
ಕಾಲಿವುಡ್ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಕಾಳಿ ಚಿತ್ರವು ಬಾರಿ ವಿವಾದಗಳನ್ನು ಸೃಷ್ಟಿ ಮಾಡಿದೆ. ಈ ಚಿತ್ರವು ಹಿಂದೂ ಧಾರ್ಮಿಕ ವಿಚಾರಗಳಿಗೆ ಮತ್ತು ದೇವರಿಗೆ ಅವಮಾನ ಮಾಡಿದೆ ಎಂಬ ವಿಚಾರವಾಗಿ ದೇಶದ್ಯಾಂತ ಭಾರೀ ಸದ್ದು ಮಾಡಿದೆ. ಇದೀಗ ಈ ವಿಚಾರವಾಗಿ ಕಾಳಿ ಚಿತ್ರದ ಪ್ರಚಾರಕ್ಕಾಗಿ ವೇದಿಕೆಯನ್ನು ಸೃಷ್ಟಿ ಮಾಡಿಕೊಟ್ಟ ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ವಿಶ್ವವಿದ್ಯಾನಿಲಯ ಪ್ರಾಯೋಜಿತ ಸಮಾರಂಭದಲ್ಲಿ “ಕಾಳಿ” ಚಲನಚಿತ್ರವನ್ನು ಪ್ರದರ್ಶಿಸಲಾಯಿತು ಮತ್ತು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುತ್ತಿರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಇದೀಗ ಈ ಬಗ್ಗೆ ಕ್ಷಮಾಪಣೆ ಪತ್ರವನ್ನು ಟ್ವಿಟ್ ಮೂಲಕ ವೈರಲ್ ಮಾಡಿದೆ. ನಮ್ಮ ವಿಶ್ವ ಕ್ಷಮಾಪಣೆಯ ಪತ್ರದಲ್ಲಿ, ಈ ಕಾರ್ಯವನ್ನು ನಮ್ಮ ವಿಶ್ವವಿದ್ಯಾಲಯವು ತನ್ನ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ ಮತ್ತು ಅಂತಹ ಸೂಕ್ಷ್ಮ ವಿಷಯಗಳನ್ನು ಹೆಚ್ಚು ಅಗತ್ಯವನ್ನು ಒಪ್ಪಿಕೊಂಡಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಕಾಳಿ ಚಿತ್ರ ಪ್ರದರ್ಶನದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ.
ಈ ಚಲನಚಿತ್ರವನ್ನು ಅಗಾ ಖಾನ್ ಮ್ಯೂಸಿಯಂನಲ್ಲಿನ ಅಂಡರ್ ದಿ ಟೆಂಟ್ ಯೋಜನೆಯಲ್ಲಿ ತೋರಿಸಬೇಕಿತ್ತು ಮತ್ತು ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಕೆನಡಾ ಎಕ್ಸಲೆನ್ಸ್ ರಿಸರ್ಚ್ ಚೇರ್ ಇನ್ ಮೈಗ್ರೇಷನ್ ಅಂಡ್ ಇಂಟಿಗ್ರೇಷನ್ ಅಥವಾ ಸಿಇಆರ್‌ಸಿ ಮೈಗ್ರೇಷನ್ ಆಯೋಜಿಸಿತ್ತು. ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರಿಂದ ದೂರವಿದೆ. ಕಾರ್ಯಕ್ರಮದ ಸಂಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳುತ್ತವೆ ಎಂದು ವಿಶ್ವವಿದ್ಯಾಲಯವು ಹೇಳಿದೆ. ವಿಶ್ವವಿದ್ಯಾನಿಲಯವು ನಮ್ಮ ಕಡೆಯಿಂದ ಈ ವಿಚಾರಕ್ಕಾಗಿ ಕ್ಷಮೆಯಾಚಿಸಲು ಬಯಸುತ್ತದೆ ಎಂದು ಪತ್ರ ಬರೆದಿದೆ.
