AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raveena Tandon: ‘ಕೆಜಿಎಫ್ 3 ಗೆ ರೆಡಿಯಾಗಿ’ ರಮಿಕಾಗೆ ಬಂತು ಕರೆ

KGF 3: ರವೀನಾ ಟಂಡನ್ ಕೆಜಿಎಫ್ 3 ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ 2 ಚಿತ್ರತಂಡದ ಪ್ರಮುಖ ಸದಸ್ಯರೊಬ್ಬರು ರವೀನಾಗೆ ಕರೆ ಮಾಡಿ ಕೆಜಿಎಫ್ 3ಗೆ ರೆಡಿಯಾಗಿ ಎಂದಿದ್ದಾರಂತೆ!

Raveena Tandon: 'ಕೆಜಿಎಫ್ 3 ಗೆ ರೆಡಿಯಾಗಿ' ರಮಿಕಾಗೆ ಬಂತು ಕರೆ
ರವೀನಾ ಟಂಡನ್-ಯಶ್
ಮಂಜುನಾಥ ಸಿ.
|

Updated on: Apr 19, 2023 | 4:26 PM

Share

ಕೆಜಿಎಫ್ 2 (KGF 2) ಸಿನಿಮಾ ಬಿಡುಗಡೆ ಆಗಿ ಇತಿಹಾಸ ಸೃಷ್ಟಿಸಿ ಒಂದು ವರ್ಷವಾಗಿದೆ. ಕನ್ನಡ ಚಿತ್ರರಂಗ ಕನಸೂ ಸಹ ಕಾಣದಿದ್ದ ಅದ್ಭುತವನ್ನು ಸಾಧಿಸಿದ ತೋರಿಸಿದ ಸಿನಿಮಾ ಕೆಜಿಎಫ್ 2. ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾಗಿದ್ದನ್ನು ಚಿತ್ರತಂಡವು ಸರಳವಾಗಿ ಸಂಭ್ರಮಿಸಿದೆ. ಸಿನಿಮಾದಲ್ಲಿ ನಟಿಸಿದವರಿಗೆ ಶುಭಾಷಯಗಳ ವಿನಿಮಯ ಮಾಡಿಕೊಳ್ಳಲಾಗಿದೆ. ಜೊತೆಗೆ ಅದೇ ದಿನ ಹೊಂಬಾಳೆ ಫಿಲಮ್ಸ್​ನವರು ಕೆಜಿಎಫ್ 3 (KGF 3) ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಕೆಜಿಎಫ್ 2 ಸಿನಿಮಾದಲ್ಲಿ ಮಹತ್ವದ ಪಾತ್ರದಲ್ಲಿ ನಟಿಸಿದ್ದ ರವೀನಾ ಟಂಡನ್ (Raveena Tandon) ಸಹ ಕೆಜಿಎಫ್ 3 ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಹಿಂದಿಯ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ರವೀನಾ ಟಂಡನ್ ಕೆಜಿಎಫ್ 2 ಸಿನಿಮಾ ಬಗ್ಗೆ ಮಾತನಾಡುತ್ತಾ, ”ಕೆಜಿಎಫ್ 2 ಸಿನಿಮಾ ಬೇರೆ ಲೆವೆಲ್​ನಲ್ಲಿ ನಿರ್ಮಾಣಗೊಂಡ ಸಿನಿಮಾ. ನಾನು ನಟಿಸಬೇಕಾದರೆ ಪ್ರತಿಬಾರಿಯೂ ಪ್ರಶಾಂತ್ ನೀಲ್ ಅವರನ್ನು ಕೇಳುತ್ತಿದ್ದೆ ಸರಿಯಾಗಿ ನಟಿಸಿದ್ದೀನಾ? ಎಂದು ಅವರು, ಇನ್ನು ಸ್ವಲ್ಪ ಹೆಚ್ಚು ಬೇಕು ಎಂದು ಹೇಳುತ್ತಿದ್ದರು. ನನ್ನಿಂದ ಓವರ್​ ಆಕ್ಟಿಂಗ್ ಮಾಡಿಸುತ್ತಿದ್ದಾರಾ ಎಂಬ ಭಯವಿತ್ತು ನನಗೆ ಆದರೆ ಅದನ್ನು ಹೇಳಿದ್ದೆ ಸಹ ಆದರೆ ಹಾಗೆ ಆಗಲಿಲ್ಲ. ಸಿನಿಮಾ ಬಿಡುಗಡೆ ಆದ ಬಳಿಕ ಯಶ್, ಸಂಜಯ್ ಜೊತೆಗೆ ನನ್ನ ಪಾತ್ರಕ್ಕೆ ಬಹಳ ಪ್ರಶಂಸೆಗಳು ವ್ಯಕ್ತವಾದವು. ನಮ್ಮ ತಂದೆಯ ಮಾತಿನಂತೆ ನಾನು ನಿರ್ದೇಶಕರನ್ನು ನಂಬಿದೆ ಅದರಿಂದ ನನಗೆ ಒಳ್ಳೆಯದಾಯಿತು” ಎಂದಿದ್ದಾರೆ.

