ಮೂವರು ಹೆಂಡಿರು, ಏಳು ಮಂದಿ ಒಡಹುಟ್ಟಿದವರು- ಮಕ್ಕಳಿಲ್ಲ! ಸ್ಫುರದ್ರೂಪಿ ನಟ ಶರತ್​ ಬಾಬು ನೂರಾರು ಕೋಟಿ ಆಸ್ತಿ ಯಾರ ಪಾಲಿಗೆ?

Sarath Babu wealth: ಸ್ವಂತ ಊರು ಚೆನ್ನೈ, ಪಕ್ಕದ ಊರು ಬೆಂಗಳೂರು ಸೇರಿದಂತೆ ಬಹುಕಾಲ ತನ್ನ ಕಾರ್ಯಕ್ಷೇತ್ರವಾಗಿದ್ದ ಹೈದರಾಬಾದು ಸೇರಿದಂತೆ ಇತರೆ ನಗರಗಳಲ್ಲಿ ಶರತ್ ಬಾಬು ಅವರ ಸಂಪತ್ತು ವಿಪರೀತವಾಗಿತ್ತು. ಅದೀಗ ಟಾಕ್ ಆಫ್ ಟೌನ್ ಆಗಿದೆ. ಆಸ್ತಿ ವಿವರ ಇಲ್ಲಿದೆ.

ಮೂವರು ಹೆಂಡಿರು, ಏಳು ಮಂದಿ ಒಡಹುಟ್ಟಿದವರು- ಮಕ್ಕಳಿಲ್ಲ! ಸ್ಫುರದ್ರೂಪಿ ನಟ ಶರತ್​ ಬಾಬು ನೂರಾರು ಕೋಟಿ ಆಸ್ತಿ ಯಾರ ಪಾಲಿಗೆ?
ಸ್ಫುರದ್ರೂಪಿ ನಟ ಶರತ್​ ಬಾಬು ನೂರಾರು ಕೋಟಿ ಆಸ್ತಿ ಯಾರ ಪಾಲಿಗೆ?
Follow us
ಸಾಧು ಶ್ರೀನಾಥ್​
|

Updated on: May 27, 2023 | 12:31 PM

ಬೆಂಗಳೂರು: ದಕ್ಷಿಣ ಭಾರತದ ಹಿರಿಯ ನಟ ಶರತ್ ಬಾಬು (Veteran actor Sarath Babu) ಅವರು ಸೋಮವಾರ (ಮೇ 22) ತಮ್ಮ 71ನೇ ವರ್ಷ ವಯಸ್ಸಿನಲ್ಲಿ ನಿಧನರಾದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಅವರ ಸಾವು ಅವರ ಆತ್ಮೀಯರ ಹೃದಯದಲ್ಲಿ ಶೂನ್ಯವನ್ನುಂಟು ಮಾಡಿದೆ. ಶರತ್ ಬಾಬು ನಟನೆ ಮತ್ತು ವ್ಯಕ್ತಿತ್ವ ಅಚ್ಚಳಿಯದೆ ಅವರ ಅಭಿಮಾನಿಗವಳ ಹೃದಯದಲ್ಲಿ ಶಾಶ್ವತವಾಗಿರುತ್ತದೆ -ಹಾಗಿದ್ದರು ಶರತ್. ಅವರ ಬಹುಮುಖ ಪ್ರತಿಭೆಗಾಗಿ ಅವರನ್ನು “ದಕ್ಷಿಣದ ಎಡಿಸನ್” ಎಂದು ಉಲ್ಲೇಖಿಸಲಾಗುತ್ತದೆ. ಈಗ, ಅವರ ಜೀವನದ ಮತ್ತೊಂದು ಮಗ್ಗುಲನ್ನು ಸ್ಪರ್ಶಿಸುವುದಾದರೆ ಅವರು ವಿಶಾಲವಾದ, ಭಾರೀ ಪ್ರಮಾಣದ ಆಸ್ತಿಯನ್ನು ಹೊಂದಿದ್ದರು. ಅವರೇ ಹೇಳಿದಂತೆ ಅವರು ಹುಟ್ಟಾ ಶ್ರೀಮಂತರು. ಅವರ ಅಪ್ಪ VSR Murthy ಅವರು ಆ ಕಾಲಕ್ಕೆ ಚೆನ್ನೈನಲ್ಲಿ ಪ್ರಸಿದ್ಧ ಹೋಟೆಲ್​ ಉದ್ಯಮಿ. ಸ್ಫುರದ್ರೂಪಿ ನಟ ಶರತ್ ಮೂಲ ಹೆಸರು ಸತ್ಯನಾರಾಯಣ ದೀಕ್ಷಿತರು​​ (Satyanarayana Dixit).

