AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್ ಪತ್ನಿ ಉಪಾಸನಾ ಸೀಮಂತಕ್ಕೆ ಧರಿಸಿದ್ದ ಬಟ್ಟೆಯ ಬೆಲೆ ಅಬ್ಬಬ್ಬಾ!

Upasana Konidela: ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೆಲಾ ಸೀಮಂತ ಕಾರ್ಯ ಇತ್ತೀಚೆಗಷ್ಟೆ ನಡೆದಿದ್ದು ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಉಪಾಸನಾ ಧರಿಸಿದ್ದ ಉಡುಗೆಯ ಬೆಲೆ ಅಷ್ಟಿಷ್ಟಲ್ಲ...

ರಾಮ್ ಚರಣ್ ಪತ್ನಿ ಉಪಾಸನಾ ಸೀಮಂತಕ್ಕೆ ಧರಿಸಿದ್ದ ಬಟ್ಟೆಯ ಬೆಲೆ ಅಬ್ಬಬ್ಬಾ!
ರಾಮ್ ಚರಣ್-ಉಪಾಸನಾ
Follow us
ಮಂಜುನಾಥ ಸಿ.
|

Updated on: Apr 25, 2023 | 5:02 PM

ಸ್ಟಾರ್ ನಟ ರಾಮ್ ಚರಣ್ (Ram Charan) ಹಾಗೂ ಪತ್ನಿ ಉಪಾಸನಾ ಕೋನಿಡೆಲಾ (Upasana Konidela) ಪೋಷಕರಾಗುತ್ತಿದ್ದಾರೆ. ಮದುವೆಯಾದ ಹತ್ತು ವರ್ಷಗಳ ಬಳಿಕ ಮಗುವನ್ನು ಸ್ವಾಗತಿಸಲು ಈ ದಂಪತಿ ಸಜ್ಜಾಗಿದ್ದಾರೆ. ರಾಮ್ ಚರಣ್ ಹಾಗೂ ಉಪಾಸನಾ ಇಬ್ಬರೂ ಕೆಲಸಗಳಿಂದ ಬಿಡುವು ಪಡೆದು ಪ್ರವಾಸ, ಗೆಳೆಯರು ಇನ್ನಿತರೆಗಳಲ್ಲಿ ತೊಡಗಿಕೊಂಡಿದ್ದು, ಇತ್ತೀಚೆಗಷ್ಟೆ ಉಪಾಸನಾ ಸೀಮಂತ (Baby Shower) ಕಾರ್ಯಕ್ರಮವನ್ನು ಬಹು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಮೆಗಾ ಕುಟುಂಬ ಸದಸ್ಯರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ದಂಪತಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪಾಸನಾ ತೊಟ್ಟಿದ್ದ ಉಡುಗೆ ಬಹುವಾಗಿ ಗಮನ ಸೆಳೆಯಿತು.

ಗುಲಾಬಿ ಬಣ್ಣದ ಉದ್ದನೆಯ ಫ್ರಾಕ್ ಮಾದರಿಯ ಉಡುಗೆಯನ್ನು ಬೇಬಿ ಶವರ್​ ಕಾರ್ಯಕ್ರಮದಲ್ಲಿ ಉಪಾಸನಾ ಧರಿಸಿದ್ದರು. ಬಟ್ಟೆಯ ಮೇಲೆ ಗುಲಾಬಿ ಬಣ್ಣದಿಂದಲೇ ಡಿಸೈನ್​ಗಳನ್ನು ಮಾಡಲಾಗಿತ್ತು. ವಿ ನೆಕ್​ ನ ಈ ಬಟ್ಟೆ ನೋಡಲು ಸರಳವಾಗಿ ಕಂಡರು ಇದರ ಬೆಲೆ ಹುಬ್ಬೇರುವಂತಿದೆ.

