‘ಟಾಕ್ಸಿಕ್’ ಸಿನಿಮಾ ಕೊನೆಯದಾಗಿ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ವಿವರ

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಜಾಗತಿಕವಾಗಿ 25 ದಿನಗಳಲ್ಲಿ 333.11 ಕೋಟಿ ರೂಪಾಯಿ ಗಳಿಸಿದೆ. ಚಿತ್ರಮಂದಿರಗಳಲ್ಲಿ ಗಳಿಕೆ ಕುಸಿದಿದ್ದರೂ ಈ ಸಿನಿಮಾ ನಟಿ ಕಿಯಾರಾ ಅಡ್ವಾಣಿ ವೃತ್ತಿಜೀವನದ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಚಿತ್ರವಾಗಿ ಹೊರಹೊಮ್ಮಿದೆ. ಈ ಸಿನಿಮಾದ ಕಲೆಕ್ಷನ್ ವಿವರ ಇಲ್ಲಿದೆ.

‘ಟಾಕ್ಸಿಕ್’ ಸಿನಿಮಾ ಕೊನೆಯದಾಗಿ ಗಳಿಸಿದ್ದೆಷ್ಟು? ಇಲ್ಲಿದೆ ಕಲೆಕ್ಷನ್ ವಿವರ
ಟಾಕ್ಸಿಕ್ ಸಿನಿಮಾ
Edited By:

Updated on: Sep 21, 2026 | 2:48 PM

ಮುಖ್ಯಾಂಶಗಳು

  • 25 ದಿನಗಳಲ್ಲಿ 333 ಕೋಟಿ ಗಳಿಕೆ
  • ಗಲ್ಲಾಪೆಟ್ಟಿಗೆಯಲ್ಲಿ 'ಟಾಕ್ಸಿಕ್' ಬಿಸಿನೆಸ್
  • ಓವರ್‌ಸೀಸ್ ಪ್ರದರ್ಶನ ಕ್ಲೋಸ್ 

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಬಹುತೇಕ ಪೂರ್ಣಗೊಂಡಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ತೀವ್ರ ಕುಸಿತ ಕಂಡಿದೆ. ಭಾರಿ ನಿರೀಕ್ಷೆಯೊಂದಿಗೆ ತೆರೆಕಂಡಿದ್ದ ಈ ಚಿತ್ರದ ಗಳಿಕೆ ನಿಧಾನಗತಿಯಲ್ಲಿದೆ.

ಓವರ್‌ಸೀಸ್ ಮಾರುಕಟ್ಟೆಯಲ್ಲಿ ಈ ಸಿನಿಮಾದ ಪ್ರದರ್ಶನ ಈಗಾಗಲೇ ಅಂತ್ಯಗೊಂಡಿದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಿಂದ ಮಾತ್ರ ಅಲ್ಪಮಟ್ಟದ ಆದಾಯ ಹರಿದುಬರುತ್ತಿದೆ. ನಾಲ್ಕನೇ ಶನಿವಾರದಂದು ಭಾರತದಲ್ಲಿ ಈ ಚಿತ್ರ ಕೇವಲ 13 ಲಕ್ಷ ರೂಪಾಯಿ ಸಂಗ್ರಹಿಸಿದೆ. ಜಾಗತಿಕವಾಗಿ 25ನೇ ದಿನದ ಗಳಿಕೆ 13 ಲಕ್ಷ ರೂಪಾಯಿಗೆ ಸೀಮಿತವಾಗಿದೆ. ಭಾನುವಾರ ಕೂಡ ಲಕ್ಷದಲ್ಲೇ ಕಲೆಕ್ಷನ್ ಆಗಿದೆ.

ಚಿತ್ರದ ಒಟ್ಟಾರೆ ಕಲೆಕ್ಷನ್ ವಿವರಗಳನ್ನು ನೋಡುವುದಾದರೆ ಭಾರತದಲ್ಲಿ ಇದುವರೆಗೆ 289.81 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ವಿದೇಶಿ ಮಾರುಕಟ್ಟೆಯಿಂದ 43.3 ಕೋಟಿ ರೂಪಾಯಿ ಹರಿದುಬಂದಿದೆ. ದೇಶಿಯ ಹಾಗೂ ವಿದೇಶಿ ಗಳಿಕೆಯನ್ನು ಒಟ್ಟುಗೂಡಿಸಿದಾಗ 25 ದಿನಗಳಲ್ಲಿ ಈ ಸಿನಿಮಾ ಜಾಗತಿಕವಾಗಿ 333.11 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ.

ಭಾರತದಲ್ಲಿ ಈ ಸಿನಿಮಾದ ಒಟ್ಟು ನೆಟ್ ಕಲೆಕ್ಷನ್ 245.57 ಕೋಟಿ ರೂಪಾಯಿ ಆಗಿದೆ. ಭಾರಿ ಬಜೆಟ್ ಹಾಗೂ ಭಾರಿ ಸೌಂಡ್ ನಡುವೆ ಬಿಡುಗಡೆಯಾಗಿದ್ದ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಮಟ್ಟದ ಕಮಾಲ್ ಮಾಡಲು ಸಾಧ್ಯವಾಗಲಿಲ್ಲ. ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ನಂತರದ ದಿನಗಳಲ್ಲಿ ಕಲೆಕ್ಷನ್ ಕುಸಿದಿದೆ.

ಸಿನಿಮಾ ಕಡಿಮೆ ಗಳಿಕೆ ಮಾಡಿದ ನಡುವೆಯೂ ನಟಿ ಕಿಯಾರಾ ಅಡ್ವಾಣಿ ಕೆರಿಯರ್‌ನಲ್ಲಿ ಈ ಸಿನಿಮಾ ಹೊಸ ಮೈಲಿಗಲ್ಲು ನೆಟ್ಟಿದೆ. ‘ಟಾಕ್ಸಿಕ್’ ಚಿತ್ರವು ಕಿಯಾರಾ ವೃತ್ತಿಜೀವನದ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಸಿನಿಮಾವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ: ಟಾಕ್ಸಿಕ್ ಎದುರು ಒಂದು ದಿನವೂ ನಿಲ್ಲಲ್ಲ ಅಂದ್ಕೊಂಡಿದ್ವಿ’; ಹನುಮಾನ್ ಅಂಶ್; ನಿರ್ಮಾಪಕಿ ಮಾತು

‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್​ದಾಸ್ ನಿರ್ದೇಶಕಿ. ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ಒಟ್ಟಾಗಿ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಿಯಾರಾ, ರುಕ್ಮಿಣಿ ವಸಂತ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:44 pm, Mon, 21 September 26

Loading...
Unable to load recommendations.
Follow Us