ಅವರ ಚೆಲುವು, ಆಕರ್ಷಕ ವ್ಯಕ್ತಿತ್ವ, ಪಾತ್ರಗಳಿಗೆ ಜೀವ ತುಂಬುತ್ತಿದ್ದ ಪರಿ ಕಂಡು ಕರುಬಿದವರು ಹಲವು ಮಂದಿ. ಕೆ ಬಾಲಚಂದರ್​ ಶಿಷ್ಯರಾಗಿ ಗುರುತಿಸಿಕೊಂಡ ಮೇಲಂತೂ ಶರತ್​ ಹಿಂದಿರುಗಿ ನೋಡಲಿಲ್ಲ. ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಾ ಮೂರು ಮದುವೆಗಳನ್ನು ಮಾಡಿಕೊಂಡರು. ಆದರೆ ಮಕ್ಕಳಾಗಲಿಲ್ಲ ಎಂಬುದು ಅವರ ವೈಯಕ್ತಿಕ ಜೀವನದ ಕೊರಗಾಗಿತ್ತು. ಶರತ್ ಬಾಬು ಅವರಿಗೆ ಏಳು ಮಂದಿ ಒಡಹುಟ್ಟಿದವರು. ಹಾಗಾಗಿ ಒಡಹುಟ್ಟಿದವರ ಮಕ್ಕಳೊಂದಿಗೆ ನಿಕಟ ಸಂಬಂಧ, ಆತ್ಮೀಯತೆ ಹೊಂದಿದ್ದರು. ಶರತ್​ ಜೀವನ ಹೀಗಿರುವಾಗ ಆ ಮೇರು ನಟ ಬಿಟ್ಟು ಹೋದ ಆಸ್ತಿ, ಸಂಪತ್ತನ್ನು ಎಷ್ಟಿರಬಹುದು ಎಂದು ಊಹಿಸಬಲ್ಲಿರಾ?

ಸಿನಿ ಪ್ರಪಂಚದ ಪ್ರಕಾರ ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನಾದ್ಯಂತ ಅಪಾರ ಆಸ್ತಿಗಳನ್ನು ಹೊಂದಿದ್ದರು. ಶರತ್ ಬಾಬು ಅವರ ಅಪಾರ ಸಂಪತ್ತನ್ನು ಇದೀಗ ವ್ಯವಸ್ಥಿತವಾಗಿ ಹದಿಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಭಾಗಗಳನ್ನು ತನ್ನ ಪ್ರೀತಿಯ ಸಹೋದರ ಸಹೋದರಿಯರ ಮಕ್ಕಳಿಗಾಗಿ ಹಂಚಬಹುದಾಗಿದೆ.

ಶರತ್ ಬಾಬು ಅವರ ಸಹೋದರ ಹೇಳುವಂತೆ ಶರತ್ ಬಾಬು ತಮ್ಮ ಒಡಹುಟ್ಟಿದವರಲ್ಲಿ ನಾಲ್ಕನೆಯವರು. ಮತ್ತು ಅವರು ತಮ್ಮ ಒಡಹುಟ್ಟಿದವರನ್ನು ತಂದೆಯಂತೆ ಸಾಕಿಸಲುಹಿದರು. ಕೊನೆಗಾಲದವರೆಗೂ ಅವರೆಲ್ಲಾ ಒಗ್ಗಟ್ಟಿನಿಂದ ಮತ್ತು ಒಟ್ಟಿಗೆ ಇದ್ದವರು. ಈ ಮಧ್ಯೆ ನಟ ಶರತ್​​​ ತಮ್ಮ ಆಸ್ತಿ ಹಂಚಿಕೆ ಬಗ್ಗೆ ಉಯಿಲು ಬರೆದಿಟ್ಟು ಹೋದರಾ? ಅದರ ಬಗ್ಗೆ ಖಚಿತತೆ ಇಲ್ಲ. ಆದಾಗ್ಯೂ ಆಸ್ತಿಯನ್ನು ಅವರ ಒಡಹುಟ್ಟಿದವರಾಗಿ ತಾವು ಹಂಚಿಕೊಳ್ಳುತ್ತೇವೆ ಎನ್ನುತ್ತಾರೆ ಅವರ ಹಿರಿಯಣ್ಣ. ಇದು ನಮ್ಮ ಕುಟುಂಬದ ಖಾಸಗಿ ವಿಷಯವಾಗಿದೆ ಮತ್ತು ಇತರರು ತಮ್ಮನ್ನು ತಾವು ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.

