ತ್ರಿಷಾಗೆ ನಡೆದಿತ್ತು ನಿಶ್ಚಿತಾರ್ಥ; ಹುಡುಗ ಯಾರು? ಬೇಡ ಎಂದಿದ್ದು ಏಕೆ?

ನಟಿ ತ್ರಿಷಾ ಮತ್ತು ದಳಪತಿ ವಿಜಯ್ ಅವರ ಸಂಬಂಧದ ಕುರಿತು ಗಾಸಿಪ್‌ಗಳು ಹರಿದಾಡುತ್ತಿದ್ದು, ವಿಜಯ್ ಪತ್ನಿ ಸಂಗೀತಾ ಆರೋಪ ಮಾಡಿದ್ದಾರೆ. 42 ವರ್ಷದ ತ್ರಿಷಾ ಇನ್ನೂ ಅವಿವಾಹಿತರಾಗಿದ್ದರೂ, ಅವರಿಗೆ 11 ವರ್ಷಗಳ ಹಿಂದೆ ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥವಾಗಿತ್ತು. ವರುಣ್ ಕುಟುಂಬದ ಅಸಮ್ಮತಿ ಹಾಗೂ ವೃತ್ತಿ ಬಿಡುವ ಒತ್ತಡದಿಂದ ಈ ಮದುವೆ ಮುರಿದುಬಿತ್ತು.

ತ್ರಿಷಾಗೆ ನಡೆದಿತ್ತು ನಿಶ್ಚಿತಾರ್ಥ; ಹುಡುಗ ಯಾರು? ಬೇಡ ಎಂದಿದ್ದು ಏಕೆ?
ತ್ರಿಷಾ
Edited By:

Updated on: Mar 09, 2026 | 8:39 AM

ನಟಿ ತ್ರಿಷಾ (Trisha) ಅವರು ಈಗ ಸುದ್ದಿಯಲ್ಲಿ ಇದ್ದಾರೆ. ಅವರು ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಜೊತೆ ಸುತ್ತಾಡುತ್ತಾ ಇದ್ದಾರೆ. ಈ ಕಾರಣಕ್ಕೆ ವಿಜಯ್ ಹಾಗೂ ಅವರ ಮಧ್ಯೆ ಸಂಬಂಧ ಕಲ್ಪಿಸಲಾಗುತ್ತಿದೆ. ಹೀಗಿರುವಾಗಲೇ ವಿಜಯ್ ಪತ್ನಿ ಸಂಗೀತಾ ಅವರು ‘ವಿಜಯ್ಗೆ ನಟಿಯ ಜೊತೆ ಸಂಬಂಧ ಇದೆ’ ಎಂದು ಆರೋಪಿಸಿದ್ದಾರೆ. ತ್ರಿಷಾ ಅವರಿಗೆ ಈಗ 42 ವರ್ಷ. ತ್ರಿಷಾ ಇನ್ನೂ ವಿವಾಹ ಆಗಿಲ್ಲ. ಹಾಗಂತ ಅವರು ಈ ಬಗ್ಗೆ ಆಲೋಚನೆ ಮಾಡಿಯೇ ಇಲ್ಲ ಎಂದು ಹೇಳೋಕೆ ಆಗುವುದಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ತ್ರಿಷಾಗೆ ಮದುವೆ ಆಗಿ, 10 ವರ್ಷಗಳೇ ಕಳೆದಿರುತ್ತವೆ. ಈ ವಿಷಯ ಅನೇಕರಿಗೆ ತಿಳಿದೇ ಇಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ತ್ರಿಷಾ ಅವರು ವರುಣ್ ಎಂಬುವವರನ್ನು ಮದುವೆ ಆಗಿರುತ್ತಿದ್ದರು. ಜನವರಿ 23ರಂದು ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಇವರ ಎಂಗೇಜ್ಮೆಂಟ್ ನಡೆಯಿತು. ತ್ರಿಷಾ ಮದುವೆ ಆಗಬೇಕಿದ್ದ ಹುಡುಗ ಉದ್ಯಮಿ ಆಗಿದ್ದರು ಎನ್ನಲಾಗಿದೆ. ಅವರು ನಿಶ್ಚಿತಾರ್ಥ ಮಾಡಿಕೊಂಡ ಚಿತ್ರಗಳು ವೈರಲ್ ಆದವು. ಎಂಗೇಜ್ಮೆಂಟ್ ವಿಷಯ ವೈರಲ್ ಆಗುತ್ತಿದ್ದಂತೆ ತ್ರಿಷಾ ಹಾಗೂ ವರುಣ್ ಸುತ್ತಾಟ ಆರಂಭಿಸಿದರು. ಆದರೆ, ವಿಧಿಯಾಟ ಬೇರೆಯದೇ ಇತ್ತು ಎನ್ನಿ.

