AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Chaitanya: ಸೋತು ಸುಣ್ಣವಾಗಿದ್ದ ನಾಗ ಚೈತನ್ಯಗೂ ಬಂತು ಒಳ್ಳೆಯ ಟೈಮ್​; ಹುಡುಕಿಕೊಂಡು ಬಂದ್ರು ನಿರ್ಮಾಪಕರು

ಸತತವಾಗಿ ಸೋತ ಹೀರೋ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಂದೆಬರುವುದು ಕಡಿಮೆ. ನಾಗ ಚೈತನ್ಯ ಅವರ ಪರಿಸ್ಥಿತಿ ಕೂಡ ಹೀಗೆಯೇ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ಹಾಗೆ ಆಗಿಲ್ಲ.

Naga Chaitanya: ಸೋತು ಸುಣ್ಣವಾಗಿದ್ದ ನಾಗ ಚೈತನ್ಯಗೂ ಬಂತು ಒಳ್ಳೆಯ ಟೈಮ್​; ಹುಡುಕಿಕೊಂಡು ಬಂದ್ರು ನಿರ್ಮಾಪಕರು
ನಾಗ ಚೈತನ್ಯ
ಮದನ್​ ಕುಮಾರ್​
|

Updated on: May 27, 2023 | 8:05 PM

Share

ನಟ ನಾಗ ಚೈತನ್ಯ (Naga Chaitanya) ಅವರು ನಟಿಸಿದ ಇತ್ತೀಚಿನ ಸಿನಿಮಾಗಳು ಗೆದ್ದಿಲ್ಲ. ‘ಮಜಿಲಿ’, ‘ಲವ್​ ಸ್ಟೋರಿ’ ನಂತರ ಅವರು ಸ್ಕ್ರಿಪ್ಟ್​ ಆಯ್ಕೆಯಲ್ಲಿ ಎಡವಿದರು. ‘ಥ್ಯಾಂಕ್​ ಯೂ’ ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗಲಿಲ್ಲ. ‘ಕಸ್ಟಡಿ’ (Custody Movie) ನೋಡಿದ ಜನರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತು. ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆದ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ನಾಗ ಚೈತನ್ಯ ಅವರು ಬೇರೆ ರೀತಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಿದೆ. ಹಾಗಂತ ಅವರು ಚಿಂತೆ ಮಾಡುವ ಅಗತ್ಯ ಇಲ್ಲ. ಅವರಿಗೂ ಈಗ ಒಳ್ಳೆಯ ಟೈಮ್​ ಬಂದಂತಿದೆ. ಅವರನ್ನು ಹುಡುಕಿಕೊಂಡು ನಿರ್ಮಾಪಕರು ಬಂದಿದ್ದಾರೆ. ಜಿಎ2 ಪಿಕ್ಚರ್ಸ್​ನ (GA2 Pictures) ಬನ್ನಿ ವಾಸ್​ ಅವರು ನಾಗ ಚೈತನ್ಯ ಜೊತೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಸತತವಾಗಿ ಸೋತ ಹೀರೋ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಂದೆಬರುವುದು ಕಡಿಮೆ. ನಾಗ ಚೈತನ್ಯ ಅವರ ಪರಿಸ್ಥಿತಿ ಕೂಡ ಹೀಗೆಯೇ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ಹಾಗೆ ಆಗಿಲ್ಲ. ನಾಗ ಚೈತನ್ಯ ಅವರ ಮುಂದಿನ ಸಿನಿಮಾಗೆ ‘ಜಿಎ2 ಪಿಕ್ಚರ್ಸ್​’ ಸಂಸ್ಥೆಯು ಬಂಡವಾಳ ಹೂಡಲಿದೆ. ಆದರೆ ಈ ಚಿತ್ರಕ್ಕೆ ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಸಮಂತಾ ರುತ್​ ಪ್ರಭು ಅವರಿಗೆ ಡಿವೋರ್ಸ್​ ನೀಡಿದ ಬಳಿಕ ನಾಗ ಚೈತನ್ಯ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಗೆಲುವು ಎಂಬುದು ಮರೀಚಿಕೆ ಆಗಿದೆ. ಹೊಸ ಸಿನಿಮಾದ ಮೂಲಕವಾದರೂ ಅವರು ಗೆಲ್ಲಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ.

