‘ನೀನು 16 ವರ್ಷ ಮಾತ್ರ ಬದುಕೋದು ಅಂತ ಮೊದಲೇ ತಿಳಿದಿದ್ದರೆ..’: ಮೀರಾ ಸಾವಿಗೆ ತಾಯಿಯ ಭಾವುಕ ಪತ್ರ

‘ಇಂಥ ಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಕಷ್ಟ ಆಗುತ್ತಿದೆ. ಈ ಸಂದರ್ಭದಲ್ಲಿ ನೀವು ಗಟ್ಟಿಯಾಗಿ ಇರಿ. ನಿಮ್ಮ ಮಗಳ ನೆನಪು ನಿಮಗೆ ಶಕ್ತಿ ನೀಡುತ್ತದೆ. ವಿಜಯ್ ಆ್ಯಂಟನಿ ಅವರಿಂದ ಪಾಸಿಟಿವಿಟಿ ಪಡೆಯಿರಿ. ನೆನಪಿನ ಮೂಲಕ ಮೀರಾ ನಿಮ್ಮ ಜೊತೆಯಲ್ಲೇ ಇರುತ್ತಾಳೆ’ ಎಂದು ಅಭಿಮಾನಿಗಳು ಸಾಂತ್ವನ ತಿಳಿಸಿದ್ದಾರೆ.

‘ನೀನು 16 ವರ್ಷ ಮಾತ್ರ ಬದುಕೋದು ಅಂತ ಮೊದಲೇ ತಿಳಿದಿದ್ದರೆ..’: ಮೀರಾ ಸಾವಿಗೆ ತಾಯಿಯ ಭಾವುಕ ಪತ್ರ
ಮೀರಾ
Follow us
ಮದನ್​ ಕುಮಾರ್​
|

Updated on: Oct 10, 2023 | 1:05 PM

ತಮಿಳಿನ ಖ್ಯಾತ ನಟ, ಸಂಗೀತ ನಿರ್ದೇಶಕ ವಿಜಯ್​ ಆ್ಯಂಟನಿ (Vijay Antony) ಅವರ ಮಗಳು ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದು ಇಡೀ ಚಿತ್ರರಂಗಕ್ಕೆ ಆಘಾತ ಉಂಟುಮಾಡಿತು. ಆ ಘಟನೆ ನಡೆದು 20 ದಿನ ಕಳೆದಿದೆ. ಆದರೂ ಅವರ ಕುಟುಂಬದಲ್ಲಿನ ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಮೀರಾ (Meera) ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಈ ನಡುವೆ ವಿಜಯ್ ಆ್ಯಂಟನಿ ಅವರ ಪತ್ನಿ ಫಾತಿಮಾ (Fatima) ಭಾವುಕವಾದ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಮಗಳ ಸಾವಿನ ನೋವನ್ನು ಈ ಮೂಲಕ ಅವರು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್​ ವೈರಲ್​ ಆಗಿದ್ದು, ಜನರು ಕಮೆಂಟ್​ ಮೂಲಕ ಸಾಂತ್ವನ ತಿಳಿಸುತ್ತಿದ್ದಾರೆ.

ಮೀರಾ ಅವರಿಗೆ 16 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಹಾಗೂ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾತಿದೆ. ಆದರೆ ಅವರು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಮಗಳಿಗೆ ಉತ್ತಮವಾದ ಭವಿಷ್ಯ ರೂಪಿಸಿಕೊಡಬೇಕು ಎಂದುಕೊಂಡಿದ್ದ ವಿಜಯ್​ ಆ್ಯಂಟನಿ ಮತ್ತು ಫಾತಿಮಾ ದಂಪತಿಗೆ ತೀವ್ರ ಆಘಾತ ಆಗಿದೆ. ಈಗ ಮಗಳನ್ನು ಮಿಸ್​ ಮಾಡಿಕೊಂಡು ಫಾತಿಮಾ ಅವರು ಈ ಸಾಲುಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯ್​ ಆ್ಯಂಟನಿ ಪುತ್ರಿ ಮೀರಾ ಮೃತದೇಹ ಪತ್ತೆ ಆದಾಗಿಂದ ಡೆತ್​ ನೋಟ್​ ಸಿಗುವವರೆಗೆ ಏನೆಲ್ಲ ಆಯ್ತು? ಇಲ್ಲಿದೆ ವಿವರ..

‘ನೀನು ಕೇವಲ 16 ವರ್ಷ ಮಾತ್ರ ಬದುಕುವುದು ಎಂಬುದು ನನಗೆ ಮೊದಲೇ ತಿಳಿದಿದ್ದರೆ ನಾನು ನಿನ್ನನ್ನು ನನ್ನ ಸನಿಹದಲ್ಲೇ ಇಟ್ಟುಕೊಳ್ಳುತ್ತಿದ್ದೆ. ಸೂರ್ಯ, ಚಂದ್ರರಿಗೂ ನಿನ್ನನ್ನು ತೋರಿಸುತ್ತಿರಲಿಲ್ಲ. ನಾನು ನಿನ್ನ ಯೋಚನೆಯಲ್ಲೇ ಮುಳುಗಿ ಸಾಯುತ್ತಿದ್ದೇನೆ. ನೀನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಅಪ್ಪ-ಅಮ್ಮನ ಬಳಿಗೆ ಮರಳಿ ಬಾ. ಲಾರಾ ನಿನಗಾಗಿ ಕಾಯುತ್ತಿದ್ದಾಳೆ’ ಎಂದು ಬರೆದುಕೊಂಡಿರುವ ಫಾತಿಮಾ ಅವರು ಇದರ ಜೊತೆ ಒಂದು ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ.

‘ಇಂಥ ಸ್ಥಿತಿಯಲ್ಲಿ ನಿಮ್ಮನ್ನು ನೋಡಲು ಕಷ್ಟ ಆಗುತ್ತಿದೆ. ಈ ಸಂದರ್ಭದಲ್ಲಿ ನೀವು ಗಟ್ಟಿಯಾಗಿ ಇರಿ. ನಿಮ್ಮ ಮಗಳ ನೆನಪು ನಿಮಗೆ ಶಕ್ತಿ ನೀಡುತ್ತದೆ. ವಿಜಯ್ ಆ್ಯಂಟನಿ ಅವರಿಂದ ಪಾಸಿಟಿವಿಟಿ ಪಡೆಯಿರಿ. ತಾಯಿಯ ಪ್ರೀತಿ ಎಂಬುದು ಸಮುದ್ರಕ್ಕಿಂತಲೂ ಆಳ. ನೆನಪಿನ ಮೂಲಕ ಮೀರಾ ನಿಮ್ಮ ಜೊತೆಯಲ್ಲೇ ಇರುತ್ತಾಳೆ. ನಿಮಗಾಗಿ ನಾವು ಪ್ರಾರ್ಥಿಸುತ್ತೇವೆ’ ಎಂಬಿತ್ಯಾದಿ ಕಮೆಂಟ್​ಗಳ ಮೂಲಕ ಅಭಿಮಾನಿಗಳು ಸಮಾಧಾನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