ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಬಾಲಿವುಡ್ನಲ್ಲಿ ಬಹಳ ಖ್ಯಾತಿ ಹೊಂದಿದ್ದಾರೆ. ಈಗ ಅವರು ಟಾಲಿವುಡ್ ಅಂಗಳಕ್ಕೂ ಕಾಲಿಡುತ್ತಿದ್ದಾರೆ. ಜೂನಿಯರ್ ಎನ್ಟಿಆರ್ (Jr NTR) ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಊರ್ವಶಿ ರೌಟೇಲಾ ಅವರು ಹಂಚಿಕೊಂಡಿದ್ದಾರೆ. ಅದನ್ನು ಕಂಡು ನೆಟ್ಟಿಗರಿಗೆ ಅಚ್ಚರಿ ಆಗಿದೆ. ಇದು ಜಿಮ್ನಲ್ಲಿ ಕ್ಲಿಕ್ಕಿಸಿದ ಫೋಟೋ. ಹಾಗಾದ್ರೆ ಜೂನಿಯರ್ ಎನ್ಟಿಆರ್ ಹಾಗೂ ಊರ್ವಶಿ ರೌಟೇಲಾ ಅವರು ಜೊತೆಯಾಗಿ ಜಿಮ್ನಲ್ಲಿ ವಕೌಟ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಕೂಡ ಅಭಿಮಾನಿಗಳ ಮನದಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ.
‘ಜೂನಿಯರ್ ಎನ್ಟಿಆರ್ ಅವರು ನಮ್ಮೆಲ್ಲರ ಪ್ರೀತಿಯ ನಿಜವಾದ ಗ್ಲೋಬಲ್ ಸೂಪರ್ ಸ್ಟಾರ್. ಅವರು ತುಂಬ ಶಿಸ್ತಿನ, ಪ್ರಾಮಾಣಿಕ ಹಾಗೂ ನೇರ ನಡೆ-ನುಡಿಯ ವ್ಯಕ್ತಿ. ಬಹಳ ವಿನಯವಂತ ಕೂಡ ಹೌದು. ನಮಗೆಲ್ಲ ಸ್ಫೂರ್ತಿ ಆಗಿದ್ದಕ್ಕೆ ಧನ್ಯವಾಗಳು. ಸಿಂಹದಂತಹ ನಿಮ್ಮ ವ್ಯಕ್ತಿತ್ವ ಮೆಚ್ಚುವಂಥದ್ದು. ಮುಂದಿನ ದಿನಗಳಲ್ಲಿ ನಿಮ್ಮ ಜೊತೆ ಕೆಲಸ ಮಾಡಲು ಕಾದಿದ್ದೇನೆ’ ಎಂದು ಊರ್ವಶಿ ರೌಟೇಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.
ಬಾಲಿವುಡ್ನ ‘ವಾರ್ 2’ ಸಿನಿಮಾದ ಶೂಟಿಂಗ್ ಸಲುವಾಗಿ ಜೂನಿಯರ್ ಎನ್ಟಿಆರ್ ಅವರು ಮುಂಬೈಗೆ ತೆರಳಿದ್ದಾರೆ. ಈ ಸಿನಿಮಾದಲ್ಲಿ ಅವರು ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಬಹಳ ಅದ್ದೂರಿಯಾಗಿ ಈ ಚಿತ್ರ ಮೂಡಿಬರುತ್ತಿದೆ. ಮುಂಬೈನಲ್ಲಿ ಇರುವ ಜೂನಿಯರ್ ಎನ್ಟಿಆರ್ ಅವರು ವರ್ಕೌಟ್ ತಪ್ಪಿಸಿಲ್ಲ. ಈ ಸಂದರ್ಭದಲ್ಲೇ ಅವರನ್ನು ಊರ್ವಶಿ ರೌಟೇಲಾ ಭೇಟಿ ಆಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ವಾರ್ 2’ ಸಿನಿಮಾಗಾಗಿ ಮುಂಬೈಗೆ ತೆರಳಿದ ಜೂನಿಯರ್ ಎನ್ಟಿಆರ್; 10 ದಿನ ಶೂಟಿಂಗ್
ಇಷ್ಟು ದಿನ ತೆಲುಗು ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದ ಊರ್ವಶಿ ರೌಟೇಲಾ ಅವರು ಈಗ ನಂದಮೂರಿ ಬಾಲಕೃಷ್ಣ ನಟನೆಯ ಹೊಸ ಸಿನಿಮಾದಲ್ಲಿ ಒಂದು ಪಾತ್ರ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಅದು ಬಾಲಯ್ಯ ನಟನೆಯ 109ನೇ ಸಿನಿಮಾ. ಈ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಒಂದಿಲ್ಲೊಂದು ಕಾರಣಕ್ಕೆ ಊರ್ವಶಿ ರೌಟೇಲಾ ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಅನೇಕ ಸ್ಟಾರ್ ಕಲಾವಿದರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಗಮನ ಸೆಳೆಯುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.