ಇದನ್ನೂ ಓದಿ: ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ನಾಗ ಚೈತನ್ಯ ಮಾತು, ಮೂರನೇ ವ್ಯಕ್ತಿಗಳ ಬಗ್ಗೆ ಆಕ್ರೋಶ

ಅಕ್ಕಿನೇನಿ ಕುಟುಂಬದ ಹೀರೋಗಳಿಗೆ ಸತತ ಸೋಲು:

ತೆಲುಗು ಚಿತ್ರರಂಗದಲ್ಲಿ ಮಾಸ್​ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತವೆ ಎಂಬ ಮಾತು ಇದೆ. ಆದರೆ ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ಎಂಜಾಯ್​ ಮಾಡಿರುವ ಜನರು ಈಗ ಹೊಸತನದ ಕಥೆಗಳನ್ನು ಬಯಸುತ್ತಿದ್ದಾರೆ. ಅದೇ ಕಾರಣಕ್ಕೋ ಏನೋ ಟಾಲಿವುಡ್​ನ ಕೆಲವು ಸಿನಿಮಾಗಳು ಮುಗ್ಗರಿಸುತ್ತಿವೆ. ಹಳೇ ಮಾದರಿಯಲ್ಲೇ ಸಿನಿಮಾ ಮಾಡಿದ ಹೀರೋಗಳಿಗೆ ಸೋಲು ಉಂಟಾಗುತ್ತಿದೆ. ಅದರಲ್ಲೂ ಅಕ್ಕಿನೇನಿ ಕುಟುಂಬದ ನಟರು ಬ್ಯಾಕ್​ ಟು ಬ್ಯಾಕ್​ ಸೋಲುತ್ತಿದ್ದಾರೆ. ಹಿರಿಯ ನಟ ನಾಗಾರ್ಜುನ ಮಾಡಿದ ಚಿತ್ರಗಳು ಜನರಿಗೆ ಮೆಚ್ಚುಗೆ ಆಗುತ್ತಿಲ್ಲ. ಅವರ ಪುತ್ರರಾದ ನಾಗ ಚೈತನ್ಯ ಮತ್ತು ಅಖಿಲ್​ ನಟನೆಯ ಸಿನಿಮಾಗಳನ್ನು ಕೂಡ ಪ್ರೇಕ್ಷಕರು ರಿಜೆಕ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಜೀವನದ ಯಾವ ನಿರ್ಧಾರದ ಬಗ್ಗೆಯೂ ವಿಷಾದ ಇಲ್ಲ’; ನೇರ ಮಾತುಗಳಲ್ಲಿ ಹೇಳಿದ ನಾಗ ಚೈತನ್ಯ

ನಾಗಾರ್ಜುನ ಅವರು ಸ್ಕ್ರಿಪ್ಟ್​ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಅವರು ನಟಿಸಿದ ‘ವೈಲ್ಡ್​ ಡಾಗ್​’, ‘ಆಫೀಸರ್​​’ ಮತ್ತು ‘ದಿ ಘೋಸ್ಟ್​’ ಚಿತ್ರಗಳು ಒಂದರ ಹಿಂದೊಂದು ಸೋತಿವೆ. ಅದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅಖಿಲ್​ ಅಕ್ಕಿನೇನಿ ಅವರಿಗೆ ಟಾಲಿವುಡ್​ನಲ್ಲಿ ನೆಲೆ ಕಂಡುಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಮಾಡಿದ ಒಂದೆರಡು ಸಿನಿಮಾಗಳು ಕೂಡ ಗೆಲ್ಲಲಿಲ್ಲ. ಹೇಗಾದರೂ ಮಾಡಿ ಯಶಸ್ಸು ಕಾಣಲೇಬೇಕು ಎಂಬ ಉದ್ದೇಶದಿಂದ ಅವರು ‘ಏಜೆಂಟ್​’ ಸಿನಿಮಾ ಮಾಡಿದರು. ಆದರೂ ಕೂಡ ಅವರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗಲಿಲ್ಲ. ಇತ್ತೀಚೆಗೆ ತೆರೆಕಂಡ ಈ ಚಿತ್ರಕ್ಕಾಗಿ ಅಖಿಲ್​ ಅವರು ತುಂಬ ಶ್ರಮಪಟ್ಟಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?