ಕತ್ರಿನಾ ಜೊತೆ ವಿಕ್ಕಿ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಇಲ್ಲಿದೆ ವಿವರ

ವಿಕ್ಕಿ ಕೌಶಲ್ ಅವರಿಗೆ ಇಂದು 37ನೇ ಜನ್ಮದಿನ. ಅವರ ಮತ್ತು ಕತ್ರಿನಾ ಕೈಫ್ ಅವರ ರೋಮ್ಯಾಂಟಿಕ್ ಕಥೆಯನ್ನು ನೆನಪಿಸಿಕೊಳ್ಳೋಣ. ಅವಾರ್ಡ್ ಫಂಕ್ಷನ್‌ನಲ್ಲಿ ಆರಂಭವಾದ ಅವರ ಪ್ರೇಮ, ಕರಣ್ ಜೋಹರ್ ಪಾರ್ಟಿಯಲ್ಲಿ ಬೆಳೆಯಿತು. 'ಕಾಫಿ ವಿತ್ ಕರಣ್' ನಲ್ಲಿ ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದ ವಿಕ್ಕಿ, ಕತ್ರಿನಾ ಜೊತೆ ಮದುವೆಯಾದರು.

ಕತ್ರಿನಾ ಜೊತೆ ವಿಕ್ಕಿ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಇಲ್ಲಿದೆ ವಿವರ
ಕತ್ರಿನಾ-ವಿಕ್ಕಿ
Updated By: ರಾಜೇಶ್ ದುಗ್ಗುಮನೆ

Updated on: May 16, 2025 | 7:43 AM

ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಅವರಿಗೆ ಇಂದು (ಮೇ 16) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದರೆ. ಅವರು ಈಗ 37ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ವಿಕ್ಕಿ ಹಾಗೂ ಕತ್ರಿನಾ 2021ರಲ್ಲಿ ಮದುವೆ ಆದರು ಮತ್ತು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ವಿಕ್ಕಿ ಅವರು ಕತ್ರಿನಾಗಿಂತ ವಯಸ್ಸಿನಲ್ಲಿ ಸಣ್ಣವರು. ಇವರು ಯಾವುದೇ ಸಿನಿಮಾ ಕೂಡ ಒಟ್ಟಿಗೆ ಮಾಡಿಲ್ಲ ಎನ್ನಿ. ಆದರೂ ಇವರ ಮಧ್ಯೆ ಪ್ರೀತಿ ಮೂಡಿದ್ದು ಹೇಗೆ? ಆ ಬಗ್ಗೆ ಇಂದು ತಿಳಿದುಕೊಳ್ಳೋಣ.

ಅವಾರ್ಡ್ ಫಂಕ್ಷನ್​ನಲ್ಲಿ ವಿಕ್ಕಿ ಹಾಗೂ ಕತ್ರಿನಾ ಒಟ್ಟಿಗೆ ಇದ್ದರು. ಈ ವೇಳೆ ವಿಕ್ಕಿ ಅವರು ಕತ್ರಿನಾಗೆ ಪ್ರಪೋಸ್ ಮಾಡಿದರು. ಇದು ಸ್ಕ್ರಿಪ್ಟ್​ನ ಒಂದು ಭಾಗ ಆಗಿತ್ತು ಅಷ್ಟೇ. ಅವರು ಅದಕ್ಕೂ ಮೊದಲು ಯಾವಾಗಲೂ ಭೇಟಿಯನ್ನೇ ಆಗಿರಲಿಲ್ಲ ಅನ್ನೋದು ಅಚ್ಚರಿಯ ಸಂಗತಿಗಳಲ್ಲಿ ಒಂದು. ಆ ಬಳಿಕ ಕರಣ್ ಜೋಹರ್ ಅವರು ಒಂದು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಇವರು ಭೇಟಿ ಆದರು. ಆಗ ಗೆಳೆತನ ಮೂಡಿತು.

