ್ರಪಂಚವಾಗಿತ್ತು. ನಮ್ಮ ಕುಟುಂಬ ಮತ್ತು ಮೀಡಿಯಾ ವಲಯಕ್ಕೆ ಇದು ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಾಜು ಅವರೇ, ನಿಮ್ಮನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತೇನೆ’ ಎಂದು ಮಹೇಶ್​ ಬಾಬು ಟ್ವೀಟ್​ ಮಾಡಿದ್ದಾರೆ.

ಮಹೇಶ್​ ಬಾಬು ಮಾತ್ರವಲ್ಲದೆ ಅನೇಕ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಪತ್ರಕರ್ತರು ಬಿಎ ರಾಜು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇದನ್ನೂ ಓದಿ:

ಹಾಸ್ಯ ನಟ ಅಯ್ಯಪ್ಪನ್​ ಗೋಪಿ ಹೃದಯಾಘಾತದಿಂದ ನಿಧನ; ಚಿತ್ರರಂಗಕ್ಕೆ ಮತ್ತೊಂದು ಆಘಾತ

Mahesh Babu: ಮಹೇಶ್​ ಬಾಬುಗೆ ಶಿಲ್ಪಾ ಶೆಟ್ಟಿ ಆಂಟಿ? ಇದು ಹೇಗೆ ಸಾಧ್ಯ ಎಂದು ತಲೆ ಕೆರೆದುಕೊಂಡ ಫ್ಯಾನ್ಸ್​

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್