ಶರತ್ ಬಾಬು ದಕ್ಷಿಣ ಭಾರತದ ಸಿನಿರಂಗದಲ್ಲಿ ಪ್ರಧಾನ ವ್ಯಕ್ತಿಯಾಗಿದ್ದರು. ಮಾರ್ಚ್ 31, 1951 ರಂದು ಭಾರತದ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡಸ ಸ್ಯಾಂಡಲ್​​ವುಡ್​​​ಗೂ ಶರತ್ ಬಾಬು ಕೊಡುಗೆ ನೀಡಿದ್ದಾರೆ.

ಶರತ್ ಬಾಬು (1951-2023) ಐದು ದಶಕಗಳ ಕಾಲದ ವೃತ್ತಿಜೀವನದಲ್ಲಿ 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ತಮಿಳು ಚಲನಚಿತ್ರಗಳಾದ ಮುಳ್ಳುಂ ಮಲರುಮ್ (1978), ನೆಂಜತೈ ಕಿಲ್ಲಾತೆ (1980), ಮತ್ತು ಅಣ್ಣಾಮಲೈ (1992) ಗಳಲ್ಲಿನ ಪಾತ್ರಗಳಿಗೆ ಹೆಸರು ವಾಸಿಯಾಗಿದ್ದರು. ಅವರು ಒಂಬತ್ತು ನಂದಿ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ತನ್ನ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ಶರತ್ ಬಿ.ಎಸ್ಸಿ ಪದವಿ ಪಡೆದರು. ಬಾಲ್ಯದಲ್ಲಿ, ಶರತ್ ಬಾಬು ಪೊಲೀಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದಾಗ್ಯೂ, ಅವರು ತಮ್ಮ ಕಾಲೇಜು ದಿನಗಳಲ್ಲಿ ಬೇರೆಯದ್ದೆ ಸೆಳೆತಕ್ಕೆ ಮಾರುಹೋಗಿ, ಬೇರೆಯದ್ದೇ ಕನಸು ಕಾಣತೊಡಗಿದರು. ಜೊತೆಗೆ ಪೊಲೀಸ್ ಸೇವೆಗೆ ಸೇರಲು ಅವರಿಗೆ ದೃಷ್ಟಿದೋಷ ಕಾಡಿತ್ತು. ಇನ್ನು ಶರತ್ ತನ್ನ ಹೋಟೆಲ್ ವ್ಯವಹಾರ ನೋಡಿಕೊಳ್ಳಲಿ ಸಾಕು ಎಮದು ಅವರ ತಂದೆ ಬಯಸಿದ್ದರು. ಆದರೆ ಶರತ್ ಕುಟುಂಬದ ವ್ಯವಹಾರಕ್ಕೆ ಬರಲು ಇಷ್ಟವಿರಲಿಲ್ಲ.

ಆತ ಕಾಲೇಜಿನಲ್ಲಿ ಓದುತ್ತಿದ್ದಾಗ, ಹದಿಹರೆಯದ ಉತ್ತುಂಗದಲ್ಲಿದ್ದಾಗ ಆತನ ಸ್ನೇಹಿತರು ಮತ್ತು ಉಪನ್ಯಾಸಕರು ಶರತನ ಅಂದವನ್ನು ಆಗಾಗ್ಗೆ ಮನಸಾರೆ ಹೊಗಳುತ್ತಾ, ಅಟ್ಟಕ್ಕೇರಿಸುತ್ತಿದ್ದರು. ಸಿನಿಮಾಗಳಲ್ಲಿ ನಿನ್ನ ಅದೃಷ್ಟ ಪರೀಕ್ಷಿಸು ಎಂದು ಉಚಿತ ಸಲಹೆ ನೀಡುತ್ತಿದ್ದರು. ಅವರ ಸಲಹೆಯಂತೆ ಶರತ್ ತನ್ನ ಕಾಲೇಜಿನ ನಾಟಕ ತಂಡವನ್ನು ಸೇರಿಕೊಂಡು ರಂಗಭೂಮಿ ಅಭ್ಯಾಸವನ್ನು ಪ್ರಾರಂಭಿಸಿದರು.

