ನನ್ನ ಶಾಪದಿಂದಲೇ ತೆಲುಗು ಚಿತ್ರರಂಗಕ್ಕೆ ಈ ಗತಿ ಬಂತು: ವೇಣುಸ್ವಾಮಿ

|

Updated on: Dec 22, 2024 | 1:29 PM

Venu Swamy: ವೇಣು ಸ್ವಾಮಿ ತೆಲುಗು ಚಿತ್ರರಂಗ ಹಾಗೂ ರಾಜಕೀಯ ರಂಗದ ಸೆಲೆಬ್ರಿಟಿ ಜ್ಯೋತಿಷಿ. ಆದರೆ ಇತ್ತೀಚೆಗೆ ಅವರ ವಿರುದ್ಧ ಕೆಲವು ದೂರುಗಳು ದಾಖಲಾಗಿದ್ದವು. ಬಂಧನಕ್ಕೆ ಯತ್ನಗಳು ಸಹ ನಡೆದಿದ್ದವು. ಇದೀಗ ವೇಣು ಸ್ವಾಮಿ ಸಂದರ್ಶನವೊಂದರಲ್ಲಿ ಮಾತಾಡಿ ನನ್ನಿಂದಲೇ ತೆಲುಗು ಚಿತ್ರರಂಗಕ್ಕೆ ಈ ಗತಿ ಬಂದಿದೆ ಎಂದಿದ್ದಾರೆ.

ನನ್ನ ಶಾಪದಿಂದಲೇ ತೆಲುಗು ಚಿತ್ರರಂಗಕ್ಕೆ ಈ ಗತಿ ಬಂತು: ವೇಣುಸ್ವಾಮಿ
Venu Swamy
Follow us on

ತೆಲುಗು ಚಿತ್ರರಂಗ ಕಳೆದ ಕೆಲ ತಿಂಗಳಿಂದ ಒಲ್ಲದ ಕಾರಣಗಳಿಗೆ ಸುದ್ದಿಯಾಗುತ್ತಿದೆ. ‘ಪುಷ್ಪ 2’ ಸಿನಿಮಾ ಭಾರಿ ಯಶಸ್ಸು ಗಳಿಸಿ ದಾಖಲೆ ಬರೆದಿದೆಯಾದರೂ ಅದರ ಬೆನ್ನಲ್ಲೆ ಅಲ್ಲು ಅರ್ಜುನ್ ಜೈಲಿಗೆ ಹೋಗಿದ್ದು ‘ಪುಷ್ಪ 2’ ಸಿನಿಮಾದ ಯಶಸ್ಸನ್ನು ಕಣ್ಮರೆ ಮಾಡಿದೆ. ಮಂಚು ಮೋಹನ್ ಬಾಬು ಕುಟುಂಬದಲ್ಲಿ ದೊಡ್ಡ ಮಟ್ಟದ ಗಲಾಟೆಗಳು ನಡೆದಿವೆ. ಅದಕ್ಕೆ ಮುನ್ನ ನಾಗಾರ್ಜುನ ಅವರ ಆಸ್ತಿ ನಷ್ಟವಾಯ್ತು. ನಟ ಪ್ರಭಾಸ್ ಗೆ ಗಾಯವಾಯ್ತು, ಹೀಗೆ ತೆಲುಗು ಚಿತ್ರರಂಗದ ಗಣ್ಯರು ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ನನ್ನಿಂದಲೇ ತೆಲುಗು ಚಿತ್ರರಂಗಕ್ಕೆ ಹಿಗೆಲ್ಲ ಆಗುತ್ತಿದೆ ಎಂದಿದ್ದಾರೆ.

