AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೆ ಲಾವಣ್ಯ ತ್ರಿಪಾಠಿ ಧರಿಸಿದ ಸೀರೆಯ ಬೆಲೆ 10 ಲಕ್ಷ ರೂಪಾಯಿ; ಹಾರಕ್ಕೆ 12 ಲಕ್ಷ ರೂ!

Lavanya Tripathi Saree: ಟಾಲಿವುಡ್​ ಸೆಲೆಬ್ರಿಟಿಗಳಾದ ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ಅವರ ಮದುವೆ ಸಮಾರಂಭ ಮುಗಿದಿದ್ದರೂ ಕೂಡ ಮದುವೆಗೆ ಸಂಬಂಧಿಸಿದ ಇಂಟರೆಸ್ಟಿಂಗ್​ ಸುದ್ದಿಗಳ ಹರಿವು ಇನ್ನೂ ನಿಂತಿಲ್ಲ. ಮದುವೆ ಮತ್ತು ಆರತಕ್ಷತೆಯಲ್ಲಿ ಈ ಜೋಡಿ ಧರಿಸಿದ್ದ ಬಟ್ಟೆಯ ಬೆಲೆ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಮದುವೆಗೆ ಲಾವಣ್ಯ ತ್ರಿಪಾಠಿ ಧರಿಸಿದ ಸೀರೆಯ ಬೆಲೆ 10 ಲಕ್ಷ ರೂಪಾಯಿ; ಹಾರಕ್ಕೆ 12 ಲಕ್ಷ ರೂ!
ವರುಣ್​ ತೇಜ್​, ಲಾವಣ್ಯ ತ್ರಿಪಾಠಿ
ಮದನ್​ ಕುಮಾರ್​
|

Updated on: Nov 07, 2023 | 5:25 PM

Share

ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ (Lavanya Tripathi) ಈ ವರ್ಷ ಜೂನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದರು. ಕೆಲವೇ ದಿನಗಳ ಹಿಂದೆ ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಕ್ಟೋಬರ್ 30ರಂದು ಕಾಕ್ಟೈಲ್ ಪಾರ್ಟಿಯೊಂದಿಗೆ ವಿವಾಹದ ಆಚರಣೆಗಳು ಪ್ರಾರಂಭವಾದವು. ನವೆಂಬರ್ 1ರಂದು ಇಟಲಿಯಲ್ಲಿ ಅವರು ಸಪ್ತಪದಿ ತುಳಿದರು. ಅವರ ಮದುವೆಗೆ ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಮೂರು ದಿನಗಳ ಕಾಲ ಅದ್ದೂರಿಯಾಗಿ ಮದುವೆ ನಡೆಯಿತು. ವಿವಾದ ವೇಳೆ ವರುಣ್ (Varun Tej) ಕ್ರೀಮ್ ಕಲರ್ ಶರ್ವಾನಿ ಧರಿಸಿದ್ದರೆ, ಲಾವಣ್ಯ ಕೆಂಪು ಬಣ್ಣದ ಕಾಂಜಿವರಂ ಸೀರೆಯಲ್ಲಿ ಮಿಂಚಿದ್ದರು. ಈ ಸೀರೆಯ (Lavanya Tripathi Saree) ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ!

ಈ ಸೀರೆಯಲ್ಲಿ ಒಂದು ವಿಶೇಷತೆ ಇದೆ. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಲಾವಣ್ಯ ಧರಿಸಿದ್ದ ಸೀರೆಯ ಮೇಲೆ ವರುಣ್-ಲಾವಣ್ಯ ಹೆಸರಿನ ಜೊತೆಗೆ ಅನಂತದ ಚಿಹ್ನೆಯನ್ನು ಮುದ್ರಿಸಲಾಗಿತ್ತು. ತಮ್ಮ ಪ್ರೀತಿ ನಿರಂತರ ಎಂಬುದರ ಸಂಕೇತ ಅದು. ಜನಪ್ರಿಯ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಈ ಸೀರೆ ಸಖತ್​ ದುಬಾರಿ. ಇನ್ನು, ಆರತಕ್ಷತೆಗೆ ಲಾವಣ್ಯ ಅವರು ಧರಿಸಿದ ಸೀರೆಯ ಬೆಲೆ 2.75 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ಹೈದರಾಬಾದ್​​ನ ಮಾದಾಪುರ ಎನ್. ಕನ್ವೆನ್ಷನ್ ಹಾಲ್​ನಲ್ಲಿ ನವೆಂಬರ್​ 5ರಂದು ಟಾಲಿವುಡ್ ಸೆಲೆಬ್ರಿಟಿಗಳಿಗಾಗಿ ಆರತಕ್ಷತೆ ಸಮಾರಂಭ ಏರ್ಪಡಿಸಲಾಯಿತು. ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವರುಣ್ ಕಪ್ಪು ಕುರ್ತಾ ಮತ್ತು ಚಿನ್ನದ ಬಣ್ಣದ ವಿನ್ಯಾಸದ ಬ್ಲೇಜರ್ ಧರಿಸಿದ್ದರು. ಲಾವಣ್ಯ ಗೋಲ್ಡನ್ ಸೀರೆ ಮತ್ತು ಸ್ಲೀವ್ ಲೆಸ್ ಬ್ಲೌಸ್​ನಲ್ಲಿ ಮಿಂಚಿದ್ದರು. ಮನೀಷ್ ಮಲ್ಹೋತ್ರಾ ಅವರು ಈ ಸೀರೆಯನ್ನು ದಕ್ಷಿಣ ಭಾರತದ ಶೈಲಿಗೆ ಅನುಗುಣವಾಗಿ ವಿನ್ಯಾಸಗೊಳಿಸಿದ್ದಾರೆ.

ಇದನ್ನೂ ಓದಿ: Varun Tej Lavanya Tripathi Wedding: ವರುಣ್ ತೇಜ್-ಲಾವಣ್ಯ ತ್ರಿಪಾಠಿ ಮದುವೆ; ಅದ್ದೂರಿ ಮದುವೆಯಲ್ಲಿ ಸೆಲೆಬ್ರಿಟಿಗಳ ದಂಡು

ಕಳೆದ ವರ್ಷ ಡಿಸೈನರ್ ಮನೀಶ್ ಮಲ್ಹೋತ್ರಾ ನೀಡಿದ್ದ ದೀಪಾವಳಿ ಪಾರ್ಟಿಯಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್​ ಅವರು ಇದೇ ವಿನ್ಯಾಸದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಲಾವಣ್ಯ ಕೂಡ ಅದೇ ವಿನ್ಯಾಸವನ್ನೇ ತಮ್ಮ ಆರತಕ್ಷತೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ. ಮದುವೆ ಸಂದರ್ಭದಲ್ಲಿ ಲಾವಣ್ಯ ಧರಿಸಿದ್ದ ಹಾರದ ಬೆಲೆ ಬರೋಬ್ಬರಿ 12 ಲಕ್ಷ ಎಂದು ವರದಿಯಾಗಿದೆ. ಲಾವಣ್ಯ ಅವರು ಆಕರ್ಷಕ ವಿನ್ಯಾಸದ ನೆಕ್ಲೇಸ್ ಧರಿಸಿ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