ತ್ರಿಷಾ ಅವರು ಮೇ ತಿಂಗಳಲ್ಲಿ ನಿಶ್ಚಿತಾರ್ಥವನ್ನು ಕೊನೆ ಮಾಡಿಕೊಂಡರು. ಇದು ಅಭಿಮಾನಿಗಳಿಗೆ ಶಾಕಿಂಗ್ ಎಂದೆನಿಸಿತ್ತು. ನಿರೀಕ್ಷೆಗಳು ಇಬ್ಬರಿಗೂ ಹೆಚ್ಚೇ ಇದ್ದವು. ಈ ನಿರೀಕ್ಷೆ ತಲುಪಿಲ್ಲ. ಹೀಗಾಗಿ, ಇವರು ಬೇರೆ ಆದರು ಎಂದು ವರದಿ ಆಗಿತ್ತು. ಇವರು ಬೇರೆ ಆಗಲು ಮತ್ತೊಂದು ಕಾರಣವೂ ಇತ್ತು. ವರುಣ್ ಕುಟುಂಬ ಉದ್ಯಮದ ಹಿನ್ನೆಲೆ ಹೊಂದಿತ್ತು. ಅವರು ನಟಿಯನ್ನು ಮದುವೆ ಆಗುತ್ತಿರುವುದು ಕುಟುಂಬದವರಿಗೆ ಇಷ್ಟವೇ ಇರಲಿಲ್ಲವಂತೆ. ಹೀಗಾಗಿ, ಕುಟುಂಬದವರು ಅಸಮಾಧಾನ ಹೊರಹಾಕಿದ್ದರು. ಉದ್ಯಮ ಕುಟುಂಬದ ಹಿನ್ನೆಲೆ ಹೊಂದಿರುವವರನ್ನು ಮದುವೆ ಆಗುವಂತೆ ಕುಟುಂಬದವರು ಒತ್ತಾಯ ಹೇರಿದ್ದರು.

ತ್ರಿಷಾಗೂ ವರುಣ್ನ ಮದುವೆ ಆಗಿದ್ದರೆ ಸಾಕಷ್ಟು ತೊಂದರೆ ಆಗುತ್ತಿತ್ತಂತೆ. ಇದಕ್ಕೆ ಕಾರಣವೂ ಇದೆ. ತ್ರಿಷಾ ಅವರನ್ನು ನಿಯಂತ್ರಿಸಲು ವರುಣ್ ಇಷ್ಟಪಡುತ್ತಿದ್ದರು. ಅಲ್ಲದೆ, ನಟನೆಯನ್ನು ತೊರೆಯುವಂತೆ ಅವರು ಒತ್ತಡ ಹೇರಿದ್ದರು ಎಂದು ವರದಿ ಆಗಿದೆ. ಇದನ್ನು ಗಮನಿಸಿದ ಅವರು ನಿಶ್ಚಿತಾರ್ಥದಿಂದ ದೂರವೇ ಇರಲು ನಿರ್ಧರಿಸಿದರು.

ಇದನ್ನೂ ಓದಿ: ‘ತ್ರಿಷಾ ಮನೆಯಲ್ಲೇ ಇರಬೇಕು’; ಪಾರ್ಥಿಬನ್ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ

ಈ ಎರಡೂ ವಿಚಾರಕ್ಕೆ ಇಬ್ಬರ ಮಧ್ಯೆ ತಿಕ್ಕಾಟ ಆರಂಭ ಆಯಿತು. ಇದು ಬೇರೆಯದೇ ಹಂತಕ್ಕೆ ಹೋಯಿತು. ಮದುವೆ ಆದರೆ ಜೀವನ ನಡೆಸಲು ಸಾಧ್ಯವೇ ಇಲ್ಲ ಎಂದು ಇವರಿಗೆ ಅನಿಸಿದೆ. ಈ ಕಾರಣದಿಂದ ಇಬ್ಬರೂ ದೂರ ಆದರು. ತ್ರಿಷಾ ಆ ಬಳಿಕ ವಿವಾಹ ಆಗಲೇ ಇಲ್ಲ. ಆ ಬಗ್ಗೆ ಅವರು ಯೋಚಿಸಿಯೂ ಇಲ್ಲ. ಈಗ ಅವರು ವಿಜಯ್ ಜೊತೆ ಮದುವೆ ಆಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us