‘ಟಾಕ್ಸಿಕ್’ ಟೀಸರ್ನಲ್ಲಿ ತಪ್ಪು: ವೀಕ್ಷಕರ ದಾರಿ ತಪ್ಪಿಸಲಾಗಿದೆಯೇ?
Toxic movie teaser: ‘ಟಾಕ್ಸಿಕ್’ ಟೀಸರ್ನಲ್ಲಿರುವ ಆಕ್ಷನ್ ಜೊತೆಗೆ ಕಾರಿನ ಒಳಗೆ ನಡೆಯುತ್ತಿರುವ ದೃಶ್ಯದ ಬಗ್ಗೆಯೂ ಜೋರಾಗಿ ಚರ್ಚೆ ನಡೆದಿದೆ. ಕಾರಿನ ಒಳಗೆ ಯಶ್ ಪಾತ್ರ ಲೈಂಗಿಕ್ ಕ್ರಿಯೆಯಲ್ಲಿ ತೊಡಗಿರುತ್ತದೆ. ಆ ಕ್ರಿಯೆಯ ಉತ್ಪತ್ತಿಯಾಗುವ ಶಕ್ತಿಯಿಂದ ಡೆಟೊನೇಟರ್ ಆನ್ ಆಗಿ ವಿಲನ್ಗಳಿದ್ದ ಕಡೆ ಬಾಂಬ್ ಬ್ಲಾಸ್ಟ್ ಆಗುವಂತೆ ತೋರಿಸಲಾಗಿದೆ. ಆದರೆ ಪ್ರಾಕ್ಟಿಕಲ್ ಆಗಿ ಇದು ಅಸಾಧ್ಯ ಎಂಬ ವಾದ ಇದೀಗ ವ್ಯಕ್ತವಾಗಿದೆ. ಹಾಗಿದ್ದರೆ ಟೀಸರ್ನಲ್ಲಿ ಆಗಿರುವ ತಪ್ಪೇನು?

‘ಟಾಕ್ಸಿಕ್’ (Toxic) ಸಿನಿಮಾದ ಟೀಸರ್ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಚರ್ಚೆಯಲ್ಲಿರುವ ವಿಷಯ. ಜನವರಿ 08 ರಂದು ಬಿಡುಗಡೆ ಆಗಿರುವ ಟೀಸರ್ ಈಗಾಗಲೆ 300 ಮಿಲಿಯನ್ಗೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಟೀಸರ್ನಲ್ಲಿರುವ ಆಕ್ಷನ್ ಜೊತೆಗೆ ಕಾರಿನ ಒಳಗೆ ನಡೆಯುತ್ತಿರುವ ದೃಶ್ಯದ ಬಗ್ಗೆಯೂ ಜೋರಾಗಿ ಚರ್ಚೆ ನಡೆದಿದೆ. ಕಾರಿನ ಒಳಗೆ ಯಶ್ ಪಾತ್ರ ಲೈಂಗಿಕ್ ಕ್ರಿಯೆಯಲ್ಲಿ ತೊಡಗಿರುತ್ತದೆ. ಆ ಕ್ರಿಯೆಯ ಉತ್ಪತ್ತಿಯಾಗುವ ಶಕ್ತಿಯಿಂದ ಡೆಟೊನೇಟರ್ ಆನ್ ಆಗಿ ವಿಲನ್ಗಳಿದ್ದ ಕಡೆ ಬಾಂಬ್ ಬ್ಲಾಸ್ಟ್ ಆಗುವಂತೆ ತೋರಿಸಲಾಗಿದೆ. ಆದರೆ ಪ್ರಾಕ್ಟಿಕಲ್ ಆಗಿ ಇದು ಅಸಾಧ್ಯ ಎಂಬ ವಾದ ಇದೀಗ ವ್ಯಕ್ತವಾಗಿದೆ. ಹಾಗಿದ್ದರೆ ಟೀಸರ್ನಲ್ಲಿ ಆಗಿರುವ ತಪ್ಪೇನು?