ಅದೇ ಸಂದರ್ಭದಲ್ಲಿ ಕೆಜಿಎಫ್ 3 ಬಗ್ಗೆ ಮಾತನಾಡಿರುವ ರವೀನಾ ಟಂಡನ್, ಇತ್ತೀಚೆಗೆ ಕೆಜಿಎಫ್ 2 ಸಿನಿಮಾ ವಾರ್ಷಿಕೋತ್ಸವವಾದಾಗ ನನಗೆ ಮೊದಲು ಮೆಸೇಜ್ ಮಾಡಿದ್ದು ಯಶ್ ಪತ್ನಿ ರಾಧಿಕಾ ಪಂಡಿತ್, ನಿಮ್ಮನ್ನು ಹೊರತಾಗಿ ಇನ್ಯಾರೂ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಜೀವನಗಳನ್ನು ಬದಲಾಯಿಸಿದ್ದಕ್ಕೆ ಧನ್ಯವಾದ ಎಂದರು. ಅದೇ ದಿನ ಸಂಜೆ ಯಶ್ ಕರೆ ಮಾಡಿ, ನಾವು ಕೆಜಿಎಫ್ 3ಗೆ ರೆಡಿಯಾಗಬೇಕು ಎಂದರು. ನಾನು ಆ ಸಿನಿಮಾದಲ್ಲಿ ನನ್ನನ್ನೂ ಸಾಯಿಸಿಬಿಡಬೇಡ ಮತ್ತೆ ಎಂದೆ” ಎಂದು ನೆನಪು ಮಾಡಿಕೊಂಡಿದ್ದಾರೆ ರವೀನಾ.

ಇದನ್ನೂ ಓದಿ:KGF 3 Movie: ‘ಕೆಜಿಎಫ್ 3’ ಚಿತ್ರಕ್ಕಾಗಿ ಕಾಯಬೇಕು ಮತ್ತಷ್ಟು ವರ್ಷ; ಅಪ್​​ಡೇಟ್​ ನೀಡಿದ ವಿಜಯ್ ಕಿರಗಂದೂರು

”ಅದೇ ದಿನ ಪ್ರಶಾಂತ್ ನೀಲ್ ಕರೆ ಮಾಡಿದರು, ನಿಮಗೆ ಕೊಟ್ಟ ಪ್ರತಿ ಸೀನ್, ಪ್ರತಿ ಡೈಲಾಗ್ ಪ್ರತಿ ಕದಲಿಕೆಯನ್ನೂ ನೀವು ಅದ್ಭುತವಾಗಿ ನಿಭಾಯಿಸಿದಿರಿ. ನಾನು ಮೊದಲಿಗೆ ಹೆದರಿದ್ದೆ ಬಾಂಬೆ ನಟಿಯರೊಟ್ಟಿಗೆ ಹೇಗೆ ಕೆಲಸ ಮಾಡುವುದು ಎಂದು ಆದರೆ ನೀವು ಅದ್ಭುತವಾಗಿ ಸಹಕಾರಿ ನೀಡಿದಿರಿ ಎಂದರು. ನಿಮ್ಮೊಟ್ಟಿಗೆ ಕೆಲಸ ಮಾಡಿದ ಸಮಯವನ್ನು ನಾನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ನನಗೂ ನಿಮ್ಮೊಟ್ಟಿಗೆ ಕೆಲಸ ಆಸೆಯಿದೆ. ನನಗೂ ಕೆಜಿಎಫ್ 2 ಶೂಟಿಂಗ್ ಅದ್ಭುತ ಅನುಭವ. ನಾವು ಮತ್ತೆ ಒಟ್ಟಿಗೆ ಕೆಲಸ ಮಾಡಬೇಕು ಎಂದೆ” ಎಂದಿದ್ದಾರೆ.

ಜೊತೆಗೆ ಕೆಜಿಎಫ್ 3 ಆಗುತ್ತದೆ ಎನ್ನುತ್ತಿದ್ದಾರೆ. ಆದರೆ ಅದು ಯಾವಾಗ ಆಗುತ್ತದೆ ಎಂಬುದು ನನಗೆ ಇನ್ನೂ ಗೊತ್ತಿಲ್ಲ ಆದರೆ ಕೆಜಿಎಫ್ 3 ಮಾಡಬೇಕೆಂದು ಜನರೇ ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ ರವೀನಾ ಟಂಡನ್.

ಕೆಜಿಎಫ್ 2 ಸಿನಿಮಾದಲ್ಲಿ ನಟಿ ರವೀನಾ ಟಂಡನ್, ರಮಿಕಾ ಸೇನ್ ಎಂಬ ಪವರ್​ಫುಲ್ ಪಾತ್ರದಲ್ಲಿ ನಟಿಸಿದ್ದರು. ರಾಕಿಭಾಯ್​ಗೆ ಸೂಕ್ತ ಎದುರಾಳಿಯಾಗಿ ರವೀನಾ ಕಾಣಿಸಿಕೊಂಡಿದ್ದರು. ಕೆಜಿಎಫ್ 2 ಸಿನಿಮಾದ ಅಂತ್ಯದಲ್ಲಿ ರವೀನಾ ನಿರ್ವಹಿಸಿರುವ ರಮಿಕಾ ಪಾತ್ರವೇ ಕೆಜಿಎಫ್ 3 ಸಿನಿಮಾ ಲೀಡ್ ಒಂದನ್ನು ನೀಡಿದೆ ಹಾಗಾಗಿ ಕೆಜಿಎಫ್ 3 ಸಿನಿಮಾದಲ್ಲಿ ರಮಿಕಾ ಸಹ ಇರುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