‘ಟಾಕ್ಸಿಕ್’ ರಿಲೀಸ್ ಆಗಿ ಒಂದು ವಾರ; 7 ದಿನಕ್ಕೆ ಯಶ್ ಸಿನಿಮಾ ಗಳಿಸಿದ್ದೆಷ್ಟು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮೊದಲ ವಾರದಲ್ಲೇ 315 ಕೋಟಿ ರೂಪಾಯಿ ಜಾಗತಿಕ ಗ್ರಾಸ್ ಗಳಿಕೆ ಮಾಡಿದೆ. ಭಾರತದಲ್ಲಿ 229.60 ಕೋಟಿ ನಿವ್ವಳ ಗಳಿಕೆ ಮಾಡಿದ್ದು, ಏಳನೇ ದಿನವೂ ಗಳಿಕೆಯಲ್ಲಿ ಚೇತರಿಕೆ ಕಾಣುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಕಂಬ್ಯಾಕ್ ಮಾಡುವ ನಿರೀಕ್ಷೆ ಇದೆ.

‘ಟಾಕ್ಸಿಕ್’ ರಿಲೀಸ್ ಆಗಿ ಒಂದು ವಾರ; 7 ದಿನಕ್ಕೆ ಯಶ್ ಸಿನಿಮಾ ಗಳಿಸಿದ್ದೆಷ್ಟು?
ಟಾಕ್ಸಿಕ್

Updated on: Sep 02, 2026 | 9:48 AM

ಮುಖ್ಯಾಂಶಗಳು

  • ಮೊದಲ ವಾರದಲ್ಲೇ 300 ಕೋಟಿಯ ಕ್ಲಬ್ ಸೇರಿದ 'ಟಾಕ್ಸಿಕ್'
  • 7ನೇ ದಿನವೂ ಚೇತರಿಸಿಕೊಂಡ ಗಳಿಕೆ
  • ಭಾರತದಲ್ಲಿ 229 ಕೋಟಿ ನೆಟ್ ಕಲೆಕ್ಷನ್ 

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಚಿತ್ರದ ಮೇಲೆ ನೇರ ಪರಿಣಾಮ ಬೀರಿದೆ. ಅಂದುಕೊಂಡ ರೀತಿಯಲ್ಲಿ ಸಿನಿಮಾದ ಗಳಿಕೆ ಆಗಿಲ್ಲ. ಮೊದಲ ದಿನವೇ ಭಾರತದಲ್ಲಿ ಬರೋಬ್ಬರಿ 101.10 ಕೋಟಿ ರೂಪಾಯಿ ನೆಟ್ ಗಳಿಕೆ ಕಾಣುವ ಮೂಲಕ ಸಿನಿಮಾ ಹೊಸ ಇತಿಹಾಸ ಬರೆದಿತ್ತು. ಆ ಬಳಿಕ ಕಲೆಕ್ಷನ್ ಕಡಿಮೆ ಆಗಿದೆ.

‘ಟಾಕ್ಸಿಕ್’ ಸಿನಿಮ ಮೊದಲ ದಿನ 101.10 ಕೋಟಿ ರೂಪಾಯಿ, ಎರಡನೇ ದಿನ 37.65 ಕೋಟಿ ರೂಪಾಯಿ, ಮೂರನೇ ದಿನ 27.20 ಕೋಟಿ ರೂಪಾಯಿ, ನಾಲ್ಕನೇ ದಿನ 25.15 ಕೋಟಿ ರೂಪಾಯಿ ಹಾಗೂ ಐದನೇ ದಿನ 23.00 ಕೋಟಿ ರೂಪಾಯಿ ರೂಪಾಯಿ ಸಂಗ್ರಹ ಮಾಡಿತ್ತು.

ಇನ್ನು ವಾರದ ಕೆಲಸದ ದಿನಗಳಾದ ಆರನೇ ದಿನ 7.65 ಕೋಟಿ ಗಳಿಕೆ ಕಂಡಿದ್ದ ಸಿನಿಮಾ, ಏಳನೇ ದಿನ ಶೇಕಡಾ 2.6 ರಷ್ಟು ಚೇತರಿಕೆ ಕಂಡು 7.85 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಭಾರತದಲ್ಲಿ 7 ದಿನಗಳ ಒಟ್ಟು ನೆಟ್ ಕಲೆಕ್ಷನ್ 229.60 ಕೋಟಿ ರೂಪಾಯಿ ತಲುಪಿದ್ದು, ಭಾರತದ ಒಟ್ಟು ಗ್ರಾಸ್ ಸಂಗ್ರಹ 274.25 ಕೋಟಿ ರೂಪಾಯಿಯಾಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ವೀಕ್ಷಿಸಿ ಯಶ್ ತಾಕತ್ತು ಮೆಚ್ಚಿಕೊಂಡ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ 

ವಿದೇಶಗಳಲ್ಲೂ ‘ಟಾಕ್ಸಿಕ್’ ಚಿತ್ರಕ್ಕೆ ಭರ್ಜರಿ ಬೆಂಬಲ ಸಿಕ್ಕಿದೆ. ಏಳನೇ ದಿನ ವಿದೇಶಗಳಲ್ಲಿ 1.50 ಕೋಟಿ ರೂಪಾಯಿ ಗಳಿಸಿರುವ ಸಿನಿಮಾ, ಇಲ್ಲಿಯವರೆಗೆ ಒಟ್ಟು 40.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತ ಮತ್ತು ವಿದೇಶಿ ಮಾರುಕಟ್ಟೆ ಎಲ್ಲವನ್ನೂ ಸೇರಿಸಿ ‘ಟಾಕ್ಸಿಕ್’ ಸಿನಿಮಾ ಮೊದಲ ವಾರದಲ್ಲಿ ವಿಶ್ವದಾದ್ಯಂತ ಒಟ್ಟು 315.00 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡುವ ಮೂಲಕ 300 ಕೋಟಿಯ ಮೈಲಿಗಲ್ಲನ್ನು ಯಶಸ್ವಿಯಾಗಿ ದಾಟಿದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ 400 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us