ಮದುವೆಗೆ ಅಭಿಮಾನಿಗಳು ಸೂಚಿಸಿದ ಹೆಸರಿಟ್ಟ ರಶ್ಮಿಕಾ: ಕೊನೆಗೂ ಅಧಿಕೃತ ಘೋಷಣೆ

Rashmika Mandanna and Vijay Deverakonda: ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆ ಆಗುತ್ತಿದ್ದು, ಇತ್ತೀಚೆಗಷ್ಟೆ ಇವರ ಮದುವೆ ರಿಸೆಪ್ಷನ್​​ನ ಆಮಂತ್ರಣ ಪತ್ರಿಕೆಯ ವಿಡಿಯೋ ಸಹ ವೈರಲ್ ಆಗಿತ್ತು. ಇಷ್ಟೆಲ್ಲ ಆದರೂ ಸಹ ಈ ಜೋಡಿ ತಮ್ಮ ಮದುವೆ ಬಗ್ಗೆ ಈ ವರೆಗೆ ಬಹಿರಂಗವಾಗಿ ಬಾಯ್ಬಿಟ್ಟಿರಲಿಲ್ಲ. ಆದರೆ ಕೊನೆಗೂ ನಟಿ ರಶ್ಮಿಕಾ ಇಂದು (ಫೆಬ್ರವರಿ 22) ಮೌನ ಮುರಿದಿದ್ದಾರೆ. ತಮ್ಮ ಮದುವೆಗೆ ಹೆಸರು ಸಹ ಇರಿಸಿಕೊಂಡಿದ್ದಾರೆ.

ಮದುವೆಗೆ ಅಭಿಮಾನಿಗಳು ಸೂಚಿಸಿದ ಹೆಸರಿಟ್ಟ ರಶ್ಮಿಕಾ: ಕೊನೆಗೂ ಅಧಿಕೃತ ಘೋಷಣೆ
Vijay Deverakonda Rashmika

Updated on: Feb 22, 2026 | 10:47 PM

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಸುದ್ದಿ ಕಳೆದ ಕೆಲ ತಿಂಗಳುಗಳಿಂದಲೂ ನಡೆಯುತ್ತಲೇ ಇದೆ. ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ವರ್ಷ ಅಕ್ಟೋಬರ್​​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಸುದ್ದಿ ಹರಿದಾಡಿತು. ಬಳಿಕ ಇಬ್ಬರೂ ಬ್ಯಾಚುಲರ್ ಪಾರ್ಟಿ, ವಿದೇಶಗಳಲ್ಲಿ ಶಾಪಿಂಗ್ ಇತ್ಯಾದಿಗಳೆಂದು ಸುತ್ತಾಡಿದರು. ಇದೀಗ ಈ ಜೋಡಿ ಮದುವೆ ಆಗುತ್ತಿದ್ದು, ಇತ್ತೀಚೆಗಷ್ಟೆ ಇವರ ಮದುವೆ ರಿಸೆಪ್ಷನ್​​ನ ಆಮಂತ್ರಣ ಪತ್ರಿಕೆಯ ವಿಡಿಯೋ ಸಹ ವೈರಲ್ ಆಗಿತ್ತು. ಇಷ್ಟೆಲ್ಲ ಆದರೂ ಸಹ ಈ ಜೋಡಿ ತಮ್ಮ ಮದುವೆ ಬಗ್ಗೆ ಈ ವರೆಗೆ ಬಹಿರಂಗವಾಗಿ ಬಾಯ್ಬಿಟ್ಟಿರಲಿಲ್ಲ. ಆದರೆ ಕೊನೆಗೂ ನಟಿ ರಶ್ಮಿಕಾ ಇಂದು (ಫೆಬ್ರವರಿ 22) ಮೌನ ಮುರಿದಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಅವರು ತಮ್ಮ ಹಾಗೂ ವಿಜಯ್ ದೇವರಕೊಂಡ ಅವರ ಮದವೆಗೆ ಹೆಸರೊಂದನ್ನು ಇರಿಸಿದ್ದಾರೆ. ಆ ಹೆಸರನ್ನು ಸೂಚಿಸಿರುವುದು ಅವರ ಅಭಿಮಾನಿಗಳೇ ಎಂಬುದು ಮತ್ತೊಂದು ವಿಶೇಷ. ಏನು ಆ ಹೆಸರು? ಇಲ್ಲಿದೆ ಓದಿ ಮಾಹಿತಿ…