ಅವನ ನಟನಾ ವೃತ್ತಿ ಆಯ್ಕೆಗೆ ಅವನ ತಾಯಿ ಸಂಪೂರ್ಣ ಬೆಂಬಲ ನೀಡಿದ್ದರು. ಅವನ ತಂದೆ ಶರತ್ ನಟನಾಗುವುದರ ಬಗ್ಗೆ ಅತೃಪ್ತಿ ಹೊಂದಿದ್ದರು. ಒಮ್ಮೆ, ರಾಮ ವಿಜೇತ ಎಂಬ ನಿರ್ಮಾಣ ಕಂಪನಿಯು ತೆಲುಗು ಚಿತ್ರಕ್ಕಾಗಿ ತಾಜಾ ಮುಖವನ್ನು ಹುಡುಕುತ್ತಿತ್ತು. ಪತ್ರಿಕಾ ಜಾಹೀರಾತು ನೀಡಿತ್ತು. ಜಾಹೀರಾತಿಗೆ ಪ್ರತಿಕ್ರಿಯಿಸಿದ ಶರತ್​​, ಆಯ್ಕೆಯೂ ಆದರು. ಶರತ್ ಬಾಬು ಹೆಂಡತಿ ಮತ್ತು ಮಕ್ಕಳು:

ಶರತ್ ಬಾಬು ಅವರು ತೆಲುಗು ನಟಿ ರಮಾ ಪ್ರಭಾ ಅವರನ್ನು ಮೊದಲ ಬಾರಿಗೆ ಶೂಟಿಂಗ್​​ ಸೆಟ್​​ನಲ್ಲಿ ಭೇಟಿಯಾದರು. ಮುಂದೆ ಪರಸ್ಪರ ಪ್ರೀತಿಸಿ, ಡೇಟಿಂಗ್​ನಲ್ಲಿ ತೊಡಗಿದರು. 1974 ರಲ್ಲಿ, ಅವರು ರಮಾ ಪ್ರಭಾ ಅವರೊಂದಿಗೆ ಲಿವ್-ಇನ್ ಸಂಬಂಧ ಹೊಂದಿದರು. ಶರತ್ ಬಾಬು 1974 ರಲ್ಲಿ ರಮಾ ಪ್ರಭಾ ಅವರನ್ನು ಅವರ ಕುಟುಂಬದ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದರು. ಶರತ್ ಬಾಬು ರಮಾ ಪ್ರಭಾಗಿಂತ ಹಲವಾರು ವರ್ಷ ಚಿಕ್ಕವ. ಸುಮಾರು 14 ವರ್ಷಗಳ ವೈವಾಹಿಕ ಆನಂದದ ನಂತರ, ದಂಪತಿ 1988 ರಲ್ಲಿ ವಿಚ್ಛೇದನ ಪಡೆದರು.

ಮುಂದೆ ಹಲವು ವರ್ಷಗಳ ನಂತರ ತಮಿಳು ನಟ ಎಂಎನ್ ನಂಬಿಯಾರ್ ಅವರ ಮಗಳನ್ನು (ಸ್ನೇಹಲತಾ ಅವರ ಹೆಸರು) ಶರತ್ ವಿವಾಹವಾದರು​​. ಅದು ನನ್ನ ಮೊದಲ ಮದುವೆ. ಮಾಧ್ಯಮಗಳು ಇತರ ಮಹಿಳೆಯನ್ನು (ರಮಾ ಪ್ರಭಾ) ನನ್ನ ಮಾಜಿ ಪತ್ನಿ ಎಂದು ಕರೆಯುತ್ತವೆ. ನಾವು ಎಂದಿಗೂ ಮದುವೆಯಾಗಿಲ್ಲ. ನಮ್ಮ ಸಂಬಂಧಕ್ಕೆ ಯಾವುದೇ ಹೆಸರಿಲ್ಲ ಎಂದು ಶರತ್​​ ಹೇಳಿದ್ದರು.

1990 ರಲ್ಲಿ ಶರತ್ ಬಾಬು ಅವರು ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಹಿರಿಯ ನಟ ನಂಬಿಯಾರ್ ಅವರ ಪುತ್ರಿ ಸ್ನೇಹಲತಾ (ಸ್ನೇಹಾ) ನಂಬಿಯಾರ್ ಅವರನ್ನು ವಿವಾಹವಾದರು. 2008 ರಲ್ಲಿ ದಂಪತಿ ವಿಚ್ಛೇದನ ಪಡೆದರು. ಅದಾದ ಮೆಲೂ ಶರತ್​​ ತಮ್ಮ 70 ನೇ ವಯಸ್ಸಿನಲ್ಲಿ ಮಹಿಳೆಯೊಬ್ಬರನ್ನು ಮದುವೆಯಾಗಲು ಯೋಜಿಸಿದ್ದರು ಎಂಬ ವದಂತಿಗಳಿವೆ. ಆದರೆ, ಅವರ ಆ ಸಂಬಂಧವು ಮದುವೆಗೆ ಪಕ್ವವಾಗಲಿಲ್ಲ. ಇನ್ನು 2022 ರಲ್ಲಿ, ನಟಿ ನಮಿತಾ ಅವರೊಂದಿಗಿನ ಅವರ ವಿವಾಹದ ಬಗ್ಗೆ ವದಂತಿಗಳಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