ವಿಜಯ್ ಪಕ್ಷಕ್ಕೆ ಮತ ಹಾಕಿ ಖುಷಿಯಿಂದ ಪೋಸ್ ಕೊಟ್ಟ ನಟಿ ತ್ರಿಶಾ ಕೃಷ್ಣನ್
ನಟ ದಳಪತಿ ವಿಜಯ್ ಅವರು ಮೊದಲ ಬಾರಿಗೆ ಟಿವಿಕೆ ಪಕ್ಷದ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರ ಆಪ್ತ ಗೆಳತಿ ತ್ರಿಶಾ ಕೃಷ್ಣನ್ ಅವರು ಬಂದು ಮತ ಚಲಾಯಿಸಿದ್ದಾರೆ. ಆ ನಂತರ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಒಂದು ಸಿಗ್ನಲ್ ನೀಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Election) ಇಂದು (ಏಪ್ರಿಲ್ 23) ನಡೆದಿದೆ. ಮತದಾನದ ಪ್ರಕ್ರಿಯೆಯಲ್ಲಿ ಸಿನಿಮಾ ತಾರೆಯರು ಪಾಲ್ಗೊಂಡಿದ್ದಾರೆ. ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯಲು ಜನರು ಕಾದಿದ್ದಾರೆ. ವಿಜಯ್ ಅವರ ಆಪ್ತ ಗೆಳತಿ ಎನ್ನಲಾದ ನಟಿ ತ್ರಿಶಾ ಕೃಷ್ಣನ್ (Trisha Krishnan) ಕೂಡ ಬಂದು ಮತದಾನ ಮಾಡಿದ್ದಾರೆ. ವೋಟ್ ಹಾಕಿದ ಬಳಿಕ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಸಂದೇಶ ನೀಡಿದ್ದಾರೆ.
ಚೆನ್ನೈನಲ್ಲಿ ಮತದಾನ ಮಾಡಿದ ಬಳಿಕ ತ್ರಿಶಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಬೆರಳಿನ ಶಾಯಿ ತೋರಿಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋಕ್ಕಿಂತ ಹೆಚ್ಚಾಗಿ ಅವರು ಬಳಸಿದ ಹಾಡು ಈಗ ಸುದ್ದಿಯಲ್ಲಿದೆ. ತ್ರಿಶಾ ಮತ್ತು ವಿಜಯ್ ಜೋಡಿಯ ಸೂಪರ್ ಹಿಟ್ ಚಿತ್ರ ‘ಗಿಲ್ಲಿ’ ಹಾಡನ್ನು ಅವರು ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಆಗಿ ಬಳಸಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಅವರು ಆ ಹಾಡಿನಲ್ಲಿ ವಿಸಿಲ್ ಬರುವ ಭಾಗವನ್ನೇ ಆರಿಸಿಕೊಂಡಿದ್ದಾರೆ. ವಿಜಯ್ ಅವರ TVK ಪಕ್ಷದ ಅಧಿಕೃತ ಚಿಹ್ನೆ ವಿಸಿಲ್ ಆಗಿರುವುದರಿಂದ, ತ್ರಿಶಾ ಅವರು ತಾವು ವಿಜಯ್‌ಗೆ ಮತ ಹಾಕಿರುವುದಾಗಿ ಪರೋಕ್ಷವಾಗಿ ಅಭಿಮಾನಿಗಳಿಗೆ ತಿಳಿಸಿದಂತಾಗಿದೆ. ಅದು ಅಭಿಮಾನಿಗಳಿಗೆ ಸುಲಭವಾಗಿ ಅರ್ಥ ಆಗಿದೆ. ಆ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ.
View this post on Instagram
ತ್ರಿಶಾ ಅವರ ಈ ಪೋಸ್ಟ್ ನೋಡಿ ಖುಷಿಯಾದ ವಿಜಯ್ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಹಬ್ಬ ಮಾಡುತ್ತಿದ್ದಾರೆ. ‘ಕೋಡ್ ವರ್ಡ್ ಗೊತ್ತಾಯಿತು’, ‘ಇದು ಅತ್ತಿಗೆಯ ಕಡೆಯಿಂದ ಸಿಕ್ಕ ಗ್ರೀನ್ ಸಿಗ್ನಲ್’ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು, ಕೆಲವರು ‘ಹಾಡಿನ ಮೂಲಕವೇ ಯಾರಿಗೆ ವೋಟ್ ಹಾಕಿದ್ದಾರೆಂದು ತಿಳಿಸಿಬಿಟ್ಟರು’ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯ್ ಜೊತೆಗಿನ ಅಫೇರ್ ಬಗ್ಗೆ ನೇರ ಪ್ರಶ್ನೆ: ತ್ರಿಶಾ ಪ್ರತಿಕ್ರಿಯೆ ಹೇಗಿತ್ತು ನೋಡಿ
ತಾಯಿ ಉಮಾ ಅವರೊಂದಿಗೆ ಮತಗಟ್ಟೆಗೆ ಬಂದ ತ್ರಿಶಾ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ‘ದಯವಿಟ್ಟು ಎಲ್ಲರೂ ಬಂದು ಮತದಾನ ಮಾಡಿ. ಇದು ನಿಮ್ಮ ಹಕ್ಕು ಮತ್ತು ಕರ್ತವ್ಯ’ ಎಂದು ಮನವಿ ಮಾಡಿದರು. ವಿಜಯ್ ಮತ್ತು ತ್ರಿಶಾ ನಡುವಿನ ಒಡನಾಟ ಜಾಸ್ತಿ ಆಗಿದೆ. ಅದರ ಬೆನ್ನಲ್ಲೇ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