ವಿಕ್ಕಿ ಕೌಶಲ್​ ಅವರಿಗೆ ಕತ್ರಿನಾ ಅಂದರೆ ಇಷ್ಟ ಇತ್ತು. ಅವರ ಜೊತೆ ಕೆಲಸ ಮಾಡಬೇಕು ಎಂದು ‘ಕಾಫಿ ವಿತ್ ಕರಣ್’ ಶೋನಲ್ಲಿ ಹೇಳಿಕೊಂಡಿದ್ದರು. ನಂತರ ಕತ್ರಿನಾ ಕೈಫ್ ಅವರು ಬಂದಾಗ ಇದೇ ಪ್ರಶ್ನೆ ಕೇಳಲಾಯಿತು. ಆದರೆ, ವಿಕ್ಕಿ ಕೌಶಲ್ ಹೆಸರನ್ನು ಕೇಳಿದ್ದೇನೆ, ಯಾರೆಂದು ಗೊತ್ತಿಲ್ಲ ಎಂದಿದ್ದರು.

ಇದನ್ನೂ ಓದಿ
VIDEO: ಲೈವ್​ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್​ಫ್ಲುಯೆನ್ಸರ್ ಹತ್ಯೆ
‘ನೀವು ಹೇಗೆ ಎಂದು ಎಲ್ಲರಿಗೂ ಗೊತ್ತು’; ಚೈತ್ರಾಗೆ ನೇರವಾಗಿ ಹೇಳಿದ ಅಭಿಮಾನಿ
ಮಾಧುರಿ ದೀಕ್ಷಿತ್ ರಿಯಾಲಿಟಿ ಶೋಗೆ ಪಡೆಯುತ್ತಾರೆ 25 ಕೋಟಿ ರೂಪಾಯಿ
17ನೇ ವಯಸ್ಸಿಗೆ ನಟನೆ; ಸಲ್ಲುಗಿಂತ ಹೆಚ್ಚು ಸಂಭಾವನೆ ಪಡೆದ ಮಾಧುರಿ

ಆ ಬಳಿಕ ಇಂಡಸ್ಟ್ರಿಯಲ್ಲಿ ಇವರು ಅನೇಕ ಬಾರಿ ಭೇಟಿ ಆದರು. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಆ ಬಳಿಕ ಸುತ್ತಾಟ ಆರಂಭಿಸಿದರು. ನಂತರ ಇವರು ಮದುವೆ ಕೂಡ ಆದರು. ಅನೇಕ ವರ್ಷಗಳ ಕಾಲ ಸುತ್ತಾಟ ನಡೆಸಿದ ಇವರು, ಈ ವಿಚಾರವನ್ನು ಮುಚ್ಚಿಟ್ಟಿದ್ದರು.

ಇದನ್ನೂ ಓದಿ: ಕತ್ರಿನಾ ಮಾಜಿ ಗೆಳೆಯನ ದಾಖಲೆಯನ್ನು ಮುರಿಯಲಿದ್ದಾರೆ ವಿಕ್ಕಿ ಕೌಶಲ್

ರಾಜಸ್ಥಾನದ ಹೋಟೆಲ್ ಒಂದರಲ್ಲಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ 2021ರಲ್ಲಿ ವಿವಾಹ ಆದರು. ಈ ಮದುವೆ ತುಂಬಾನೇ ಅದ್ದೂರಿಯಾಗಿ ನಡೆಯಿತು. ಕತ್ರಿನಾ ಕೈಫ್ ಅವರು ಸದ್ಯ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ. ‘ಹ್ಯಾಪಿ ನ್ಯೂ ಇಯರ್’ ಬಳಿಕ ಅವರ ಕಡೆಯಿಂದ ಸಿನಿಮಾ ಘೋಷಣೆ ಆಗಲೇ ಇಲ್ಲ. ಅವರ ಮಗುವನ್ನು ಹೊಂದುವ ಆಲೋಚನೆ ಮಾಡುತ್ತಿದ್ದಾರಾ ಎಂಬುದು ಸದ್ಯದ ಪ್ರಶ್ನೆ. ವಿಕ್ಕಿ ಕೌಶಲ್ ಅವರು ‘ಛಾವಾ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.