Shaakuntalam: ಸಮಂತಾ ಅಭಿಮಾನಿಗಳನ್ನು ಕೆಣಕಿದ ನಾಗ ಚೈತನ್ಯ ಫ್ಯಾನ್ಸ್​; ಸೋಶಿಯಲ್​ ಮೀಡಿಯಾದಲ್ಲಿ ಶುರುವಾಗಿದೆ ಕಿತ್ತಾಟ

ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಗೆಲ್ಲಲಿಲ್ಲ. ಅದಕ್ಕಾಗಿ ನಾಗ ಚೈತನ್ಯ ಫ್ಯಾನ್ಸ್​ ಟ್ರೋಲ್​ ಮಾಡುತ್ತಿದ್ದಾರೆ.

Shaakuntalam: ಸಮಂತಾ ಅಭಿಮಾನಿಗಳನ್ನು ಕೆಣಕಿದ ನಾಗ ಚೈತನ್ಯ ಫ್ಯಾನ್ಸ್​; ಸೋಶಿಯಲ್​ ಮೀಡಿಯಾದಲ್ಲಿ ಶುರುವಾಗಿದೆ ಕಿತ್ತಾಟ
ನಾಗ ಚೈತನ್ಯ, ಸಮಂತಾ

Updated on: Apr 19, 2023 | 3:31 PM

ಒಂದು ಕಾಲದಲ್ಲಿ ಸಮಂತಾ ರುತ್​ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ ಅವರನ್ನು ಜೋಡಿಯಾಗಿ ನೋಡಲು ಫ್ಯಾನ್ಸ್​ ಇಷ್ಟಪಡುತ್ತಿದ್ದರು. ಟಾಲಿವುಡ್​ನಲ್ಲಿ ಕ್ಯೂಟ್​ ಜೋಡಿ ಎಂದೇ ಇವರಿಬ್ಬರು ಫೇಮಸ್​ ಆಗಿದ್ದರು. ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದರು. ಆದರೆ ವಿಚ್ಛೇದನ ಪಡೆದ ಬಳಿಕ ಎಲ್ಲವೂ ಬದಲಾಯಿತು. ಸಮಂತಾ ಅಭಿಮಾನಿಗಳು ನಾಗ ಚೈತನ್ಯ (Naga Chaitanya) ಮೇಲೆ ಆರೋಪ ಹೊರಿಸಲು ಆರಂಭಿಸಿದರು. ಅದೇ ರೀತಿ ನಾಗ ಚೈತನ್ಯ ಅಭಿಮಾನಿಗಳು ಸಮಂತಾ ಮೇಲೆ ಆರೋಪಗಳ ಮಳೆ ಸುರಿಸಿದರು. ಸೋಶಿಯಲ್​ ಮೀಡಿಯಾದಲ್ಲಿ ಕಿತ್ತಾಟ ಶುರುವಾಯಿತು. ಈಗ ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ (Shaakuntalam Movie) ಸೋತ ಬೆನ್ನಲ್ಲೇ ಟ್ವಿಟರ್​ ವಾರ್​ ಶುರುವಾಗಿದೆ. ಸಮಂತಾ ಅವರ ಅಭಿಮಾನಿಗಳನ್ನು ನಾಗ ಚೈತನ್ಯ ಫ್ಯಾನ್ಸ್​ ಕೆಣಕಿದ್ದಾರೆ.

ನಾಗ ಚೈತನ್ಯ ನಟನೆಯ ‘ಥ್ಯಾಂಕ್​ ಯೂ’ ಸಿನಿಮಾ 2022ರ ಜುಲೈನಲ್ಲಿ ಬಿಡುಗಡೆ ಆಗಿತ್ತು. ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಆಗಲಿಲ್ಲ. ಆಗ ಸಮಂತಾ ಅಭಿಮಾನಿಗಳು ಟ್ರೋಲ್​ ಮಾಡಿದ್ದರು. ಅದರಿಂದ ನಾಗ ಚೈತನ್ಯ ಫ್ಯಾನ್ಸ್​ಗೆ ಬೇಸರ ಆಗಿತ್ತು. ಅದಕ್ಕೆ ತಿರುಗೇಟು ನೀಡಲು ನಾಗ ಚೈತನ್ಯ ಅಭಿಮಾನಿಗಳಿಗೆ ಈಗ ಸಮಯ ಬಂದಿದೆ.

ಇದನ್ನೂ ಓದಿ
Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್​ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ
Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ
ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

ಇದನ್ನೂ ಓದಿ: ನಟಿ ಜೊತೆ ಲಂಡನ್​ನಲ್ಲಿ ನಾಗ ಚೈತನ್ಯ ಕದ್ದುಮುಚ್ಚಿ ಡೇಟಿಂಗ್​; ಫೋಟೋ ಲೀಕ್ ಮಾಡಿದವರು ಯಾರು?

ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಗೆಲ್ಲಲಿಲ್ಲ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರ ಹೀನಾಯವಾಗಿ ಸೋತಿದೆ. ಮೂರು ದಿನ ಪ್ರದರ್ಶನ ಕಂಡರೂ ಒಟ್ಟಾರೆ ಗಳಿಕೆ 10 ಕೋಟಿ ರೂಪಾಯಿ ಮೀರಲಿಲ್ಲ. ಇದರಿಂದ ನಿರ್ಮಾಪಕರಿಗೆ ಸಿಕ್ಕಾಪಟ್ಟೆ ನಷ್ಟ ಆಗಿದೆ. ಸಮಂತಾ ಅವರ ಸಿನಿಮಾ ಸೋತಿದ್ದಕ್ಕೆ ನಾಗ ಚೈತನ್ಯ ಅಭಿಮಾನಿಗಳು ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ದುಬಾರಿ ಬೆಲೆಗೆ ಐಶಾರಾಮಿ ಮನೆ ಖರೀದಿಸಿದ ನಾಗ ಚೈತನ್ಯ, ಯಾರಿಗಾಗಿ?

‘ಶಾಕುಂತಲಂ’ ಸೋಲಿನ ಬಗ್ಗೆ ಸಮಂತಾ ತಲೆ ಕೆಡಿಸಿಕೊಂಡಿಲ್ಲ. ಸದ್ಯ ಅವರು ಲಂಡನ್​ಗೆ ತೆರಳಿದ್ದಾರೆ. ಅಲ್ಲಿ ನಡೆದ ‘ಸಿಟಾಡೆಲ್​’ ಪ್ರೀಮಿಯರ್ ಶೋನಲ್ಲಿ ಅವರು ಭಾಗಿ ಆಗಿದ್ದಾರೆ. ಅವರ ಜೊತೆ ವರುಣ್​ ಧವನ್​, ಪ್ರಿಯಾಂಕಾ ಚೋಪ್ರಾ, ರಾಜ್ ನಿಧಿಮೋರು, ಕೃಷ್ಣ ಡಿ.ಕೆ, ಡಿಚರ್ಡ್​ ಮ್ಯಾಡನ್​ ಮುಂತಾದವರು ಕೂಡ ಪಾಲ್ಗೊಂಡಿದ್ದಾರೆ.

ಇಂಗ್ಲಿಷ್​ನ ‘ಸಿಟಾಡೆಲ್​’ ಸೀರಿಸ್​ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್​ ಮ್ಯಾಡನ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇದರ ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ರುತ್​ ಪ್ರಭು ಹಾಗೂ ವರುಣ್​ ಧವನ್​ ನಟಿಸಿದ್ದಾರೆ. ಇದಕ್ಕೆ ರಾಜ್​ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.