SSMB28: ಮಹೇಶ್​ ಬಾಬು 28ನೇ ಚಿತ್ರದ ಶೀರ್ಷಿಕೆ ಅನಾವರಣಕ್ಕೆ ದಿನಾಂಕ ಫಿಕ್ಸ್​; ಚಿತ್ರಮಂದಿರಗಳಲ್ಲಿ ವಿಶೇಷ ವಿಡಿಯೋ

Mahesh Babu: ಮಹೇಶ್​ ಬಾಬು ತಂದೆ, ಸೂಪರ್​ ಸ್ಟಾರ್ ಕೃಷ್ಣ ಅವರ ಬರ್ತ್​ಡೇ ಪ್ರಯುಕ್ತ ಇಷ್ಟೆಲ್ಲ ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಮೇ 31ರಂದು ಮಹೇಶ್​ ಬಾಬು ಅವರ 28ನೇ ಚಿತ್ರದ ಟೈಟಲ್​ ಅನಾವರಣ ಆಗಲಿದೆ.

SSMB28: ಮಹೇಶ್​ ಬಾಬು 28ನೇ ಚಿತ್ರದ ಶೀರ್ಷಿಕೆ ಅನಾವರಣಕ್ಕೆ ದಿನಾಂಕ ಫಿಕ್ಸ್​; ಚಿತ್ರಮಂದಿರಗಳಲ್ಲಿ ವಿಶೇಷ ವಿಡಿಯೋ
ಮಹೇಶ್​ ಬಾಬು, ಸೂಪರ್​ ಸ್ಟಾರ್ ಕೃಷ್ಣ
Follow us
ಮದನ್​ ಕುಮಾರ್​
|

Updated on: May 27, 2023 | 9:20 PM

ಮಹೇಶ್​ ಬಾಬು (Mahesh Babu) ನಟನೆಯ ಸಿನಿಮಾ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್​. ಕಾರಣಾಂತರಗಳಿಂದ ಮಹೇಶ್​ ಬಾಬು ಅವರು ಹೊಸ ಸಿನಿಮಾದ ಕೆಲಸಗಳನ್ನು ನಿಧಾನವಾಗಿ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಅವಸರ ತೋರಿಸುತ್ತಿಲ್ಲ. ಸದ್ಯ ಅವರ 28ನೇ ಸಿನಿಮಾದ ಕೆಲಸಗಳು ಪ್ರಗತಿಯಲ್ಲಿವೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್​ ಅವರ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಹೆಸರು ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಅದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇದೆ. ತಾತ್ಕಾಲಿಕವಾಗಿ ಈ ಚಿತ್ರವನ್ನು ‘ಎಸ್​ಎಸ್​ಎಂಬಿ28’ (SSMB28) ಎಂದು ಕರೆಯಲಾಗುತ್ತಿದೆ. ಈಗ ಈ ಚಿತ್ರದ ಟೈಟಲ್​ ಅನೌನ್ಸ್​ ಮಾಡುವ ಸಮಯ ಹತ್ತಿರ ಆಗಿದೆ. ಮೇ 31ರಂದು ಶೀರ್ಷಿಕೆ ಬಹಿರಂಗ ಆಗಲಿದೆ. ಅದಕ್ಕಾಗಿ ಚಿತ್ರತಂಡದವರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಟಾಲಿವುಡ್​ (Tollywood) ಪ್ರೇಕ್ಷಕರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೇ 31ರಂದು ಚಿತ್ರಮಂದಿರಗಳಲ್ಲಿ ವಿಶೇಷ ವಿಡಿಯೋ ಬಿತ್ತರ ಆಗಲಿದೆ. ಅದರಲ್ಲಿ ಟೈಟಲ್​ ರಿವೀಲ್​ ಆಗಲಿದೆ.

