AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prabhas: ‘ಆದಿಪುರುಷ್’ ರಿಲೀಸ್ ದಿನ ಪ್ರಭಾಸ್ ಅಭಿಮಾನಿಗಳಿಗೆ ಡಬಲ್ ಧಮಾಕ; ಹೊರಬಿತ್ತು ಹೊಸ ಸುದ್ದಿ

 ‘ಸಲಾರ್’ ಟೀಸರ್​​ಗಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾದಿದ್ದಾರೆ. ಕಳೆದ ವರ್ಷದಿಂದ ಈ ಬಗ್ಗೆ ಒಂದಿಲ್ಲೊಂದು ಸುದ್ದಿ ಹುಟ್ಟಿಕೊಳ್ಳುತ್ತಿದೆ. ಆದರೆ, ಈವರೆಗೆ ಟೀಸರ್ ಅನಾವರಣಗೊಂಡಿಲ್ಲ.

Prabhas: ‘ಆದಿಪುರುಷ್’ ರಿಲೀಸ್ ದಿನ ಪ್ರಭಾಸ್ ಅಭಿಮಾನಿಗಳಿಗೆ ಡಬಲ್ ಧಮಾಕ; ಹೊರಬಿತ್ತು ಹೊಸ ಸುದ್ದಿ
ಪ್ರಭಾಸ್
ರಾಜೇಶ್ ದುಗ್ಗುಮನೆ
|

Updated on: May 28, 2023 | 6:45 AM

Share

‘ಆದಿಪುರುಷ್’ (Adipurush Movie) ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಜೂನ್ 16ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ವಿಶೇಷ ದಿನಕ್ಕೆ ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗುತ್ತಿದೆ. ಹೌದು, ‘ಸಲಾರ್​’ ಸಿನಿಮಾದ (Salaar Movie) ಟೀಸರ್ ‘ಆದಿಪುರುಷ್’ ಚಿತ್ರ ಆರಂಭ ಆಗುವುದಕ್ಕೂ ಮೊದಲೂ ಪ್ರಸಾರ ಕಾಣಲಿದೆ ಎನ್ನುತ್ತಿವೆ ಮೂಲಗಳು. ಈ ವಿಚಾರದ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಇದು ನಿಜವಾಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಪ್ರಭಾಸ್ ಅವರು ಸಾಲು ಸಾಲು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಆ ಪೈಕಿ ‘ಆದಿಪುರುಷ್’ ಸಿನಿಮಾ ಜೂನ್ 16ರಂದು ರಿಲೀಸ್ ಆಗುತ್ತಿದೆ. ಅದೇ ರೀತಿ, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಸೆಪ್ಟೆಂಬರ್​ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಪೋಸ್ಟರ್​ಗಳು ಹೊರಬಿದ್ದಿದ್ದು ಬಿಟ್ಟರೆ ಮತ್ತಾವುದೇ ಅಪ್​ಡೇಟ್ ಸಿಕ್ಕಿಲ್ಲ. ಈಗ ಪ್ರಶಾಂತ್ ನೀಲ್ ಅವರು ಪ್ರಭಾಸ್ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಲು ರೆಡಿ ಆಗಿದ್ದಾರೆ ಎನ್ನಲಾಗಿದೆ.

ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಇದರ ಜೊತೆ ಟೀಸರ್ ಪ್ರಸಾರ ಮಾಡಲು ಸಿನಿಮಾ ತಂಡದವರು ಆಸಕ್ತಿ ತೋರಿಸುತ್ತಾರೆ. ‘ಆದಿಪುರುಷ್’ ಸಿನಿಮಾಗೆ ಸಾಕಷ್ಟು ಹೈಪ್ ಸೃಷ್ಟಿ ಆಗಿದೆ. ಈ ಚಿತ್ರದ ಜೊತೆ ‘ಸಲಾರ್’ ಸಿನಿಮಾ ಟೀಸರ್ ಪ್ರಸಾರ ಮಾಡಿದರೆ ಉತ್ತಮ ಎಂಬ ಆಲೋಚನೆಯಲ್ಲಿ ಪ್ರಶಾಂತ್ ನೀಲ್ ಇದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಡಬಲ್ ಧಮಾಕ ಸಿಗುತ್ತಿದೆ.

‘ಸಲಾರ್’ ಟೀಸರ್​​ಗಾಗಿ ಅಭಿಮಾನಿಗಳು ಬಹಳ ಸಮಯದಿಂದ ಕಾದಿದ್ದಾರೆ. ಕಳೆದ ವರ್ಷದಿಂದ ಈ ಬಗ್ಗೆ ಒಂದಿಲ್ಲೊಂದು ಸುದ್ದಿ ಹುಟ್ಟಿಕೊಳ್ಳುತ್ತಿದೆ. ಆದರೆ, ಈವರೆಗೆ ಟೀಸರ್ ಅನಾವರಣಗೊಂಡಿಲ್ಲ. ಅಚ್ಚರಿ ಎಂದರೆ ಅನೇಕರು ಟೀಸರ್ ರಿಲೀಸ್ ಮಾಡುವಂತೆ ಪತ್ರ ಬರೆದಿದ್ದರು. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಕೂಡ ಹಾಕಿದ್ದರು. ಇದಕ್ಕೆಲ್ಲ ಚಿತ್ರತಂಡದವರು ಜಗ್ಗಲೇ ಇಲ್ಲ. ಕೊನೆಗೂ ಈ ವಿಚಾರದಲ್ಲಿ ದೊಡ್ಡ ಅಪ್​ಡೇಟ್ ಸಿಗುತ್ತಿರುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದನ್ನೂ ಓದಿ: ಸಲಾರ್ ಸಿನಿಮಾ ಸೇರಿದ ಮತ್ತೊಬ್ಬ ಕನ್ನಡಿಗ, ಪ್ರಭಾಸ್ ಜೊತೆ ಕನ್ನಡದ ಹಿರಿಯ ನಟ

ಅಂದಹಾಗೆ, ಈ ವಿಚಾರವನ್ನು ಚಿತ್ರತಂಡದವರು ಅಧಿಕೃತ ಮಾಡಿಲ್ಲ. ಈ ಬಗ್ಗೆ ಖಚಿತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ‘ಆದಿಪುರುಷ್’ ಸಿನಿಮಾಗೆ ಓಂ ರಾವತ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡರೆ ಕೃತಿ ಸನೋನ್ ಸೀತೆ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More