ಬುಡಕಟ್ಟು ಜನಾಂಗದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಕೇಳಿದ ವಿಜಯ್ ದೇವರಕೊಂಡ

ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದ್ದಾರೆ. ಪಹಲ್ಗಾಮ್ ದಾಳಿಯ ಬಗ್ಗೆ ಮಾತನಾಡುತ್ತಾ ಅವರು ನೀಡಿದ ಹೇಳಿಕೆ ಬುಡಕಟ್ಟು ಜನಾಂಗವನ್ನು ಅವಮಾನಿಸಿದೆ ಎಂಬ ಆರೋಪ ಕೇಳಿಬಂದಿದೆ. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕ್ಷಮೆಯಾಚನೆಯೊಂದಿಗೆ ವಿಜಯ್ ಯಾವುದೇ ಗುಂಪಿನ ವಿರುದ್ಧ ತಾರತಮ್ಯ ಮಾಡುವ ಉದ್ದೇಶ ತಮ್ಮದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬುಡಕಟ್ಟು ಜನಾಂಗದ ಬಗ್ಗೆ ವಿವಾದಾತ್ಮಕ ಹೇಳಿಕೆ; ಕ್ಷಮೆ ಕೇಳಿದ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ

Updated on: May 03, 2025 | 3:09 PM

ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Devarakonda) ಅವರು ಆದಷ್ಟು ವಿವಾದಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಆದಾಗ್ಯೂ ಕೆಲವೊಮ್ಮೆ ವಿವಾದಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಸದ್ಯ ಅವರು ಗೌತಮ್ ತಿನ್ನನುರಿ ನಿರ್ದೇಶನ ಮಾಡುತ್ತಿರುವ ‘ಕಿಂಗ್ಡಮ್’ ಚಿತ್ರದಲ್ಲಿ ನಟಿಸುತ್ತಿದ್ದು, ಮೇ 30ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾ ರಿಲೀಸ್ ಸಂದರ್ಭದಲ್ಲೇ ಅವರು ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಆ ಬಗ್ಗೆ ಚರ್ಚೆ ಬೇಡ ಎಂಬ ಕಾರಣಕ್ಕೆ ಅವರು ಸ್ಪಷ್ಟನೆ ನೀಡಿದ್ದೂ ಅಲ್ಲದೆ, ಕ್ಷಮೆ ಕೇಳಿದ್ದಾರೆ.

ತಮಿಳು ನಟ ಸೂರ್ಯ ಅವರ ‘ರೆಟ್ರೋ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಹೈದರಾಬಾದ್​ನಲ್ಲಿ ನಡೆದಿದೆ. ಇದರಲ್ಲಿ ವಿಜಯ್ ದೇವರಕೊಂಡ ಅತಿಥಿಯಾಗಿ ಬಂದಿದ್ದರು. ಈ ವೇಳೆ ಮಾತನಾಡಿದ್ದ ಅವರು, ಪಹಲ್ಗಾಮ್ ದಾಳಿಯಲ್ಲಿ ಅಮಾಯಕ ಪ್ರವಾಸಿಗರು ಮೃತಪಟ್ಟ ಬಗ್ಗೆ ಬೇಸರ ಹೊಹಾಕಿದ್ದರು. ಅಲ್ಲದೆ, ಅವರಿಗೆ ಸರಿಯಾದ ಶಿಕ್ಷಣ ಕೊಟ್ಟರೆ ಇಂತಹವರು ಬ್ರೇನ್ ವಾಶ್ ಆಗೋದು ತಪ್ಪುತ್ತದೆ ಎಂದಿದ್ದರು. ‘500 ವರ್ಷಗಳ ಹಿಂದೆ ಬುಡಕಟ್ಟು ಜನರು ಸಾಮಾನ್ಯ ಜ್ಞಾನವಿಲ್ಲದೆ ಹೊಡೆದಾಡಿಕೊಳ್ಳುತ್ತಿದ್ದರು. ಈ ಉಗ್ರರು ಕೂಡ ಹಾಗೆಯೇ’ ಎಂದಿದ್ದರು. ವಿಜಯ್ ಅವರು ಬುಡಕಟ್ಟು ಜನರಿಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅವರ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು.