ಲಂಡನ್ ಮೂಲದ ನೀಡಲ್ ಆಂಡ್ ಥ್ರೆಡ್ ಸಂಸ್ಥೆಯು ಡಿಸೈನ್ ಮಾಡಿ ಮಾರಾಟ ಮಾಡಿರುವ ಈ ಉಡುಗೆಯ ಬೆಲೆ ಭಾರತದಲ್ಲಿ 90 ಸಾವಿರ ರುಪಾಯಿಗಳೂ ಹೆಚ್ಚು. ಈ ಉಡುಗೆಯ ಬಹುತೇಕ ಡಿಸೈನರ್ ಕೆಲಸ ಕೈಯಿಂದಲೇ ಮಾಡಿರುವುದು ವಿಶೇಷ. ಅಲ್ಲದೆ ಬಹಳ ಕಂಪರ್ಟ್ ಫೀಲ್ ಕೊಡುವ ಜೊತೆಗೆ ಧರಿಸಿದವರಿಗೆ ರಿಚ್​ನೆಸ್ ಫೀಲ್ ಕೊಡುವ ಉಡುಗೆ ಇದಾಗಿದೆ. ಹಾಗಾಗಿ ಈ ಉಡುಪಿನ ಬೆಲೆ ಹೆಚ್ಚು. ಈ ಮೊದಲು ಸಹ ಉಪಾಸನಾ ಕೊನಿಡೇಲ ನೀಡಲ್ ಆಂಡ್ ಥ್ರೆಡ್​ನ ಬಟ್ಟೆಗಳನ್ನು ಧರಿಸಿದ್ದರು. ಅದರಲ್ಲಿಯೂ ಗರ್ಭಿಣಿಯಾದ ಬಳಿಕ ನೀಡಲ್ ಆಂಡ್ ಥ್ರೆಡ್​ನ ಕಂಪರ್ಟ್ ಆದ ಆದರೆ ಹೆಚ್ಚು ಡಿಸೈನ್​ಗಳನ್ನು ಹೊಂದಿರುವ ಬಟ್ಟೆಗಳನ್ನು ಉಪಾಸನಾ ಧರಿಸುತ್ತಿದ್ದಾರೆ.

ಉಪಾಸನಾ ಕಮ್ಮಿನೇನಿ ಕೊನಿಡೆಲಾ ಅವರ ಬೇಬಿ ಶವರ್ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ಸಹ ಭಾಗವಹಿಸಿದ್ದರು. ಆ ಮೂಲಕ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳಿಗೆ ಪೂರ್ಣವಿರಾಮವಿಟ್ಟರು. ಅಲ್ಲು ಅರ್ಜುನ್ ಮಾತ್ರವೇ ಅಲ್ಲದೆ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಗಾಯಕಿ ಕನ್ನಿಕಾ ಕಪೂರ್, ತೆಲುಗು ಚಿತ್ರರಂಗದ ಇನ್ನೂ ಕೆಲವರು ಗಣ್ಯರು, ಮೆಗಾ ಕುಟುಂಬದ ಸದಸ್ಯರು ಹಾಗೂ ಉಪಾಸನಾ ಅವರ ಆಪ್ತ ಗೆಳತಿಯರು ಭಾಗವಹಿಸಿದ್ದರು.

ಉಪಾಸನಾ ಕಮ್ಮಿನೇನಿ ಕೋನಿಡೆಲಾ ಸಹ ರಾಮ್ ಚರಣ್ ಮಾದರಿಯಲ್ಲಿಯೇ ಬಹಳ ಬ್ಯುಸಿ ಉದ್ಯಮಿ. ರಾಷ್ಟ್ರವ್ಯಾಪಿ ಬ್ರ್ಯಾಂಚ್​ಗಳನ್ನು ಹೊಂದಿರುವ ಅಪೋಲೊ ಆಸ್ಪತ್ರೆ ಗುಚ್ಛದ ಮಾಲೀಕತ್ವ ಹೊಂದಿರುವ ಕುಟುಂಬದ ಸದಸ್ಯರಾದ ಉಪಾಸನಾ, ಅಪೋಲೊ ಮೆಡಿಕಲ್ ಸ್ಟೋರ್​ ಚೈನ್ ಅನ್ನು ನೋಡಿಕೊಳ್ಳುತ್ತಾರೆ ಜೊತೆಗೆ ಇನ್ನೂ ಕೆಲವು ಸಂಸ್ಥೆಗಳ ಮಾಲಕಿಯೂ ಆಗಿದ್ದು ತೆಲಂಗಾಣದ ಶ್ರೀಮಂತ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಇವುಗಳ ಜೊತೆಗೆ ಪತ್ನಿಯಾಗಿ ರಾಮ್ ಚರಣ್ ಅವರ ನಟನಾ ವೃತ್ತಿಗೆ ಸಹಕಾರವನ್ನೂ ಒದಗಿಸುತ್ತಾ ಬಂದಿದ್ದಾರೆ.

ಇನ್ನು ರಾಮ್ ಚರಣ್, ಆರ್​ಆರ್​ಆರ್ ಸಿನಿಮಾದ ಬಳಿಕ ದೊಡ್ಡ ಗ್ಲೋಬಲ್ ಸ್ಟಾರ್ ಆಗಿ ಬದಲಾಗಿದ್ದು, ಹಾಲಿವುಡ್​ನಿಂದಲೂ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಇದೀಗ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿರುವ ರಾಮ್ ಚರಣ್ ಆ ಬಳಿಕ ಹಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