ರಶ್ಮಿಕಾ ಅವರು ತಮ್ಮ ಹಾಗೂ ವಿಜಯ್ ದೇವಕರೊಂಡ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಷ್’ ಎಂದು ಹೆಸರಿಟ್ಟಿದ್ದಾರೆ. ಅಸಲಿಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಒಟ್ಟಿಗೆ ‘ವಿರೋಷ್’ ಎಂದು ಅವರ ಅಭಿಮಾನಿಗಳು ಕರೆಯುತ್ತಿದ್ದರು. ಅಭಿಮಾನಿಗಳ ಮೇಲಿನ ಪ್ರೀತಿಯ ಕಾರಣಕ್ಕೆ ತಮ್ಮ ಮದುವೆಗೆ ಇದೀಗ ‘ದಿ ವೆಡ್ಡಿಂಗ್ ಆಫ್ ವಿರೋಷ್’ ಎಂದು ರಶ್ಮಿಕಾ ಹೆಸರಿಟ್ಟಿದ್ದಾರೆ ಮಾತ್ರವಲ್ಲದೆ, ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್​​ನಲ್ಲಿ ತಮ್ಮ ಅಭಿಮಾನಿಗಳನ್ನು ಮೆಚ್ಚಿ ಕೊಂಡಾಡಿ, ಅವರಿಗೆ ಧನ್ಯವಾದ ಸಹ ಹೇಳಿದ್ದಾರೆ.

ಇದನ್ನೂ ಓದಿ:ಮದುವೆಗೂ ಮುನ್ನ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಗಡಿಬಿಡಿ; ವಿಡಿಯೋ ವೈರಲ್

ನಮ್ಮ ಅತ್ಯಂತ ಪ್ರೀತಿಯ ಪ್ರೀತಿಪಾತ್ರರೇ, ನಾವು ಯಾವುದೇ ಯೋಜನೆಗಳನ್ನು ಮಾಡುವ ಮೊದಲು,
ನಮಗಾಗಿ ಏನನ್ನಾದರೂ ಆಯ್ಕೆ ಮಾಡುವ ಮೊದಲು- ನೀವು ಈಗಾಗಲೇ ಅಲ್ಲಿರುತ್ತಿದ್ದಿರಿ. ಎಷ್ಟೊಂದು ಪ್ರೀತಿಯಿಂದ, ನೀವು ನಮಗೆ ಒಂದು ಹೆಸರನ್ನು ನೀಡಿದ್ದೀರಿ. ನೀವು ನಮ್ಮನ್ನು ‘ವಿರೋಶ್’ ಎಂದು ಕರೆದಿದ್ದೀರಿ.
ಆದ್ದರಿಂದ ಇಂದು ಪೂರ್ಣ ಹೃದಯದಿಂದ, ನಿಮ್ಮ ಗೌರವಾರ್ಥವಾಗಿ, ನಮ್ಮ ಒಗ್ಗೂಡುವಿಕೆಗೆ ಹೆಸರಿಸುತ್ತಿದ್ದೇವೆ.
ನಾವು ಅದಕ್ಕೆ ಹೆಸರಿಸಲು ಇಷ್ಟಪಡುತ್ತೇವೆ, ‘ದಿ ವೆಡ್ಡಿಂಗ್ ಆಫ್ ವಿರೋಶ್’. ಇಷ್ಟೊಂದು ಪ್ರೀತಿಯಿಂದ ನಮ್ಮನ್ನು ಪ್ರೀತಿಸಿದ್ದಾಕ್ಕಾಗಿ ಧನ್ಯವಾದಗಳು. ನೀವು ನಮ್ಮ ಒಂದು ಭಾಗ, ಯಾವಾಗಲೂ, ಅತ್ಯಂತ ದೊಡ್ಡ ಅಪ್ಪುಗೆಗಳು ಮತ್ತು ಪ್ರೀತಿ’ ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ಇಂದು (ಫೆಬ್ರವರಿ 22) ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಮೊದಲ ದಿನವಂತೆ. ಕೆಲವು ಶಾಸ್ತ್ರಗಳನ್ನು ಇಂದು ಮಾಡಲಾಗುತ್ತಿದ್ದು, ಇಬ್ಬರ ಮೆಹಂದಿ ಶಾಸ್ತ್ರ ಫೆಬ್ರವರಿ 24 ಕ್ಕೆ ನಡೆಯಲಿದೆ. ಬಳಿಕ 25ಕ್ಕೆ ಹಳದಿ ಶಾಸ್ತ್ರ ನಡೆಯಲಿದೆ. ಫೆಬ್ರವರಿ 26ಕ್ಕೆ ಈ ಜೋಡಿಯ ಮದುವೆ ನಡೆಯಲಿದೆ. ಮಾರ್ಚ್ 04ಕ್ಕೆ ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಈ ಜೋಡಿ ಆಯೋಜನೆ ಮಾಡಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