AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀವನದ ಯಾವ ನಿರ್ಧಾರದ ಬಗ್ಗೆಯೂ ವಿಷಾದ ಇಲ್ಲ’; ನೇರ ಮಾತುಗಳಲ್ಲಿ ಹೇಳಿದ ನಾಗ ಚೈತನ್ಯ

‘ಜೀವನದ ಯಾವ ನಿರ್ಧಾರದ ಬಗ್ಗೆ ನಿಮಗೆ ಹೆಚ್ಚು ವಿಷಾದ ಇದೆ’ ಎಂದು ಯೂಟ್ಯೂಬ್ ಸಂದರ್ಶನ ಒಂದರಲ್ಲಿ ನಾಗ ಚೈತನ್ಯ ಅವರಿಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ.

‘ಜೀವನದ ಯಾವ ನಿರ್ಧಾರದ ಬಗ್ಗೆಯೂ ವಿಷಾದ ಇಲ್ಲ’; ನೇರ ಮಾತುಗಳಲ್ಲಿ ಹೇಳಿದ ನಾಗ ಚೈತನ್ಯ
ನಾಗ ಚೈತನ್ಯ, ಸಮಂತಾ
ರಾಜೇಶ್ ದುಗ್ಗುಮನೆ
|

Updated on: May 01, 2023 | 1:05 PM

Share

ನಾಗ ಚೈತನ್ಯ ಹಾಗೂ ಸಮಂತಾ (Samantha) ಬೇರೆ ಆಗಿ ಹಲವು ಸಮಯ ಕಳೆದಿದೆ. ಆದರೆ, ಈ ಜೋಡಿ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಮಾತ್ರ ಇಂದಿಗೂ ನಿಂತಿಲ್ಲ. ನಿತ್ಯ ಒಂದಿಲ್ಲೊಂದು ವಿಚಾರಗಳು ಇವರ ಬಗ್ಗೆ ಕೇಳಿ ಬರುತ್ತಲೇ ಇವೆ. ಈಗ ನಾಗ ಚೈತನ್ಯ (Naga Chaitanya) ಅವರು ಕೆಲ ವಿಚಾರಗಳ ಬಗ್ಗೆ ನೇರ ಮಾತುಗಳಲ್ಲಿ ಹೇಳಿದ್ದಾರೆ. ಜೀವನದಲ್ಲಿ ತೆಗೆದುಕೊಂಡ ಯಾವ ನಿರ್ಧಾರದ ಬಗ್ಗೆಯೂ ಅವರಿಗೆ ವಿಷಾದ ಇಲ್ಲವಂತೆ. ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನ ಒಂದರಲ್ಲಿ ನಾಗ ಚೈತನ್ಯ ಈ ಮಾತನ್ನು ಹೇಳಿದ್ದಾರೆ.

2021ರ ಅಕ್ಟೋಬರ್​ನಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಬೇರೆ ಆಗುವ ನಿರ್ಧಾರಕ್ಕೆ ಬಂದರು. ವಿಚ್ಛೇದನ ಪಡೆದ ಬಳಿಕ ಸಮಂತಾ ಸಿನಿಮಾ ರಂಗದಿಂದ ಸಣ್ಣ ಬ್ರೇಕ್ ಪಡೆದಿದ್ದರು. ಬಳಿಕ ಅವರು ನಟನೆಗೆ ಮರಳಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ನಾಗ ಚೈತನ್ಯ ಕೂಡ ಹಳೆಯದನ್ನು ಮರೆತು ಮುಂದಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ.

‘ಜೀವನದ ಯಾವ ನಿರ್ಧಾರದ ಬಗ್ಗೆ ನಿಮಗೆ ಹೆಚ್ಚು ವಿಷಾದ ಇದೆ’ ಎಂದು ಯೂಟ್ಯೂಬ್ ಸಂದರ್ಶನ ಒಂದರಲ್ಲಿ ನಾಗ ಚೈತನ್ಯ ಅವರಿಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಅವರ ಉತ್ತರ ನೇರಮಾತುಗಳಲ್ಲಿ ಇತ್ತು. ‘ನನ್ನ ಜೀವನದ ಯಾವುದೇ ನಿರ್ಧಾರದ ಬಗ್ಗೆಯೂ ವಿಷಾದ ಇಲ್ಲ. ಎಲ್ಲವೂ ಒಂದು ಪಾಠ’ ಎಂದಿದ್ದಾರೆ ನಾಗ ಚೈತನ್ಯ. ಈ ಹೇಳಿಕೆಯನ್ನು ಬಗೆಬಗೆಯಲ್ಲಿ ವಿಶ್ಲೇಷಿಸಲಾಗುತ್ತಿದೆ. ವಿಚ್ಛೇದನ ಪಡೆದ ಬಗ್ಗೆ ಅವರಿಗೆ ಯಾವುದೇ ಬೇಸರ ಇಲ್ಲವೇ ಎನ್ನುವ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ: Samantha Tattoo: ಡಿವೋರ್ಸ್​ ಆದರೂ ಸಮಂತಾ ಮೈ ಮೇಲಿದೆ ನಾಗ ಚೈತನ್ಯ ಸಹಿಯ ಟ್ಯಾಟೂ

ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವನ್ನು ಇಬ್ಬರೂ ಒಪ್ಪಿಕೊಂಡಿಲ್ಲ. ಲಂಡನ್​ನಲ್ಲಿ ಹೋಟೆಲ್ ಒಂದರಲ್ಲಿ ಇಬ್ಬರೂ ಊಟ ಮಾಡುವ ಸಂದರ್ಭದಲ್ಲಿ ಅಭಿಮಾನಿ ತೆಗೆದಿದ್ದ ಫೋಟೋ ವೈರಲ್ ಆಗಿತ್ತು. ನಾಗ ಚೈತನ್ಯ ಅವರು ಡೇಟಿಂಗ್ ಮಾಡುತ್ತಿರುವ ವಿಚಾರ ಅಭಿಮಾನಿಗಳಿಗೆ ಖಚಿತವಾಗಿತ್ತು.

ಸಿನಿಮಾ ವಿಚಾರಕ್ಕೆ ಬರೋದಾದರೆ ಕಳೆದ ವರ್ಷ ರಿಲೀಸ್ ಆದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ಅತಿಥಿ ಪಾತ್ರ ಮಾಡಿದ್ದರು. ಈ ಸಿನಿಮಾ ಸೋತಿತ್ತು. ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ‘ಥ್ಯಾಂಕ್ ಯೂ’ ಸಿನಿಮಾ ಕೂಡ ಸೋಲು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