ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಗೆ ರೆಡಿ ಆದ ಅಲ್ಲು ಅರ್ಜುನ್; ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ

ಅಲ್ಲು ಅರ್ಜುನ್ ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಪುಷ್ಪ’ ಬಳಿಕ ಅವರು ಮತ್ತೊಂದು ಪ್ಯಾನ್​ ಇಂಡಿಯಾ ಚಿತ್ರಕ್ಕಾಗಿ ಸಿದ್ಧರಾಗುತ್ತಿದ್ದಾರೆ.

ಮತ್ತೊಂದು ಪ್ಯಾನ್​ ಇಂಡಿಯಾ ಸಿನಿಮಾಗೆ ರೆಡಿ ಆದ ಅಲ್ಲು ಅರ್ಜುನ್; ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ
ತ್ರಿವಿಕ್ರಂ ಶ್ರೀನಿವಾಸ್-ಅಲ್ಲು ಅರ್ಜುನ್

Updated on: May 26, 2023 | 6:31 AM

ತ್ರಿವಿಕ್ರಂ ಶ್ರೀನಿವಾಸ್​ಗೆ (Trivikram Srinivas) ಟಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಈವರೆಗೆ ಮಾಡಿರೋ ಸಿನಿಮಾಗಳು ನೇರವಾಗಿ ಟಾಲಿವುಡ್​ನಲ್ಲೇ (Tollywood) ರಿಲೀಸ್ ಆಗಿವೆ. ಈಗ ಅವರು ಹೊಸ ಸಿನಿಮಾ ಮಾಡೋಕೆ ರೆಡಿ ಆಗಿದ್ದಾರೆ. ವಿಶೇಷ ಎಂದರೆ ಇದು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ವಿಶೇಷ. ಸದ್ಯ ಈ ವಿಷಯ ಪ್ರಾಥಮಿಕ ಹಂತದಲ್ಲಿದ್ದು ಶೀಘ್ರವೇ ಎಲ್ಲವೂ ಫೈನಲ್ ಆಗುವ ಸಾಧ್ಯತೆ ಇದೆ. ಈ ವಿಚಾರ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿಬರಹುದು ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿದೆ.

ಅಲ್ಲು ಅರ್ಜುನ್ ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಪುಷ್ಪ’ ಬಳಿಕ ಅವರು ಮತ್ತೊಂದು ಪ್ಯಾನ್​ ಇಂಡಿಯಾ ಚಿತ್ರಕ್ಕಾಗಿ ಸಿದ್ಧರಾಗುತ್ತಿದ್ದಾರೆ. ಈ ಸಿನಿಮಾ ತೆಲುಗು, ತಮಿಳು, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ‘ಪುಷ್ಪ’ ಚಿತ್ರದಿಂದ ಅಲ್ಲು ಅರ್ಜುನ್ ಖ್ಯಾತಿ ಹೆಚ್ಚಿದ್ದು, ‘ಪುಷ್ಪ 2’ ಚಿತ್ರದಿಂದ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲಿದೆ. ಈ ಚಿತ್ರ ಮುಗಿದ ಬಳಿಕ ಅವರು ತ್ರಿವಿಕ್ರಂ ಶ್ರೀನಿವಾಸ್ ಜೊತೆ ಸಿನಿಮಾ ಮಾಡುತ್ತಾರೆ ಎಂದು ತಿಳಿದು ಬಂದಿದೆ.

ತ್ರಿವಿಕ್ರಂ ಶ್ರೀನಿವಾಸ್ ಅವರು ಮಹೇಶ್ ಬಾಬು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಜನವರಿ 12, 2023ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಕೆಲಸಗಳು ಮುಗಿದ ಬಳಿಕ ಅವರು ಅಲ್ಲು ಅರ್ಜುನ್ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಒಟ್ಟಾಗಿ ಕೆಲಸ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದು ಅನ್ನೋದು ವಿಶೇಷ. ‘ಜುಲಾಯಿ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲ ವೈಕುಂಠಪುರಮುಲೋ’ ಚಿತ್ರಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಮೂರು ಚಿತ್ರಗಳು ಹಿಟ್ ಸಿನಿಮಾ ಎನಿಸಿಕೊಂಡಿದೆ. ಈಗ ನಾಲ್ಕನೇ ಚಿತ್ರಕ್ಕಾಗಿ ಈ ಜೋಡಿ ಸಿದ್ಧವಾಗುತ್ತಿದೆ.

ಇದನ್ನೂ ಓದಿ: ‘ಪುಷ್ಪ 2’ ಪೋಸ್ಟರ್​ ರೀತಿ ವೇಷ ಧರಿಸಿ ಬಂದ ಸಂಸದ; ಅಲ್ಲು ಅರ್ಜುನ್​ ಅಭಿಮಾನಿಗಳಲ್ಲಿ ಹೆಚ್ಚಿತು ಕ್ರೇಜ್​

ಇತ್ತೀಚೆಗೆ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಭೇಟಿ ಆಗಿದ್ದಾರೆ. ಈ ಭೇಟಿ ವೇಳೆ ಕಥೆ ಚರ್ಚೆಗೆ ಬಂದಿದೆ. ಈ ಕಥೆಗೆ ಅಲ್ಲು ಅರ್ಜುನ್ ಇನ್ನಷ್ಟೇ ಅಧಿಕೃತ ಒಪ್ಪಿಗೆಯನ್ನು ಸೂಚಿಸಬೇಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us