ಎರಡು ದಶಕಗಳ ಬಳಿಕ ಒಟ್ಟಾಗಿ ಹಾಡಿದ ಉದಿತ್ ನಾರಾಯಣ್ ಮತ್ತು ಕುಮಾರ್ ಸಾನು

ಸನ್ನಿ ಡಿಯೋಲ್ ಅಭಿನಯದ 'ಸೂರ್ಯಾ' ಸಿನಿಮಾದ 'ಸುನಿಯೋ ಜರಾ' ಹಾಡಿನ ಮೂಲಕ ದಿಗ್ಗಜ ಗಾಯಕರಾದ ಉದಿತ್ ನಾರಾಯಣ್ ಮತ್ತು ಕುಮಾರ್ ಸಾನು 21 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಈ ಗೆಳೆತನದ ಗೀತೆಯು ಅಪಾರ ಮೆಚ್ಚುಗೆ ಪಡೆಯುತ್ತಿದ್ದು, ಅದೇ ವೇಳೆ ವೈದ್ಯಕೀಯ ಕ್ಷೇತ್ರದ ಚಿತ್ರಣಕ್ಕೆ ಸಂಬಂಧಿಸಿದಂತೆ ಸಿನಿಮಾವು ಐಎಂಎ ಆಕ್ಷೇಪದಿಂದಾಗಿ ವಿವಾದಕ್ಕೆ ಸಿಲುಕಿದೆ.

ಎರಡು ದಶಕಗಳ ಬಳಿಕ ಒಟ್ಟಾಗಿ ಹಾಡಿದ ಉದಿತ್ ನಾರಾಯಣ್ ಮತ್ತು ಕುಮಾರ್ ಸಾನು
ಉದಿತ್-ಕುಮಾರ್ ಸಾನು

Updated on: Oct 28, 2026 | 3:13 PM

ಸನ್ನಿ ಡಿಯೋಲ್ ಮತ್ತು ರವಿ ಕಿಶನ್ ಅಭಿನಯದ ‘ಸೂರ್ಯ’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ‘ಸುನಿಯೋ ಝರಾ’ ಎಂಬ ಈ ಹಾಡಿನ ಮೂಲಕ ಪ್ರಸಿದ್ಧ ಗಾಯಕರಾದ ಉದಿತ್ ನಾರಾಯಣ್ ಮತ್ತು ಕುಮಾರ್ ಸಾನು 21 ವರ್ಷಗಳ ನಂತರ ಒಂದಾಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಈ ಜೋಡಿಯ ಗಾಯನ ಹೊಸ ಇತಿಹಾಸ ಬರೆಯುತ್ತದೆಯೇ ಎನ್ನುವ ಕುತೂಹಲ ಹುಟ್ಟಿಸಿದೆ. ಈ ಹಾಡು ಸಂಗೀತ ಪ್ರಿಯರಲ್ಲಿ ಅಪಾರ ಕುತೂಹಲ ಮೂಡಿಸಿದೆ.

‘ಸುನಿಯೋ ಝರಾ’ ಹಾಡು ಫ್ರೆಂಡ್​​ಶಿಪ್ ಬಗ್ಗೆ ಇದೆ. ‘ಜೆಎಎಮ್8’ ಸ್ಟುಡಿಯೋದ ರಾಹಿ ಈ ಹಾಡಿಗೆ ಅದ್ಭುತವಾಗಿ ಸಂಗೀತ ಸಂಯೋಜಿಸಿದ್ದಾರೆ. ಪ್ರಿಯಾ ಸರಯ್ಯ ಈ ಗೀತೆಗೆ ಮಧುರವಾದ ಸಾಲುಗಳನ್ನು ಬರೆದಿದ್ದಾರೆ. ಯುವ ಗಾಯಕ ಅನುಪಮ್ ಆಮೋದ್ ಕೂಡ ಹಿರಿಯ ಗಾಯಕರೊಂದಿಗೆ ದನಿಯಾಗಿದ್ದಾರೆ.

ಉದಿತ್ ನಾರಾಯಣ್ ಮತ್ತು ಕುಮಾರ್ ಸಾನು 2005ರ ‘ನೋ ಎಂಟ್ರಿ’ ಚಿತ್ರದಲ್ಲಿ ಕೊನೆಯದಾಗಿ ಜತೆಯಾಗಿ ಹಾಡಿದ್ದರು. ಇದೀಗ 21 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಒಂದಾಗಿದ್ದಾರೆ. ಸನ್ನಿ ಡಿಯೋಲ್ ಸಿನಿಮಾಗೆ ಈ ಜೋಡಿ 24 ವರ್ಷಗಳ ಬಳಿಕ ದನಿಯಾಗಿದೆ. ಹಳೆಯ ದಿನಗಳನ್ನು ನೆನಪಿಸಿಕೊಂಡ ಗಾಯಕರು, ಈ ಮರುಮಿಲನ ತಮಗೆ ತುಂಬಾ ಸಂತಸ ತಂದಿದೆ ಎಂದು ಹೇಳಿದ್ದಾರೆ.

YouTube video player

ಈ ವಿಡಿಯೋ ಹಾಡಿನಲ್ಲಿ ಸನ್ನಿ ಡಿಯೋಲ್ ಮತ್ತು ರವಿ ಕಿಶನ್ ಅವರ ಗೆಳೆತನ ತೋರಿಸಲಾಗಿದೆ. ಇಬ್ಬರೂ ಒಟ್ಟಿಗೆ ಪ್ರಯಾಣ ಬೆಳೆಸುವ ದೃಶ್ಯಗಳು ಹಾಡಿನಲ್ಲಿದ್ದು, ಸ್ನೇಹದ ಸಂದೇಶ ಸಾರುತ್ತದೆ. ಎಂ. ಪದ್ಮಕುಮಾರ್ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಇದೇ ನವೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: ಸನ್ನಿ ಡಿಯೋಲ್ ‘ಸೂರ್ಯ’ ಚಿತ್ರದಲ್ಲಿ ವೈದ್ಯರ ನಿಂದನೆ; ವೈದ್ಯಕೀಯ ಸಂಘ ಅಸಮಾಧಾನ

ಚಿತ್ರದ ಹಾಡು ಹಿಟ್ ಆಗಿದ್ದರೂ, ಸಿನಿಮಾ ಒಂದಷ್ಟು ವಿವಾದಕ್ಕೆ ಈಡಾಗಿದೆ. ವೈದ್ಯಕೀಯ ಕ್ಷೇತ್ರದ ಭ್ರಷ್ಟಾಚಾರ ಮತ್ತು ವೈದ್ಯರ ಮೇಲಿನ ದೌರ್ಜನ್ಯದ ದೃಶ್ಯಗಳಿಗೆ ಭಾರತೀಯ ವೈದ್ಯಕೀಯ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಲಾಗಿದ್ದು, ಚಿತ್ರದ ಮರುಪರಿಶೀಲನೆಗೆ ಮನವಿ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us