ವೇಣುಸ್ವಾಮಿ ತೆಲುಗು ಚಿತ್ರರಂಗ ಹಾಗೂ ಆಂಧ್ರ-ತೆಲಂಗಾಣದ ರಾಜಕೀಯ ರಂಗದ ಸೆಲೆಬ್ರಿಟಿ ಜ್ಯೋತಿಷಿ ಆಗಿದ್ದರು. ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದು ಜ್ಯೋತಿಷ್ಯ ಹೇಳಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಪ್ರಭಾಸ್, ಅಲ್ಲು ಅರ್ಜುನ್ ಸೇರಿದಂತೆ ಹಲವರ ಜಾತಕಗಳನ್ನು ಹೇಳಿದ್ದರು. ಆದರೆ ಇತ್ತೀಚೆಗೆ ನಾಗ ಚೈತನ್ಯ ಹಾಗೂ ಶೋಭಿತಾ ಮದುವೆ ಬಗ್ಗೆ ಭವಿಷ್ಯ ಹೇಳಿದಾಗ ವೇಣು ಸ್ವಾಮಿ ವಿರುದ್ಧ ದೂರುಗಳು ದಾಖಲಾಗಿದ್ದವು. ಅವರ ಬಂಧನಕ್ಕೆ ಯತ್ನಗಳು ಸಹ ನಡೆದಿದ್ದವು. ಕೆಲವು ಪತ್ರಕರ್ತರು ಸಹ ವೇಣು ಸ್ವಾಮಿ ವಿರುದ್ಧ ದೂರು ಸಲ್ಲಿಸಿದ್ದರು. ವೇಣು ಸ್ವಾಮಿ ಸಹ ಈ ಬಗ್ಗೆ ಆತಂಕಗೊಂಡು ವಿಡಿಯೋ ಮಾಡಿ, ತಾವು ಇನ್ನ ಮೇಲೆ ಭವಿಷ್ಯ ಹೇಳುವುದಿಲ್ಲ ಎಂದಿದ್ದರು.

ಇದನ್ನೂ ಓದಿ:‘ಯಾರನ್ನೂ ದೂರಲ್ಲ, ಇಲ್ಲಿ ನನ್ನ ಚಾರಿತ್ರ್ಯ ಹರಣ ಆಗುತ್ತಿದೆ’; ಅಲ್ಲು ಅರ್ಜುನ್ ಬೇಸರ

ಇದೀಗ ಅಲ್ಲು ಅರ್ಜುನ್ ವಿವಾದ ಆದ ಬಳಿಕ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ‘ಚಿತ್ರರಂಗದವರು ನನಗೆ ಕೊಟ್ಟಿರುವ ಕಾಟದಿಂದಲೇ ಚಿತ್ರರಂಗಕ್ಕೆ ಈ ಗತಿ ಬಂದಿದೆ. ಹೀಗೆ ಒಂದರ ಹಿಂದೆ ಸಮಸ್ಯೆ ಬಂದೊದಗಿದೆ’ ಎಂದಿದ್ದಾರೆ. ಅದೇ ಸಂದರ್ಶನದಲ್ಲಿ ಅಲ್ಲು ಅರ್ಜುನ್ ಬಗ್ಗೆ ಮಾತನಾಡಿ, ‘ಅಲ್ಲು ಅರ್ಜುನ್ ಅವರಿಗೆ ರಾಜಯೋಗ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದಲೂ ರಾಜಯೋಗ ನಡೆಯುತ್ತಿದೆ. ಅವರ ಮುಂದಿನ ವರ್ಷಗಳು ಸಹ ಬಹಳ ಚೆನ್ನಾಗಿವೆ. ಅವರ ಭವಿಷ್ಯದಲ್ಲಿ ರಾಜ್ಯದ ಸಿಎಂ ಆಗುವ ಯೋಗವೂ ಇದೆ’ ಎಂದಿದ್ದಾರೆ ವೇಣುಸ್ವಾಮಿ.

ಅಲ್ಲು ಅರ್ಜುನ್ ಇತ್ತೀಚೆಗಷ್ಟೆ ಬಂಧನಕ್ಕೆ ಒಳಗಾಗಿದ್ದರು. ‘ಪುಷ್ಪ 2’ ಸಿನಿಮಾ ಬೆನಿಫಿಟ್ ಶೋ ಸಂದರ್ಭದಲ್ಲಿ ಅಲ್ಲು ಅರ್ಜುನ್ ಹೈದರಾಬಾದ್​ನ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಉಂಟಾದ ನೂಕು-ನುಗ್ಗಲಿನಲ್ಲಿ ಒಬ್ಬ ಮಹಿಳೆ ನಿಧನ ಹೊಂದಿದ್ದರು. ಹಾಗೂ ಅವರ ಪುತ್ರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೇ ಕಾರಣಕ್ಕೆ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ಈಗ ಸ್ವತಃ ತೆಲಂಗಾಣ ಸಿಎಂ, ಅಲ್ಲು ಅರ್ಜುನ್ ವಿರುದ್ಧ ಕಿಡಿ ಕಾರಿದ್ದಾರೆ. ತೆಲುಗು ಸಿನಿಮಾಗಳಿಗೆ ತೆಲಂಗಾಣದಲ್ಲಿ ನೀಡಲಾಗುತ್ತಿದ್ದ ಸವಲತ್ತುಗಳನ್ನು ಸಹ ಹಿಂಪಡೆದುಕೊಳ್ಳಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