#BREAKING. @TorontoMet apologizes to the Hindu community for having their name associated with the Kali poster created by @LeenaManimekali. We thank the university for distancing themselves & taking steps to address the matter locally. #HinduVoicesMatter #KaaliPosterControversy. pic.twitter.com/4ca4LfTqgu
— CoHNA (Coalition of Hindus of North America) (@CoHNAOfficial) July 8, 2022
ಅಗಾಖಾನ್ ಮ್ಯೂಸಿಯಂ ಕ್ಷಮೆಯಾಚಿಸಿದೆ
ಹಿಂದೂಫೋಬಿಕ್ ಚಿತ್ರ ‘ಕಾಳಿ’ ಪ್ರದರ್ಶನವನ್ನು ನಿಲ್ಲಿಸಿದೆ. ಜುಲೈ 6 ರಂದು ಹಿಂದೂಫೋಬಿಕ್ ಚಿತ್ರ ‘ಕಾಳಿ’ ಪ್ರದರ್ಶನವನ್ನು ನಿಲ್ಲಿಸಲು ವಿಶ್ವವಿದ್ಯಾಲಯ ನಿರ್ಧರಿಸಿತ್ತು. ವಿಯನ್ ನ್ಯೂಸ್‌ನ ಪ್ರಶ್ನೆಗೆ ಉತ್ತರವಾಗಿ ವಿಶ್ವವಿದ್ಯಾನಿಲಯವು ‘ಕಾಳಿ’ ಚಿತ್ರವು ‘ಅಂಡರ್ ದಿ ಟೆಂಟ್’ ಕಾರ್ಯಕ್ರಮದ ಮುಂದಿನ ಪ್ರದರ್ಶನದ ಭಾಗವಾಗಿರುವುದಿಲ್ಲ ಎಂದು ಹೇಳಿದೆ.
ಇದನ್ನು ಓದಿ: ವಿವಾದ ಸೃಷ್ಟಿಸಿರುವ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಲುಕ್‌ಔಟ್ ನೋಟಿಸ್
ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯವು ಕಾರ್ಯಕ್ರಮದ ವಿವರಗಳ ಪುಟದಲ್ಲಿ ಹೇಳಿಕೆಯನ್ನು ಕೂಡ ಸೇರಿಸಿದೆ. ಹೇಳಿಕೆಯಲ್ಲಿ, ವಿಶ್ವವಿದ್ಯಾನಿಲಯದ CERC ವಿಭಾಗವು, ಜುಲೈ 2, ಶನಿವಾರದಂದು ನಮ್ಮ ಅಂಡರ್ ದಿ ಟೆಂಟ್ ಪ್ರಸ್ತುತಿಯಲ್ಲಿನ ಕೆಲವು ವಿಷಯವು ಅಪರಾಧವನ್ನು ಉಂಟು ಮಾಡಿದೆ ಎಂದು ನಾವು ವಿಷಾದಿಸುತ್ತೇವೆ ಮತ್ತು ಇದನ್ನು ಪರಿಹರಿಸಲು ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಸಮಾನತೆ, ವೈವಿಧ್ಯತೆ, ಏಕತೆಗೆ ಬದ್ಧರಾಗಿದ್ದೇವೆ ಮತ್ತು ನಮ್ಮ ಸಮಾಜದಲ್ಲಿನ ನಂಬಿಕೆಗಳು ಮತ್ತು ದೃಷ್ಟಿಕೋನಗಳ ವೈವಿಧ್ಯತೆಯನ್ನು ಗೌರವಿಸುತ್ತೇವೆ ಎಂದು ಹೇಳಿಕೊಂಡಿದೆ. ಇದಕ್ಕೂ ಒಂದು ದಿನ ಮುಂಚಿತವಾಗಿ, ಅಗಾ ಖಾನ್ ಮ್ಯೂಸಿಯಂ ಕೂಡ ಹೇಳಿಕೆಯನ್ನು ನೀಡಿತ್ತು ಮತ್ತು ಹಿಂದೂ ಮತ್ತು ಇತರ ನಂಬಿಕೆ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ.
Published On - 5:40 pm, Sat, 9 July 22