ರಾಘವೇಂದ್ರ ಎಂ ಸುಬ್ರಹ್ಮಣ್ಯ ಎಂಬುವರು ಹಂಚಿಕೊಂಡಿರುವ ಪೋಸ್ಟ್ನಲ್ಲಿ ಈ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ, ತಮ್ಮನ್ನು ವಿಜ್ಞಾನದ ವಿಧ್ಯಾರ್ಥಿ ಎಂದು ಹೇಳಿರುವ ರಾಘವೇಂದ್ರ ಅವರು, ‘ಟಾಕ್ಸಿಕ್’ ಟೀಸರ್ನಲ್ಲಿ ತೋರಿಸಲಾಗಿರುವ ದೃಶ್ಯ, ವೈಜ್ಞಾನಿಕವಾಗಿ ಅಸಾಧ್ಯ ಎಂದಿದ್ದು, ಅದಕ್ಕೆ ಕೆಲವು ಮೌಲಿಕ ಕಾರಣಗಳನ್ನು ಸಹ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ರಾಘವೇಂದ್ರ ಅವರು ನೀಡಿರುವ ಕಾರಣಗಳು ಇಂತಿವೆ…
ಟೀಸರ್ನಲ್ಲಿ ತೋರಿಸಿರುವಂತೆ ಕುಡುಕ ಡ್ರೈವರ್, ಕಾರಿನ ಹಿಂಬದಿಗೆ ಹುಕ್ ರೀತಿಯಲ್ಲಿ ಸೇರಿಸುವ ಯಂತ್ರದ ಹೆಸರು ಪ್ಲಂಜರ್ ಡೆಟೊನೇಟರ್. ಇದನ್ನು ಬ್ಲಾಸ್ಟಿಂಗ್ ಮಷಿನ್, ಶೋಟ್ ಎಕ್ಸ್ಪ್ಲೋಡರ್ ಎಂದೂ ಸಹ ಕರೆಯಲಾಗುತ್ತದೆ. 1878 ರಲ್ಲಿ ಇದನ್ನು ವಿನ್ಯಾಸ ಮಾಡಲಾಯ್ತು. ಯಂತ್ರದ ಮೇಲಿನ ಟಿ ಆಕಾರದ ರಾಡ್ ಅನ್ನು ಒತ್ತುವ ಮೂಲಕ ಉತ್ಪಾದನೆಯಾಗುವ ವಿದ್ಯುತ್ ವೈಯರ್ಗಳ ಸಹಾಯದಿಂದ ಬಾಂಬ್ ಡೆಟೊನೇಟರ್ಗಳನ್ನು ಆನ್ ಮಾಡಿ ಸ್ಪೋಟಗೊಳಿಸುವುದು ಇದರ ಕಾರ್ಯ. ಟೀಸರ್ನಲ್ಲಿಯೂ ಇದನ್ನು ತೋರಿಸಲಾಗಿದೆ.
ಇದನ್ನೂ ಓದಿ:ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ
ಆದರೆ ಆ ಟಿ ಹ್ಯಾಂಡಲ್ ಅನ್ನು ಒತ್ತಲು ನಿಯಮತಿ ಶಕ್ತಿ ಅಥವಾ ಒತ್ತಡದ ಅಗತ್ಯ ಇರುತ್ತದೆ. ಟೀಸರ್ನಲ್ಲಿ ಗಮನಿಸಿದರೆ ಕಾರಿನಲ್ಲಿ ನಡೆಯುತ್ತಿರುವ ಕ್ರಿಯೆಯಿಂದ ಕಾರಿನ ಶಾಕ್ ಅಬ್ಸಾರ್ಬರ್ಗಳು ಮೇಲೆ ಕೆಳಕ್ಕೆ ಆಡುವ ಮೂಲಕ ಪ್ಲಂಜರ್ ಡೆಟೊನೇಟರ್ ನ ಟಿ ಆಕೃತಿ ಕೆಳಗೆ ಒತ್ತಿ ವಿದ್ಯುತ್ ಪ್ರವಹಿಸಿ ಬಾಂಬ್ ಬ್ಲಾಸ್ಟ್ ಆಗುತ್ತದೆ. ಆದರೆ ಎಲ್ಲ ಜಾಣ-ಜಾಣೆಯರಿಗೆ ಗೊತ್ತಿರುವಂತೆ ಕಾರಿನಲ್ಲಿ ನಡೆಯುತ್ತಿರುವ ಕ್ರಿಯೆಯಿಂದ ಕಾರಿನ ಮೇಲೆ ಮೇಲಿನಿಂದ ಕೆಳಗ್ಗೆ ಬೀಳುವುದಿಲ್ಲ ಬದಲಿಗೆ, ಮುಂದೆ-ಹಿಂದೆ ಬೀಳುತ್ತದೆ. ಟೀಸರ್ನಲ್ಲಿ ಸಹ ತೋರಿಸಿರುವಂತೆ ಕಾರಿನಲ್ಲಿ ಆ ಮಹಿಳೆ ಮಲಗಿರುವುದಿಲ್ಲ ಬದಲಿಗೆ ಸೀಟಿನ ಮೇಲೆ ಕುಳಿತಿರುತ್ತಾಳೆ. ಮತ್ತೊಂದು ದೃಶ್ಯದಲ್ಲಿ ಯಶ್ ಕಡೆ ಬೆನ್ನು ಹಾಕಿರುತ್ತಾಳೆ. ಈ ಭಂಗಿಗಳಲ್ಲಿ ಒತ್ತಡ ಮೇಲಿನಿಂದ ಕೆಳಕ್ಕೆ ಬೀಳಲು ಸಾಧ್ಯವೇ ಇಲ್ಲ ಎನ್ನುವ ವಾದವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಪ್ಲಂಜರ್ ಡೆಟೊನೇಟರ್ಗಳು ಕಡಿಮೆ ದೂರದಲ್ಲಿ ಇರಿಸಲಾದ ಬಾಂಬುಗಳನ್ನು ಡೆಟೊನೇಟ್ ಮಾಡಲಷ್ಟೆ ಶಕ್ತವಾಗಿರುತ್ತವೆ. ಹೆಚ್ಚು ಶಕ್ತಿ ಅವುಗಳಿಂದ ಉತ್ಪಾದನೆ ಆಗಬೇಕು ಎಂದಾದರೆ ಟಿ ಆಕಾರವನ್ನು ಹೆಚ್ಚು ಉದ್ದ ಮಾಡಿ ಅದನ್ನು ಮೇಲಿನಿಂದ ಕೆಳಗೆ ಒತ್ತಬೇಕಿರುತ್ತದೆ. ಆದರೆ ಟೀಸರ್ನಲ್ಲಿ ಡೆಟೊನೇಟರ್ ಚಿಕ್ಕದಾಗಿದೆ, ಟಿ ಆಕಾರದ ನೆಕ್ ಸಹ ಬಹಳ ಚಿಕ್ಕದಾದ ಟ್ರಾವೆಲ್ ಅನ್ನು ಹೊಂದಿದೆ. ಹೀಗಿರುವಾಗ ಸ್ಮಶಾನದಲ್ಲಿ ಇರಿಸಲಾಗಿರುವ ಅಷ್ಟು ಬಾಂಬ್ಗಳಿಗೆ, ಅಷ್ಟು ಉದ್ದ ವೈಯರ್ಗಳ ಮೂಲಕ ಪ್ರಹವಿಸುವಷ್ಟು ವಿದ್ಯುತ್ ಉತ್ಪಾದನೆ ಆಗುವುದು ವೈಜ್ಞಾನಿಕವಾಗಿ ಅಸಾಧ್ಯ ಎನ್ನಲಾಗುತ್ತಿದೆ.
ಏನೇ ಆಗಲಿ ‘ಟಾಕ್ಸಿಕ್’ದ ಟೀಸರ್ನ ಬಾಂಬ್ ಸೀನು ಬೇರೆ ಬೇರೆ ಕಾರಣಗಳಿಗೆ ಹಲವರಿಗೆ ಇಷ್ಟವಾಗಿದೆ. ಕೆಲವರು ಈ ಸೀನ್ ಸಿನಿಮಾನಲ್ಲಿ ಇರುವುದಿಲ್ಲ ಎಂದೂ ಸಹ ವಾದಿಸುತ್ತಿದ್ದಾರೆ. ಎಲ್ಲವೂ ಮಾರ್ಚ್ 19ಕ್ಕೆ ಗೊತ್ತಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