ಇದನ್ನೂ ಓದಿ
‘ಕೆಜಿಎಫ್ 2’ ರಿಲೀಸ್ ಆಗಿ 3 ವರ್ಷವಾದರೂ ನಿಂತಿಲ್ಲ ಟಾಕ್
ಸೋನು ನಿಗಮ್ ಹೇಳಿಕೆಗೆ ಕನ್ನಡಿಗರ ತೀವ್ರ ವಿರೋಧ, ಯಾರು ಏನು ಹೇಳಿದರು?
ಅಜಯ್ ದೇವಗನ್ ನಟನೆಯ ‘ರೇಡ್ 2’ ಒಟಿಟಿಗೆ ಯಾವಾಗ? ಮೊದಲ ದಿನದ ಗಳಿಕೆ ಎಷ್ಟು?
ಖ್ಯಾತ ನಿರ್ದೇಶಕ ರಾಜಮೌಳಿಯ ನೆಚ್ಚಿನ ನಟಿ ಯಾರು ಗೊತ್ತಾ?

ಈಗ ವಿಜಯ್ ಅವರು ಉದ್ದನೆಯ ಪತ್ರ ಬರೆದಿದ್ದಾರೆ. ‘ಇತ್ತೀಚಿನ ರೆಟ್ರೋ ಮೂವಿ ಕಾರ್ಯಕ್ರಮದಲ್ಲಿ ನಾನು ನೀಡಿದ ಹೇಳಿಕೆ ಕೆಲವು ಜನರ ಭಾವನೆಗಳಿಗೆ ನೋವುಂಟು ಮಾಡಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ. ನಾನು ಅವುಗಳ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ನಾನು ಯಾವುದೇ ಸಮುದಾಯ ಅಥವಾ ಬುಡಕಟ್ಟು ಜನಾಂಗವನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ನಾನು ಅವರೆಲ್ಲರನ್ನೂ ತುಂಬಾ ಗೌರವಿಸುತ್ತೇನೆ. ಭಾರತದ ಎಲ್ಲಾ ಜನರು ಒಂದೇ ಎಂದು ನಾನು ಭಾವಿಸುತ್ತೇನೆ. ನಾವೆಲ್ಲರೂ ಒಟ್ಟಿಗೆ ಮುಂದುವರಿಯಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು’ ಎಂದು ವಿಜಯ್ ಹೇಳಿದ್ದಾರೆ.

‘ನಾನು ಯಾವುದೇ ಗುಂಪಿನ ವಿರುದ್ಧ ಎಂದಿಗೂ ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡಿಲ್ಲ. ನಾನು ಅವರೆಲ್ಲರನ್ನೂ ನನ್ನ ಕುಟುಂಬ ಸದಸ್ಯರೆಂದು ಪರಿಗಣಿಸುತ್ತೇನೆ. ಅವರು ನನ್ನ ಸಹೋದರರು. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನನಗೆ ಆ ಬಗ್ಗೆ ವಿಷಾದವಿದೆ. ನಾನು ಬುಡಕಟ್ಟು ಎಂಬ ಪದವನ್ನು ಬೇರೆ ಅರ್ಥದಲ್ಲಿ ಬಳಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ‘ಅರ್ಜುನ್ ರೆಡ್ಡಿ’ ಸ್ಟೈಲ್​ನಲ್ಲಿ ವಿಜಯ್ ದೇವರಕೊಂಡ; ರಿಯಲ್ ರೌಡಿ ಅವತಾರ

ವಿಜಯ್ ಅವರ ಪ್ರಸ್ತುತ ‘ಕಿಂಗ್ಡಮ್’ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಮೇ 30ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಹಾಡು ರಿಲೀಸ್ ಆಗಿ, ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದೆ. ಈ ಸಿನಿಮಾಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.