ಮಹೇಶ್​ ಬಾಬು ತಂದೆ, ಸೂಪರ್​ ಸ್ಟಾರ್ ಕೃಷ್ಣ ಅವರ ಬರ್ತ್​ಡೇ ಪ್ರಯುಕ್ತ ಇಷ್ಟೆಲ್ಲ ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಮೇ 31ರಂದು ಕೃಷ್ಣ ಜನ್ಮದಿನ. ಅಂದು ಅವರ ಹಳೇ ಸಿನಿಮಾ ಮರು ಬಿಡುಗಡೆ ಆಗಲಿದೆ. ‘ಮೋಸಗಾಳ್ಳಕು ಮೋಸಗಾಳ್ಳು’ ಸಿನಿಮಾ ರೀ-ರಿಲೀಸ್​ ಆಗುತ್ತಿದ್ದು, ಅದರ ಜೊತೆ ಮಹೇಶ್​ ಬಾಬು ಅವರು 28ನೇ ಚಿತ್ರದ ಟೈಟಲ್​ ಅನಾವರಣ ಆಗಲಿದೆ. ಅದನ್ನು ತಿಳಿಸುವ ಸಲುವಾಗಿ ಒಂದು ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಅದರಲ್ಲಿ ಮಹೇಶ್​ ಬಾಬು ಅವರ ಮುಖ ಕಾಣಿಸಿಲ್ಲ. ತಲೆಗೆ ಬಟ್ಟೆ ಕಟ್ಟಿಕೊಂಡು, ಕ್ಯಾಮೆರಾಗೆ ಬೆನ್ನು ಹಾಕಿ ಹೋಗುತ್ತಿರುವ ಶೈಲಿಯಲ್ಲಿ ಮಹೇಶ್​ ಬಾಬು ಪೋಸ್​ ನೀಡಿದ್ದಾರೆ. ಕೈಯಲ್ಲಿ ಸಿಗರೇಟ್​ ಹಿಡಿದಿರುವಂತಿದೆ. ಈ ಗೆಟಪ್​ ಮೂಲಕ ಕೌತುಕ ಮೂಡಿಸಲಾಗಿದೆ.

ಇದನ್ನೂ ಓದಿ: Sitara: ಚಿಕ್ಕ ವಯಸ್ಸಿನಲ್ಲೇ ದೊಡ್ಡ ಡೀಲ್​ ಒಪ್ಪಿಕೊಂಡ ಮಹೇಶ್​ ಬಾಬು ಪುತ್ರಿ ಸಿತಾರಾ; ಸಿಗುತ್ತಿದೆ ಭರ್ಜರಿ ಸಂಭಾವನೆ

‘ಹಾರಿಕಾ ಆ್ಯಂಡ್​ ಹಾಸಿನಿ ಕ್ರಿಯೇಷನ್ಸ್​’ ಬ್ಯಾನರ್​ ಮೂಲಕ ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ಎಸ್​. ರಾಧಾಕೃಷ್ಣ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದು, ಕನ್ನಡದ ಹುಡುಗಿ ಶ್ರೀಲೀಲಾ ಕೂಡ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಎಸ್​. ಥಮನ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶೀರ್ಷಿಕೆ ಅನೌನ್ಸ್​ ಆದ ಬಳಿಕ ಚಿತ್ರದ ಮೇಲಿನ ಕ್ರೇಜ್​ ಇನ್ನಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: Mahesh Babu: ‘ವಿಜಯ್​ ಅವರನ್ನು ನೋಡಿ ಮಹೇಶ್​ ಬಾಬು ಕಲಿಯಬೇಕು’; ನೇರವಾಗಿ ಕಿವಿಮಾತು ಹೇಳಿದ ‘ಪ್ರಿನ್ಸ್’ ಫ್ಯಾನ್ಸ್​

2022ರ ವರ್ಷ ಮಹೇಶ್​ ಬಾಬು ಕುಟುಂಬಕ್ಕೆ ಸಖತ್​ ನೋವುಂಟು ಮಾಡಿತು. ಅವರ ತಂದೆ-ತಾಯಿ ಇಬ್ಬರೂ ಇಹಲೋಕ ತ್ಯಜಿಸಿದರು. ಆ ಕಾರಣಕ್ಕಾಗಿ ಮಹೇಶ್​ ಬಾಬು ಅವರು ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆಯುವುದು ಅನಿವಾರ್ಯ ಆಯಿತು. ಹಾಗಾಗಿ ಅವರ ಚಿತ್ರದ ಕೆಲಸಗಳು ವಿಳಂಬ ಆದವು. ಆದಷ್ಟು ಬೇಗ ಮಹೇಶ್​ ಬಾಬು ಅವರನ್ನು ದೊಡ್ಡ ಪರದೆ ಮೇಲೆ ನೋಡಬೇಕು ಎಂದು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