Pavitra Lokesh: ‘ಮತ್ತೆ ಮದುವೆ’ ಆಗಲು ಭರ್ಜರಿ ಹಣ ಪಡೆದ್ರಾ ನಟಿ ಪವಿತ್ರಾ ಲೋಕೇಶ್​?

ತಮ್ಮ ಜೀವನದಲ್ಲಿ ನಡೆದ ಕೆಲವು ವಿಚಾರಗಳು ‘ಮತ್ತೆ ಮದುವೆ’ ಸಿನಿಮಾದಲ್ಲಿದೆ. ಈ ಚಿತ್ರಕ್ಕಾಗಿ ಪವಿತ್ರಾ ಲೋಕೇಶ್ ಭರ್ಜರಿ ಸಂಭಾವನೆ ಪಡೆದಿದ್ದಾರೆ.  

Pavitra Lokesh: ‘ಮತ್ತೆ ಮದುವೆ’ ಆಗಲು ಭರ್ಜರಿ ಹಣ ಪಡೆದ್ರಾ ನಟಿ ಪವಿತ್ರಾ ಲೋಕೇಶ್​?
ಪವಿತ್ರಾ ಲೋಕೇಶ್, ನರೇಶ್
Follow us
ರಾಜೇಶ್ ದುಗ್ಗುಮನೆ
|

Updated on:May 27, 2023 | 12:18 PM

ನಟಿ ಪವಿತ್ರಾ ಲೋಕೇಶ್ (Pavitra Lokesh) ಹೆಸರು ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಹಿರಿಯ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಮಧ್ಯೆ ವಿಶೇಷ ಸಂಬಂಧ ಇದೆ. ಇವರಿಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಮಾತೂ ಇದೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನರೇಶ್ (Naresh) ಅವರು ನಮ್ಮದು ಮನಸ್ಸುಗಳ ಮದುವೆ ಎಂದು ಹೇಳಿದ್ದರು. ಸದ್ಯ ಟ್ರೋಲ್‌ಗಳನ್ನು ಲೆಕ್ಕಿಸದೇ ಇವರು ಮುಂದೆ ಸಾಗುತ್ತಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಮತ್ತೆ ಮದುವೆ’ ಸಿನಿಮಾಗಾಗಿ ಪವಿತ್ರಾ ಲೋಕೇಶ್ ದೊಡ್ಡ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಪವಿತ್ರಾ ಲೋಕೇಶ್ ಹಾಗೂ ನರೇಶ್ ವಿಚಾರ ಇತ್ತೀಚೆಗೆ ಚರ್ಚೆ ಆಗುತ್ತಿದೆ. ನರೇಶ್ ಬೇರೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು. ಮೈಸೂರಿನ ಹೋಟೆಲ್ ಒಂದರಲ್ಲಿ ಪವಿತ್ರಾ-ನರೇಶ್ ಜೊತೆಯಾಗಿ ಇದ್ದಾಗ ಅಲ್ಲಿಗೆ ಬಂದಿದ್ದ ರಮ್ಯಾ ರಘುಪತಿ ಅವರು ನರೇಶ್ ಅವರನ್ನು ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದರು. ಈ ವೇಳೆ ಕೇಕೆ ಹಾಕುತ್ತಾ ಸಾಗಿದ್ದರು ನರೇಶ್. ಈ ಎಲ್ಲಾ ವಿಚಾರಗಳು ‘ಮತ್ತೆ ಮದುವೆ’ ಸಿನಿಮಾದಲ್ಲಿದೆ. ಈ ಚಿತ್ರಕ್ಕಾಗಿ ಪವಿತ್ರಾ ಲೋಕೇಶ್ ಭರ್ಜರಿ ಸಂಭಾವನೆ ಪಡೆದಿದ್ದಾರೆ.

ವಿವಾದಗಳ ನಡುವೆಯೂ ಪವಿತ್ರಾ ಲೋಕೇಶ್​​ಗೆ ಸಿನಿಮಾ ಆಫರ್​​ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ ಎನ್ನಲಾಗಿದೆ. ಪವಿತ್ರಾ ಲೋಕೇಶ್ ‘ಮತ್ತೆ ಮದುವೆ’ ಚಿತ್ರಕ್ಕೆ ತೆಗೆದುಕೊಂಡಿರುವ ಸಂಭಾವನೆ ವಿಚಾರ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ. ಎಂ.ಎಸ್. ರಾಜು ನಿರ್ದೇಶನದ ಈ ಚಿತ್ರಕ್ಕೆ ನರೇಶ್ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಪವಿತ್ರಾ ಲೋಕೇಶ್ ಜೊತೆಗಿನ ಲಿಪ್​ಲಾಕ್ ಬಗ್ಗೆ ವಿವರಣೆ ನೀಡಿದ ನರೇಶ್: ಆ ದೃಶ್ಯದ ಹಿನ್ನೆಲೆ ಏನು?

ಪವಿತ್ರಾ ಲೋಕೇಶ್ ಈ ಮೊದಲು ದಿನಕ್ಕೆ 60 ಸಾವಿರ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ. ಈಗ ಅವರ ಸಂಭಾವನೆ ದಿನಕ್ಕೆ ಒಂದು ಲಕ್ಷ ರೂಪಾಯಿಗೆ ಏರಿದೆಯಂತೆ. ‘ಮತ್ತೆ ಮದುವೆ’ ಚಿತ್ರಕ್ಕೆ ಅವರು 10 ಕೋಟಿ ರೂ.ವರೆಗೆ ಪಡೆದಿದ್ದಾರೆ ಎಂದೂ ಹೇಳಲಾಗಿದೆ. ‘ಮತ್ತೆ ಮದುವೆ’ ಸಿನಿಮಾದಲ್ಲಿ ನರೇಶ್​ಗೆ ನಾಯಕಿಯಾಗಿ ಅವರು ನಟಿಸಿದ್ದಾರೆ.

‘ಮತ್ತೆ ಮದುವೆ’ ಸಿನಿಮಾ ತೆಲುಗಿನಲ್ಲಿ ಮೇ 26ರಂದು ರಿಲೀಸ್ ಆಗಿದೆ. ಸದ್ಯ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಮುಂದಿನ ವಾರ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:44 am, Sat, 27 May 23