
ನಟಿ ನಯನತಾರಾ ಅವರು ನವೆಂಬರ್ 18ರಂದು ಬರ್ತ್ಡೇ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರ ಪತಿಯಿಂದ ವಿಶೇಷ ಗಿಫ್ಟ್ ಸಿಕ್ಕಿದೆ. ಹಾಗಂತ ಇದು ಲಕ್ಷಾಂತರ ರೂಪಾಯಿ ಬೆಲೆಯದ್ದಲ್ಲ. 10 ಕೋಟಿ ರೂಪಾಯಿ ಬೆಲೆ ಬಾಳುವಂಥ ಉಡುಗೊರೆ. ಹೌದು, ವಿಘ್ನೇಶ್ ಶಿವನ್ ಅವರು ಪತ್ನಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಪ್ರೀತಿಸಿ ಮದುವೆ ಆಗಿದ್ದಾರೆ. ಇವರ ವಿವಾಹ ಆಗಿ ಹಲವು ವರ್ಷಗಳು ಕಳೆದಿವೆ. ಆ ಬಳಿಕ ಇವರು ಬಾಡಿಗೆ ತಾಯತ್ನದ ಮೂಲಕ ಅವಳಿ ಮಕ್ಕಳನ್ನು ದತ್ತು ಪಡೆದರು. ನಯನತಾರಾ ಅವರು ಪತಿಗೆ ಈ ಮೊದಲು ಸಾಕಷ್ಟು ಉಡುಗೊರೆ ನೀಡಿದ್ದರು. ಈಗ ಪತ್ನಿಗೆ ಉಡುಗೊರೆ ನೀಡೋ ಸಮಯ. ಅವರು ಐಷಾರಾಮಿ ರೋಲ್ಸ್ ರಾಯ್ಸ್ ನೀಡಿದ್ದಾರೆ.
ರೋಲ್ಸ್ ರಾಯ್ಸ್ ಎದುರು ನಯನತಾರಾ, ವಿಘ್ನೇಶ್ ಹಾಗೂ ಇಬ್ಬರು ಮಕ್ಕಳು ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ವೇಳೆ ಅವರು ಪತ್ನಿಗೆ ಬರ್ತ್ಡೇ ವಿಶ್ ಮಾಡಿದ್ದಾರೆ. ಎಲ್ಲರೂ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ.
ಇದನ್ನೂ ಓದಿ: ‘ಅವಿವೇಕಿಯನ್ನು ಮದುವೆಯಾಗಿದ್ದು ನಿಮ್ಮ ತಪ್ಪಲ್ಲ; ನಯನತಾರಾ ಹೀಗೆ ಹೇಳಿದ್ರಾ?
ಈ ಕಾರಿನ ಮತ್ತೊಂದು ವಿಶೇಷ ಎಂದರೆ ಇದು ಸಂಪೂರ್ಣ ಎಲೆಕ್ಟ್ರಿಕ್ ಕಾರಾಗಿದೆ. ರೋಲ್ಸ್ ರಾಯ್ಸ್ ಅವರು ಪರಿಚಯಿಸಿದ ಮೊದಲ ಎಲೆಕ್ಟ್ರಿಕ್ ಕಾರು ಇದು. ಈ ಕಾರು ಒಮ್ಮೆ ಪೂರ್ತಿ ಚಾರ್ಜ್ ಆದರೆ 530 ಕಿ.ಮೀವರೆಗೆ ಚಲಿಸಬಹುದಾಗಿದೆ. ಈ ಕಾರು ಕೇವಲ 20 ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್ ಆಗಬಲ್ಲದು ಎಂಬುದು ವಿಶೇಷ. ಇನ್ನುಮುಂದೆ ನಯನತಾರಾ ಅವರು ಎಲೆಕ್ಟ್ರಿಕ್ ರೋಲ್ಸ್ ರಾಯ್ಸ್ನಲ್ಲಿ ಸುತ್ತಾಡಬಹುದಾಗಿದೆ.
ನಯನತಾರಾ ನಟನೆಯ ‘ಟೆಸ್ಟ್’ ಹೆಸರಿನ ಸಿನಿಮಾ ಈ ವರ್ಷ ಬಂದಿದೆ. ಈ ವರ್ಷ ಬಂದ ಅವರ ಏಕೈಕ ಸಿನಿಮಾ ಇದಾಗಿದೆ. ಈ ವರ್ಷ ಅವರ ಮತ್ತೆ ಯಾವುದೇ ಸಿನಿಮಾಗಳು ರಿಲೀಸ್ ಆಗದು. 2026ರಲ್ಲಿ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಮಾಡಬಹುದಾಗಿದೆ. ಕನ್ನಡದಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಏಕ ಕಾಲಕ್ಕೆ ಶೂಟ್ ಆಗುತ್ತಾ ಇದೆ. ಮುಂದಿನ ವರ್ಷ ಮಾರ್ಚ್ಗೆ ರಿಲೀಸ್ ಆಗಲಿದೆ. ಇತ್ತೀಚೆಗೆ ನಯನತಾರಾ ಹಾಗೂ ವಿಘ್ನೇಶ್ ಅವರು ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:54 am, Wed, 19 November 25